AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best of Mani Ratnam: ಮಣಿರತ್ನಂ ಜನ್ಮದಿನ; ‘ಪಲ್ಲವಿ ಅನುಪಲ್ಲವಿ’ ನಿರ್ದೇಶಕನ ಈ 10 ಸೂಪರ್ ಹಿಟ್ ಸಿನಿಮಾಗಳನ್ನು ಮಿಸ್ ಮಾಡಲೇಬೇಡಿ 

Mani Ratnam Birthday: ಮಣಿರತ್ನಂ 1983 ರಲ್ಲಿ ತಮ್ಮ ಮೊದಲ ಚಿತ್ರ 'ಪಲ್ಲವಿ ಅನುಪಲ್ಲವಿ'ಯನ್ನು ನಿರ್ದೇಶಿಸಿದರು. ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಮಣಿರತ್ನಂ ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. ಅವರ ಅತ್ಯುತ್ತಮ 10 ಚಿತ್ರಗಳ ಪಟ್ಟಿ ಇಲ್ಲಿದೆ.

Best of Mani Ratnam: ಮಣಿರತ್ನಂ ಜನ್ಮದಿನ; ‘ಪಲ್ಲವಿ ಅನುಪಲ್ಲವಿ’ ನಿರ್ದೇಶಕನ ಈ 10 ಸೂಪರ್ ಹಿಟ್ ಸಿನಿಮಾಗಳನ್ನು ಮಿಸ್ ಮಾಡಲೇಬೇಡಿ 
ಮಣಿ ರತ್ನಂ
TV9 Web
| Edited By: |

Updated on:Jun 02, 2022 | 7:36 AM

Share

ಇಂದು (ಜೂ.2) ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಜನ್ಮದಿನ. ಭಾರತ ಕಂಡ ಖ್ಯಾತ ನಿರ್ದೇಶಕರಲ್ಲಿ ಅವರೂ ಒಬ್ಬರು ಎಂದು ನಿಸ್ಸಂಶಯವಾಗಿ ಹೇಳಬಹುದು. ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಕುಟುಂಬದಿಂದ ಬಂದಿದ್ದರೂ ಕೂಡ ಮೊದಮೊದಲಿಗೆ ಮಣಿರತ್ನಂ ಚಿತ್ರರಂಗದಲ್ಲಿ ಕೆಲಸ ಮಾಡಲು ಮುಂದಾಗಿರಲಿಲ್ಲ. ಬದಲಾಗಿ, ಮುಂಬೈನ ಜಮ್ನಾಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಅಧ್ಯಯನ ಮಾಡಿದರು. ನಂತರ ಚೆನ್ನೈನಲ್ಲಿ ಮ್ಯಾನೇಜ್‌ಮೆಂಟ್ ಸಲಹೆಗಾರರಾಗಿ ಕೆಲಸ ಮಾಡಿದರು. ‘ಯುವಕನಾಗಿದ್ದಾಗ ಚಲನಚಿತ್ರಗಳಲ್ಲಿ ಸಮಯ ಕಳೆಯೋದು ವ್ಯರ್ಥ ಅನ್ನಿಸುತ್ತಿತ್ತು’ ಎಂದು ಅವರು ಒಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಚಲನಚಿತ್ರ ನಿರ್ಮಾಪಕರಾಗಿರುವ ಅವರ ಚಿಕ್ಕಪ್ಪ ವೀನಸ್ ಕೃಷ್ಣಮೂರ್ತಿಯವರೊಂದಿಗೆ ಕೆಲ ಸಮಯ ಕೆಲಸ ಮಾಡಿದ ನಂತರ ಮಣಿರತ್ನಂ 1983 ರಲ್ಲಿ ತಮ್ಮ ಮೊದಲ ಚಿತ್ರ ‘ಪಲ್ಲವಿ ಅನುಪಲ್ಲವಿ’ಯನ್ನು ನಿರ್ದೇಶಿಸಿದರು. ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಮಣಿರತ್ನಂ ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ.

ಮಣಿರತ್ನಂ ಇದುವರೆಗೆ ಸುಮಾರು 26ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸುಮಾರು 500 ಕೋಟಿ ರೂ ವೆಚ್ಚದಲ್ಲಿ ತಯಾರಾಗುತ್ತಿದ್ದು, ಈ ವರ್ಷದ ಸೆಪ್ಟೆಂಬರ್​ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. 66 ವರ್ಷದ ಮಣಿ ರತ್ನಂ ಇದುವರೆಗೆ ನಿರ್ದೇಶಿಸಿದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿವೆ. ಸಾಮಾಜಿಕ ಹಾಗೂ ರಾಜಕೀಯ ಹಿನ್ನೆಲೆಯಲ್ಲಿ ಪ್ರೇಮ ಕತೆಗಳನ್ನು ಹೇಳುವ ಅವರ ಕಲೆಗೆ ಚಿತ್ರಪ್ರೇಮಿಗಳು ಮಾರುಹೋಗಿದ್ದಾರೆ. ಮಣಿರತ್ನಂ ನಿರ್ದೇಶಿಸಿದ, ಮಿಸ್ ಮಾಡಲೇಬಾರದ 10 ಚಿತ್ರಗಳ ಪಟ್ಟಿ ಇಲ್ಲಿದೆ.

  1. ಮೌನ ರಾಗಂ (1986): ‘ಮೌನ ರಾಗಂ’ ಚಿತ್ರಕ್ಕಾಗಿ ಮಣಿ ರತ್ನಂ ಅವರಿಗೆ ಅತ್ಯುತ್ತಮ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಯುವತಿಯೋರ್ವಳಿಗೆ ಮದುವೆಯಾಗಲು ಒತ್ತಾಯಿಸುವ ಕತೆಯನ್ನು ಇದು ಹೊಂದಿದೆ.
  2. ನಾಯಕನ್ (1987): ಮಣಿರತ್ನಂ ಬರೆದು ನಿರ್ದೇಶಿಸಿದ ಈ ಚಿತ್ರವು ಸಾಮಾನ್ಯ ವ್ಯಕ್ತಿಯೊಬ್ಬ ಡಾನ್ ಆಗುವ ಕತೆ ಹೊಂದಿದೆ. ಇದು ‘ದಿ ಗಾಡ್‌ಫಾದರ್’ (1972) ಚಿತ್ರದಿಂದ ಸ್ಪೂರ್ತಿ ಪಡೆದಿದೆ. 1987ರ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ‘ನಾಯಕನ್’ ಚಿತ್ರವು ಅತ್ಯುತ್ತಮ ನಟ, ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
  3. ಇದನ್ನೂ ಓದಿ
    Image
    JK: ಜೆಕೆ ಮದುವೆಯ ಬಗ್ಗೆ ಹರಿದಾಡುತ್ತಿದೆ ವದಂತಿ; ಸ್ಪಷ್ಟನೆ ನೀಡಿದ ನಟ ಹೇಳಿದ್ದೇನು?
    Image
    Samrat Prithviraj: ಅಕ್ಷಯ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ಗೆ ಹಿನ್ನಡೆ; ಈ ದೇಶಗಳಲ್ಲಿ ಚಿತ್ರ ಬ್ಯಾನ್​
    Image
    KK’s funeral: ಜೂನ್ 2ರಂದು ಮುಂಬೈನಲ್ಲಿ ಗಾಯಕ ಕೆಕೆ ಅಂತ್ಯಕ್ರಿಯೆ
    Image
    Hansika Motwani: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಹನ್ಸಿಕಾ; ‘ಬಿಂದಾಸ್’ ಬೆಡಗಿಯ ಫೋಟೋಗಳು ವೈರಲ್​
  4. ಅಂಜಲಿ (1990): ಮಾರಣಾಂತಿಕ ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನೊಂದಿಗೆ ವ್ಯವಹರಿಸಬೇಕಾದ ಕುಟುಂಬದ ಕತೆಯನ್ನು ‘ಅಂಜಲಿ’ ಚಿತ್ರದಲ್ಲಿ ಹೇಳಲಾಗಿತ್ತು. ಈ ಚಿತ್ರ ಅತ್ಯುತ್ತಮ ಬಾಲ ಕಲಾವಿದೆ, ಅತ್ಯುತ್ತಮ ಆಡಿಯೋಗ್ರಫಿ ಮತ್ತು ತಮಿಳಿನ ಅತ್ಯುತ್ತಮ ಚಲನಚಿತ್ರ ವಿಭಾಗಗಳಲ್ಲಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
  5. ರೋಜಾ (1992): ಮಣಿರತ್ನಂ ನಿರ್ದೇಶನದ ಮೂರು ಸರಣಿ ಚಿತ್ರಗಳಲ್ಲಿ ‘ರೋಜಾ’ ಮೊದಲನೆಯದು. ರಾಜಕೀಯ ಮತ್ತು ಭಯೋತ್ಪಾದನೆಯ ನಡುವೆಯೇ ಹುಟ್ಟುವ ಪ್ರೀತಿಯನ್ನು ಚಿತ್ರ ಕಟ್ಟಿಕೊಟ್ಟಿತ್ತು. ಎಆರ್ ರೆಹಮಾನ್ ಅವರ ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಸಾಹಿತ್ಯ ಮತ್ತು ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರ ಸೇರಿದಂತೆ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಚಿತ್ರ ಗೆದ್ದುಕೊಂಡಿತ್ತು.
  6. ಬಾಂಬೆ (1995): ಬಾಬರಿ ಮಸೀದಿ ಧ್ವಂಸದ ನಂತರ ಹಿಂದೂ-ಮುಸ್ಲಿಂ ಗಲಭೆಗಳ ಮಧ್ಯೆ ಹಿಂದೂ ಹುಡುಗ ಮತ್ತು ಮುಸ್ಲಿಂ ಹುಡುಗಿಯ ನಡುವಿನ ಪ್ರೇಮಕಥೆಯನ್ನು ಮಣಿರತ್ನಂ ಕಟ್ಟಿಕೊಟ್ಟಿದ್ದರು. ‘ರೋಜಾ’ ಚಿತ್ರದಂತೆ ‘ಬಾಂಬೆ’ ಕೂಡ ಅತ್ಯುತ್ತಮ ಚಲನಚಿತ್ರ ಸಂಕಲನದ ಜೊತೆಗೆ ಏಕೀಕರಣದ ಉದ್ದೇಶ ಹೊಂದಿದ ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
  7. ದಿಲ್ ಸೆ (1998): ‘ದಿಲ್​ ಸೆ’ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳೊಂದಿಗೆ ಚಿತ್ರವು ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
  8. ಅಲೈಪಾಯುದೆ (2000): ಮಣಿರತ್ನಂ ಅವರ ಶ್ರೇಷ್ಠ ಹಿಟ್ ಚಿತ್ರಗಳಲ್ಲಿ ‘ಅಲೈಪಾಯುದೆ’ ಕೂಡ ಒಂದು. ಇಬ್ಬರು ಪ್ರಬುದ್ಧ ವಯಸ್ಕರು ಪ್ರೀತಿಸಿ ಮದುವೆಯಾಗುವ ಕಥೆ ಇದು. ಮಣಿ ರತ್ನಂ ಅವರ ಅಂದಿನ ಸಹಾಯಕ ನಿರ್ದೇಶಕ ಶಾದ್ ಅಲಿ ಅವರು ಈ ಚಿತ್ರವನ್ನು ಹಿಂದಿಯಲ್ಲಿ ‘ಸಾಥಿಯಾ’ ಎಂದು ರೀಮೇಕ್ ಮಾಡಿದರು.
  9. ಕನ್ನತಿಲ್ ಮುತ್ತಮಿತ್ತಲ್ (2002): ಈ ಚಿತ್ರವು ಶ್ರೀಲಂಕಾದ ಅಂತರ್ಯುದ್ಧಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮತ್ತು ದತ್ತು ಪಡೆದ ಮಗು ತನ್ನ ನೈಜ ತಾಯಿಯನ್ನು ಭೇಟಿಯಾಗಲು ಬಯಸುವ ಕತೆ ಹೊಂದಿದೆ. ಈ ಚಿತ್ರವು ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
  10. ಯುವ (2004): ಈ ಚಿತ್ರವು ಮಣಿರತ್ನಂ ಚಿತ್ರಗಳ ಕಥನ ಶೈಲಿಯ ನಿರೂಪಣೆ, ಸಿನಿಮಾಟೋಗ್ರಫಿ ಮತ್ತು ಎಡಿಟಿಂಗ್​ನಲ್ಲಿ ಒಂದು ಕಲಾತ್ಮಕ ಮೈಲುಗಲ್ಲು ಎನ್ನಬಹುದು. ರಾಜಕೀಯ ಥ್ರಿಲ್ಲರ್ ವಸ್ತು ಹೊಂದಿರುವ ಈ ಚಲನಚಿತ್ರ ಸಮಾಜದ ವಿವಿಧ ಸ್ತರಗಳ ಮೂರು ಪುರುಷರ ಸುತ್ತ ಸುತ್ತುತ್ತದೆ.
  11. ಗುರು (2007): ‘ಗುರು’ ಚಿತ್ರವು ಕೈಗಾರಿಕಾ ಉದ್ಯಮಿ ಧೀರೂಭಾಯಿ ಅಂಬಾನಿ ಅವರ ಜೀವನ ಕಥೆ ಆಧರಿಸಿದ್ದು ಎಂಬ ವದಂತಿಗಳಿವೆ. ಆದರೆ ಮಣಿ ರತ್ನಂ ಅಂತಹ ವರದಿಗಳನ್ನು ತಳ್ಳಿ ಹಾಕಿದ್ದಾರೆ. ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ನಟನೆಯ ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 am, Thu, 2 June 22

ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ