‘ಕನ್ನಡ ಚಿತ್ರರಂಗ ಅತಿ ಕಳಪೆ’ ಎಂದವರಿಗೆ ಚೇತನ್​ ಬೆಂಬಲ; ಖಡಕ್​ ಎಚ್ಚರಿಕೆ ಕೊಟ್ಟ ರಕ್ಷಿತ್​ ಶೆಟ್ಟಿ

ಆಕ್ಷೇಪಾರ್ಹ ಟ್ವೀಟ್​ಗೆ ನಟ ಚೇತನ್​ ಸಹಮತ ಸೂಚಿಸಿದ್ದಾರೆ. ಅದನ್ನು ಗಮನಿಸಿರುವ ರಕ್ಷಿತ್​ ಶೆಟ್ಟಿ ಅವರು ತುಂಬ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಈಗ ಚರ್ಚೆಗೆ ಕಾರಣ ಆಗಿದೆ.

‘ಕನ್ನಡ ಚಿತ್ರರಂಗ ಅತಿ ಕಳಪೆ’ ಎಂದವರಿಗೆ ಚೇತನ್​ ಬೆಂಬಲ; ಖಡಕ್​ ಎಚ್ಚರಿಕೆ ಕೊಟ್ಟ ರಕ್ಷಿತ್​ ಶೆಟ್ಟಿ
ರಕ್ಷಿತ್​ ಶೆಟ್ಟಿ, ಚೇತನ್​
Follow us
TV9 Web
| Updated By: ಮದನ್​ ಕುಮಾರ್​

Updated on: Jun 14, 2021 | 3:32 PM

ನಟ ‘ಆ ದಿನಗಳು’ ಚೇತನ್​ ಅವರು ಆಗಾಗ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಸಿದ್ಧಾಂತಗಳ ಕಾರಣಕ್ಕಾಗಿ ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೆ ಕೆಲವು ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿರುವ ಚೇತನ್​ ಈಗ ರಕ್ಷಿತ್​ ಶೆಟ್ಟಿಯ ಅಸಮಾಧಾನಕ್ಕೆ ಕಾರಣ ಆಗಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಬೆಂಬಲಿಸಿದ ಕಾರಣಕ್ಕೆ ಅನೇಕರು ಚೇತನ್​ ವಿರುದ್ಧ ಕಿಡಿಕಾರುತ್ತಿದ್ದಾರೆ.

‘ದಕ್ಷಿಣ ಭಾರತದಲ್ಲೇ ಅತಿ ಕೆಟ್ಟ ಚಿತ್ರರಂಗವಾದ ಕನ್ನಡ ಫಿಲ್ಮ್​ ಇಂಡಸ್ಟ್ರಿಯಲ್ಲಿ ಕೊನೆಗೂ ಭರವಸೆ ಮೂಡಿದೆ. ಕನ್ನಡ ಸಿನಿಮಾ ಎಂಬ ಮರುಭೂಮಿಯಲ್ಲಿ ಚೇತನ್​ ಅಹಿಂಸಾ ಅವರು ಮಳೆಯಂತೆ ಇದ್ದಾರೆ’ ಎಂದು ವ್ಯಕ್ತಿಯೊಬ್ಬರು ಮಾಡಿದ ಟ್ವೀಟ್​ಗೆ ಚೇತನ್​ ಸಹಮತ ಸೂಚಿಸಿದ್ದರು. ‘ನಿಮ್ಮ ಮಾತಿಗೆ ಧನ್ಯವಾದಗಳು. ನೀವು ಆಡಿದ ಮಾತು ಕಟುವಾಗಿದ್ದರೂ ಅದನ್ನು ರಚನಾತ್ಮಕ ಪ್ರತಿಕ್ರಿಯೆ ಎಂದು ಪರಿಗಣಿಸುತ್ತೇವೆ’ ಎಂದು ಚೇತನ್​ ಪ್ರತಿಕ್ರಿಯೆ ನೀಡಿದ್ದರು. ಅದೇ ಈಗ ಅಸಮಾಧಾನಕ್ಕೆ ಕಾರಣ ಆಗಿದೆ.

(ಚೇತನ್​ ಟ್ವೀಟ್​)

ಈ ಟ್ವೀಟ್​ ಗಮನಿಸಿರುವ ರಕ್ಷಿತ್​ ಶೆಟ್ಟಿ ಅವರು ತುಂಬ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಚೇತನ್​ ಅವರೇ, ನಿಮ್ಮ ಕೆಲಸಗಳಿಂದಾಗಿ ನಿಮ್ಮನ್ನು ನಾನು ಗೌರವಿಸುತ್ತೇನೆ. ಆದರೆ ನೀವು ನಿಮ್ಮ ಆಲೋಚನೆಯನ್ನು ಸರಿಮಾಡಿಕೊಳ್ಳಿ. ಕೆಟ್ಟದನ್ನು ಬಿತ್ತಿದ ಕಡೆಯೇ ಕೆಡುಕು ಬೆಳೆಯುತ್ತದೆ’ ಎಂದು ರಕ್ಷಿತ್​ ಶೆಟ್ಟಿ ತಿರುಗೇಟು ನೀಡಿದ್ದಾರೆ.

‘ನನಗೆ ಈ ಸಿನಿಮಾ ಇಂಡಸ್ಟ್ರೀ ವೇದಿಕೆ ಒದಗಿಸಿಕೊಟ್ಟಿದೆ. ನಮಗಿಂತ ಮೊದಲು ಎಷ್ಟೋ ದಿಗ್ಗಜರು ಕಟ್ಟಿದ ವೇದಿಕೆ ಇದು. ಅದರ ಬಗ್ಗೆ ನಿಮಗೆ ತಿಳಿದಿಲ್ಲ. ಏನೂ ಇಲ್ಲದ ನಮಗೆ ಇಂದು ಈ ಚಿತ್ರರಂಗ ಬದುಕು ಕೊಟ್ಟಿದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಇದೇ ಜೀವನ’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್​ ಆರೋಪ; ನಟ ಚೇತನ್​ ಬಂಧನಕ್ಕೆ ಶಿವರಾಮ್​ ಹೆಬ್ಬಾರ್​ ಒತ್ತಾಯ

ನಟ ಚೇತನ್ ಹೇಳಿಕೆ ಬ್ರಾಹ್ಮಣ ಸಮುದಾಯಕ್ಕೆ ನೋವು ತಂದಿದೆ, ಅವರು ಕ್ಷಮೆ ಕೇಳಬೇಕು; ಪೊಲೀಸ್ ಆಯುಕ್ತರಿಗೆ ದೂರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ