AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಹರ್ಷನ ಮದುವೆ ಆಗಲು ವರುಧಿನಿ ಹೊಸ ಪ್ಲ್ಯಾನ್​; ಕೊನೇ ಕ್ಷಣದಲ್ಲಿ ವಧು ಬದಲು?

ಹರ್ಷನಿಗೆ ವರುಧಿನಿಯ ಮೇಲೆ ಪ್ರೀತಿ ಮೂಡಿಲ್ಲ. ಇದನ್ನು ಹರ್ಷ ಅನೇಕ ಬಾರಿ ಹೇಳಿದ್ದಾನೆ. ಆದರೆ, ವರುಧಿನಿ ಇದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

 ಹರ್ಷನ ಮದುವೆ ಆಗಲು ವರುಧಿನಿ ಹೊಸ ಪ್ಲ್ಯಾನ್​; ಕೊನೇ ಕ್ಷಣದಲ್ಲಿ ವಧು ಬದಲು?
ವರು-ಹರ್ಷ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jun 02, 2022 | 1:18 PM

Share

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಹಾಗೂ ಭುವಿ ಮದುವೆಗೆ ದಿನಾಂಕ ನಿಗದಿ ಆಗಿದೆ. ಶೀಘ್ರದಲ್ಲೇ ಇಬ್ಬರೂ ಹಸೆಮಣೆ ಏಲಿದ್ದಾರೆ. ಇವರ ಮದುವೆಯನ್ನು ನಡೆಸಿಕೊಡುವ ಜವಾಬ್ದಾರಿ ವರುಧಿನಿಗೆ ನೀಡಲಾಗಿದೆ. ಇದು ಕಳ್ಳನ ಕೈಗೆ ಮನೆಯ ಕೀ ಕೊಟ್ಟಂತೆ ಆಗಿದೆ. ಹರ್ಷನನ್ನು ಮದುವೆ ಆಗೋಕೆ ವರುಧಿನಿ ಬೇರೆಯದೇ ಪ್ಲ್ಯಾನ್ ರೂಪಿಸುತ್ತಿದ್ದಾಳೆ. ಹೀಗಾಗಿ, ಹಸೆಮಣೆ ಮೇಲೆ ಕೊನೆಯ ಕ್ಷಣದಲ್ಲಿ ವಧು ಬದಲಾದರೂ ಅಚ್ಚರಿ ಏನಿಲ್ಲ. ಸದ್ಯ, ಹೊಸಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿರುವ ‘ಕನ್ನಡತಿ’ಯ ಕಥೆಗೆ ಮತ್ತೊಂದು ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.

ಹರ್ಷ ಹಾಗೂ ಭುವಿ ಪರಸ್ಪರ ಪ್ರೀತಿಸುತ್ತಿದ್ದವರು. ಇತ್ತೀಚೆಗೆ ಅವರ ನಿಶ್ಚಿತಾರ್ಥ ಕೂಡ ನಡೆದಿದೆ. ವರುಧಿನಿ ಕೂಡ ಹರ್ಷನನ್ನು ಪ್ರೀತಿ ಮಾಡುತ್ತಿದ್ದಾಳೆ. ಆದರೆ, ಒಂದು ದಿನವೂ ಹರ್ಷನಿಗೆ ವರುಧಿನಿಯ ಮೇಲೆ ಪ್ರೀತಿ ಮೂಡಿಲ್ಲ. ಇದನ್ನು ಹರ್ಷ ಅನೇಕ ಬಾರಿ ಹೇಳಿದ್ದಾನೆ. ಆದರೆ, ವರುಧಿನಿ ಇದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹರ್ಷನನ್ನು ಪಡೆದುಕೊಳ್ಳೋಕೆ ಕೊನೆಯ ಕ್ಷಣದವರೆಗೂ ಹೊಸಹೊಸ ಪ್ಲ್ಯಾನ್ ರೂಪಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ.

ಇದನ್ನೂ ಓದಿ: ‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ

ಇದನ್ನೂ ಓದಿ
Image
‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ
Image
ಮತ್ತೊಂದು ಚಿತ್ರ ಒಪ್ಪಿಕೊಂಡ ನಟ ಕಿರಣ್ ರಾಜ್; ‘ಭರ್ಜರಿ ಗಂಡು’ ನಿರ್ದೇಶಕನ ಜತೆ ಹೊಸ ಸಿನಿಮಾ
Image
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
Image
‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

ಹರ್ಷ ಹಾಗೂ ಭುವಿಯನ್ನು ಮದುವೆ ಮಾಡುವ ಜವಾಬ್ದಾರಿಯನ್ನು ತಾನೇ ತೆಗೆದುಕೊಂಡಿದ್ದಾಳೆ ವರುಧಿನಿ. ಇದರ ಹಿಂದೆ ಒಂದು ಮಾಸ್ಟರ್ ಪ್ಲ್ಯಾನ್ ಇದೆ. ಆ ಪ್ಲ್ಯಾನ್ ಏನು ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಆದರೆ, ಹರ್ಷನನ್ನು ಮದುವೆ ಆಗೋಕೆ ವರುಧಿನಿ ಯಾವ ಹಂತಕ್ಕೆ ಹೋಗೋಕೂ ರೆಡಿ ಆಗಿದ್ದಾಳೆ.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಗೆ ‘ಮುಂಗಾರು ಮಳೆ’ ಸಿನಿಮಾ ಟಚ್; ಹೊಸ ಅವತಾರದಲ್ಲಿ ಹರ್ಷ-ಭುವಿ

‘ನಾನು ಇಲ್ಲದೆ ಇದ್ದರೆ ನೀವು ಮದುವೆಯನ್ನು ಚೆನ್ನಾಗಿ ನಡೆಸುತ್ತೀರಲ್ಲ’ ಎಂದು ವರುಧಿನಿ ತನ್ನ ಸಿಬ್ಬಂದಿ ಬಳಿ ಕೇಳಿದ್ದಾಳೆ. ಅದೇ ಸಮಯಕ್ಕೆ ಸಾನಿಯಾ ಎಂಟ್ರಿ ಆಗಿದೆ. ತಾನೇ ಹರ್ಷನನ್ನು ಮದುವೆ ಆಗುತ್ತಿರುವುದು ಎಂಬುದನ್ನು ವರುಧಿನಿ ಹೇಳಿಕೊಂಡಿದ್ದಾಳೆ. ಇದನ್ನು ಕೇಳಿ ಸಾನಿಯಾ ನಕ್ಕಿದ್ದಾಳೆ. ಆದರೆ, ವರುಧಿನಿ ನಗಲಿಲ್ಲ. ‘ಹರ್ಷನನ್ನು ಬಿಟ್ಟು ನನಗೆ ಇರೋಕೆ ಆಗಲ್ಲ ಅನ್ನೋದು ಗೊತ್ತಿದೆ. ಹರ್ಷ ಹಾಗೂ ಭುವಿಗೆ ಮದುವೆ ನಿಗದಿ ಆಗಿದೆ ನಿಜ. ಆದರೆ, ಹರ್ಷನನ್ನು ಮದುವೆ ಆಗೋದು ನಾನೇ’ ಎಂದು ಕಾನ್ಫಿಡೆಂಟ್ ಆಗಿ ಹೇಳಿದ್ದಾಳೆ. ಕೊನೆಯ ಕ್ಷಣದಲ್ಲಿ ಆಕೆ ಏನು ಪ್ಲ್ಯಾನ್ ರೂಪಿಸುತ್ತಾಳೆ ಅನ್ನೋದು ವೀಕ್ಷಕರ ಕುತೂಹಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:18 pm, Thu, 2 June 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ