ಡಾ. ರಾಜ್ ಭೇಟಿ ಮಾಡಿದ್ದ ದ್ರಾವಿಡ್, ಶ್ರೀನಾಥ್, ಕುಂಬ್ಳೆ; ಅಪರೂಪದ ಮಾಹಿತಿ ತೆರೆದಿಟ್ಟ ರಾಘಣ್ಣ
Raj Cup: ಅಂದಿನ ಟೀಮ್ ಇಂಡಿಯಾ ಆಟಗಾರರಾದ ದ್ರಾವಿಡ್, ಶ್ರೀನಾಥ್, ಅನಿಲ್ ಕುಂಬ್ಳೆ ಮುಂತಾದವರು ಡಾ. ರಾಜ್ಕುಮಾರ್ ನಿವಾಸಕ್ಕೆ ಬಂದಿದ್ದರು. ಆ ಘಟನೆಯನ್ನು ರಾಘವೇಂದ್ರ ರಾಜ್ಕುಮಾರ್ ಮೆಲುಕು ಹಾಕಿದ್ದಾರೆ.
ಕ್ರಿಕೆಟ್ ಮತ್ತು ಸಿನಿಮಾರಂಗದ ನಡುವೆ ಮೊದಲಿನಿಂದಲೂ ನಂಟು ಇದೆ. ಡಾ. ರಾಜ್ಕುಮಾರ್ (Dr Rajkumar) ಅವರಿಗೂ ಕ್ರಿಕೆಟ್ ಬಗ್ಗೆ ಆಸಕ್ತಿ ಇತ್ತು. ತಮ್ಮ ಬದುಕಿನ ಕೊನೇ ದಿನಗಳಲ್ಲಿ ಅವರು ಹೆಚ್ಚಾಗಿ ಕ್ರಿಕೆಟ್ ನೋಡುತ್ತಿದ್ದರು. ಆಗ ಟೀಮ್ ಇಂಡಿಯಾ ಆಟಗಾರರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ರಾಹುಲ್ ದ್ರಾವಿಡ್ (Rahul Dravid), ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಮುಂತಾದವರು ಅಣ್ಣಾವ್ರ ನಿವಾಸಕ್ಕೆ ಬಂದಿದ್ದರು ಎಂಬ ಮಾಹಿತಿಯನ್ನು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರು ಹಂಚಿಕೊಂಡಿದ್ದಾರೆ. ಡಾ. ರಾಜ್ ಮತ್ತು ಕ್ರಿಕೆಟಿಗರ ನಡುವೆ ಅಂದು ನಡೆದ ಮಾತುಕತೆ ಏನು ಎಂಬುದನ್ನು ಕೂಡ ರಾಘಣ್ಣ ವಿವರಿಸಿದ್ದಾರೆ. ರಾಜ್ ಕಪ್ ಸೀಸನ್-5ರ ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ವಿಚಾರ ತೆರೆದಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ಕಲಾವಿದರು ಈ ಟೂರ್ನಿಯಲ್ಲಿ ಆಟವಾಡಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 02, 2022 09:45 AM
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್ನ್ಯೂಸ್: ವಿಡಿಯೋ ನೋಡಿ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

