AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonakshi Sinha Birthday: ದಪ್ಪ ಎಂಬ ಕಾರಣಕ್ಕೆ ಸೋನಾಕ್ಷಿ ಸಿನ್ಹಾ ಎದುರಿಸಿದ ಟೀಕೆಗಳು ಒಂದೆರಡಲ್ಲ

ನಟಿ ಸೋನಾಕ್ಷಿ ಸಿನ್ಹಾ ಅವರ ಜನ್ಮದಿನಕ್ಕೆ (ಜೂನ್​ 2) ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ನೆಚ್ಚಿನ ನಟಿಯ ‘ಡಬಲ್​ ಎಕ್ಸ್​ಎಲ್​’ ಚಿತ್ರದ ಮೇಲೆ ಫ್ಯಾನ್ಸ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Sonakshi Sinha Birthday: ದಪ್ಪ ಎಂಬ ಕಾರಣಕ್ಕೆ ಸೋನಾಕ್ಷಿ ಸಿನ್ಹಾ ಎದುರಿಸಿದ ಟೀಕೆಗಳು ಒಂದೆರಡಲ್ಲ
ಸೋನಾಕ್ಷಿ ಸಿನ್ಹಾ
TV9 Web
| Edited By: |

Updated on:Jun 02, 2022 | 9:00 AM

Share

ಖ್ಯಾತ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಅವರು ತುಂಬ ಚ್ಯೂಸಿ. ಸ್ಟಾರ್​ ನಟ ಶತ್ರುಘ್ನ ಸಿನ್ಹಾ ಪುತ್ರಿ ಎಂಬ ಕಾರಣಕ್ಕೆ ಅವರ ಬಾಲಿವುಡ್​ ಎಂಟ್ರಿ ಸುಲಭವಾಯಿತು. ಆದರೆ ನಂತರದ ದಿನಗಳಲ್ಲಿ ಅನೇಕ ಏಳು-ಬೀಳುಗಳನ್ನು ಕಂಡು ಅವರು ಈವರೆಗೆ ಬಂದಿದ್ದಾರೆ. ಇಂದು (ಜೂನ್​ 2) ಸೋನಾಕ್ಷಿ ಸಿನ್ಹಾ ಅವರಿಗೆ ಜನ್ಮದಿನದ (Sonakshi Sinha Birthday) ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು, ಸ್ನೇಹಿತರು, ಕುಟುಂಬದವರು ಶುಭ ಕೋರುತ್ತಿದ್ದಾರೆ. 35ನೇ ವಸಂತಕ್ಕೆ ಕಾಲಿಟ್ಟಿರುವ ಸೋನಾಕ್ಷಿ ಅವರು ಸದ್ಯ ‘ಡಬಲ್​ ಎಕ್ಸ್​ಎಲ್​’ (Double XL Movie) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಶೇಷವಾದ ಕಥಾ ಹಂದರ ಇದೆ ಎನ್ನಲಾಗಿದೆ. ಅದು ಸೋನಾಕ್ಷಿ ಸಿನ್ಹಾ ಅವರ ರಿಯಲ್​ ಲೈಫ್​ಗೆ ಹೆಚ್ಚು ಹತ್ತಿರವಾಗಿದೆ ಎಂಬುದು ವಿಶೇಷ. ಆ ಬಗ್ಗೆ ಅವರು ‘ಇಂಡಿಯನ್​ ಎಕ್ಸ್​ಪ್ರೆಸ್​’ಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬಾಡಿ ಶೇಮಿಂಗ್ ಮಾಡುವವರಿಂದ ನಟಿಯರು ಆಗಾಗ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಸೋನಾಕ್ಷಿ ಸಿನ್ಹಾ ಅವರಿಗೂ ಇದು ತಪ್ಪಿದ್ದಲ್ಲ. ಬೇರೆ ನಟಿಯರಿಗೆ ಹೋಲಿಸಿದ್ದಾರೆ ಸೋನಾಕ್ಷಿ ಅವರು ಕೊಂಚ ದಪ್ಪಗಿದ್ದಾರೆ. ಅದಕ್ಕಾಗಿ ನೆಟ್ಟಿಗರು ಅನೇಕ ಬಾರಿ ನೆಗೆಟಿವ್​ ಕಮೆಂಟ್​ಗಳನ್ನು ಮಾಡುತ್ತಾರೆ. ಹಾಗಂತ ಸೋನಾಕ್ಷಿ ಅವರಿಗೆ ಇದು ಹೊಸದಲ್ಲ. ಚಿಕ್ಕ ವಯಸ್ಸಿನಲ್ಲೂ ಅವರು ದಪ್ಪಗಿದ್ದರು. ಆ ಕಾರಣಕ್ಕಾಗಿ ಅನೇಕ ಟೀಕೆಗಳನ್ನು ಅವರು ಜನರಿಂದ ಕೇಳಬೇಕಾಯಿತು.

‘ದಪ್ಪ ಹುಡುಗಿಯಾಗಿರುವುದು ಕಷ್ಟ. ಯಾಕೆಂದರೆ ನಮ್ಮ ಮೇಲೆ ನಾವೇ ಅನುಮಾನ ಪಡುವಂತಹ ವಿಚಾರಗಳನ್ನೇ ನಮ್ಮ ಸುತ್ತಮುತ್ತ ಬಿಂಬಿಸಲಾಗುತ್ತದೆ. ನಿರ್ದಿಷ್ಟ ಸೈಜ್​ನಲ್ಲಿ ಇದ್ದರೆ ಮಾತ್ರವೇ ಸೌಂದರ್ಯ ಎಂದು ಹೇಳಲಾಗುತ್ತದೆ. ಈ ವಿಷಯದ ಕುರಿತಾಗಿಯೇ ‘ಡಬಲ್​ ಎಕ್ಸ್​ಎಲ್​’ ಸಿನಿಮಾ ಮೂಡಿಬರುತ್ತಿದೆ. ಜೀವನದ ಬಹುತೇಕ ಸಂದರ್ಭದಲ್ಲಿ ನಾನು ಎದುರಿಸಿದ ಸಂಗತಿಗಳೇ ಈ ಚಿತ್ರದಲ್ಲಿ ಇರುವುದರಿಂದ ನನಗೆ ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ಹೆಚ್ಚು ಖುಷಿ ಇದೆ’ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

ಇದನ್ನೂ ಓದಿ
Image
Viral Photo: ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿರುವ ನಟಿ ಸೋನಾಕ್ಷಿ ಸಿನ್ಹಾ ಅವರ ಮಾಲ್ಡಿವ್ಸ್ ಫೋಟೋಗಳು ವೈರಲ್
Image
ಸೋನಾಕ್ಷಿ ಸಿನ್ಹಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾದ ಜಹೀರ್ ಇಕ್ಬಾಲ್ ಯಾರು?
Image
‘ನನ್ನ ಕನ್ಯತ್ವ ಮಾರಾಟ ಮಾಡಿ ಸೋನಾಕ್ಷಿ ಸ್ಟಾರ್ ಆಗಿದ್ದಾರೆ’; ಶತ್ರುಘ್ನ ಸಿನ್ಹಾ ಕುಟುಂಬದ ಮೇಲೆ ಮಾಜಿ ಬಿಗ್​ಬಾಸ್ ಸ್ಪರ್ಧಿಯ ಗಂಭೀರ ಆರೋಪ
Image
ಸೋನಾಕ್ಷಿ ಸಿನ್ಹಾಗೆ ಬಂಧನ ಭೀತಿ; ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದ ಕೋರ್ಟ್​: ಏನಿದು ಕೇಸ್​?

‘ದಬಂಗ್’​ ಸಿನಿಮಾದಲ್ಲಿ ಸಲ್ಮಾನ್​ ಖಾನ್​, ‘ರೌಡಿ ರಾಥೋರ್​’ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ‘ಸನ್​ ಆಫ್​ ಸರ್ದಾರ್’ ಸಿನಿಮಾದಲ್ಲಿ ಅಜಯ್​ ದೇವಗನ್​, ‘ಲೂಟೇರಾ’ ಚಿತ್ರದಲ್ಲಿ ರಣವೀರ್​ ಸಿಂಗ್​ ಮುಂತಾದ ಸ್ಟಾರ್​ ನಟರ ಜೊತೆ ನಟಿಸಿದ ಖ್ಯಾತಿ ಸೋನಾಕ್ಷಿ ಸಿನ್ಹಾ ಅವರಿಗೆ ಸಲ್ಲುತ್ತದೆ. ಅನೇಕ ಪ್ರತಿಭಾವಂತ ನಿರ್ದೇಶಕರ ಜೊತೆ ಅವರು ಕೆಲಸ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:00 am, Thu, 2 June 22

Follow Us
TV9 Web
TV9 Web

TV9 Kannada

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ