Yogaraj Bhat: ಶಿವಣ್ಣ- ಪ್ರಭುದೇವ ಕಾಂಬಿನೇಷನ್​ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ ಯೋಗರಾಜ್ ಭಟ್; ಚಿತ್ರೀಕರಣ ಯಾವಾಗ?

Shiva Rajkumar | Prabhudeva: ಪ್ರಸ್ತುತ ಯೋಗರಾಜ್ ಭಟ್ ‘ಗಾಳಿಪಟ 2’ ಸಿನಿಮಾ ಮುಗಿಸಿದ್ದು, ಅದು ತೆರೆಕಾಣಬೇಕಿದೆ. ‘ಗರಡಿ’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಶಿವರಾಜ್​ಕುಮಾರ್ ಕೂಡ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವುಗಳ ನಂತರ ಶಿವಣ್ಣ- ಪ್ರಭುದೇವ ಕಾಂಬಿನೇಷನ್​ನ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

TV9kannada Web Team

| Edited By: shivaprasad.hs

May 24, 2022 | 9:22 AM

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ (Shiva Rajkumar) ಮತ್ತು ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva) ಕಾಂಬೋದಲ್ಲಿ ಸಿನಿಮಾ ಸೆಟ್ಟೇರೋದು ಪಕ್ಕಾ ಆಗಿದೆ. ಈ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಖಚಿತಪಡಿಸಿದ್ದಾರೆ. ಮೊದಲ ಬಾರಿಗೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವ ಈ ಡಾನ್ಸಿಂಗ್​ ಸ್ಟಾರ್​ಗಳಿಗೆ ಯೋಗರಾಜ್​ ಭಟ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಕ್​ಲೈನ್ ವೆಂಕಟೇಶ್ (Rockline Venkatesh) ಚಿತ್ರಕ್ಕೆ ಹಣ ಹೂಡಲಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಈ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಅಣ್ಣಾವ್ರ ಆಶೀರ್ವಾದದ ಜತೆಗೆ ದೊಡ್ಡ ಚಿತ್ರದ ತಯಾರಿ ಶುರು, ಅತೀ ಶೀಘ್ರದಲ್ಲೇ ಚಿತ್ರೀಕರಣ’ ಎಂದು ಬರೆದುಕೊಂಡಿದ್ದಾರೆ. ಖ್ಯಾತ ದಿಗ್ಗಜರು ಈ ಚಿತ್ರಕ್ಕಾಗಿ ಒಂದಾಗಿರುವುದು ಚಿತ್ರದ ಕುರಿತು ನಿರೀಕ್ಷೆ ಮೂಡಿಸಿದೆ.

ಪ್ರಸ್ತುತ ಯೋಗರಾಜ್ ಭಟ್ ‘ಗಾಳಿಪಟ 2’ ಸಿನಿಮಾ ಮುಗಿಸಿದ್ದು, ಅದು ತೆರೆಕಾಣಬೇಕಿದೆ. ‘ಗರಡಿ’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಶಿವರಾಜ್​ಕುಮಾರ್ ಕೂಡ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಗಳ ಕೆಲಸಗಳು ಒಂದು ಹಂತಕ್ಕೆ ಬಂದ ನಂತರ ಹೊಸ ಸಿನಿಮಾ ಆರಂಭವಾಗಲಿದೆ. ನಿರ್ದೇಶಕರು ದೊಡ್ಡ ಚಿತ್ರ ಎಂದಿರುವುದು ಹಾಗೂ ಸ್ಟಾರ್ ಕಲಾವಿದರು ಚಿತ್ರಕ್ಕೆ ಕೈಜೋಡಿಸಿರುವುದು ಚಿತ್ರದ ಕ್ಯಾನ್ವಾಸ್ ಬಗ್ಗೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​-ರಜನಿಕಾಂತ್​ ನಟನೆ?

ಯೋಗರಾಜ್ ಭಟ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on

Click on your DTH Provider to Add TV9 Kannada