‘ಶೂಟಿಂಗ್ ಮುಗಿದಿದೆ, ಡಬ್ಬಿಂಗ್ ಶುರುವಾಗುತ್ತಿದೆ’; ‘ಕಬ್ಜ’ ಬಗ್ಗೆ ಆರ್​.ಚಂದ್ರು ಮಾತು

‘ಕಬ್ಜ’ ಚಿತ್ರ ಆರಂಭವಾಗಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಸಿನಿಮಾ ವಿಳಂಬವಾಗುವುದಕ್ಕೆ ಕೊವಿಡ್ ಕೂಡ ಒಂದು ಕಾರಣ.

TV9kannada Web Team

| Edited By: Rajesh Duggumane

May 24, 2022 | 2:14 PM

‘ಕಬ್ಜ’ ಸಿನಿಮಾ (Kabza Movie) ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಆರ್​.ಚಂದ್ರು ಅವರ (R. Chandru) ನಿರ್ದೇಶನವಿದೆ. ಈ ಸಿನಿಮಾದಲ್ಲಿ ಉಪೇಂದ್ರ ಹಾಗೂ ಸುದೀಪ್ ಒಟ್ಟಾಗಿ ನಟಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಚಿತ್ರ ಆರಂಭವಾಗಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಸಿನಿಮಾ ವಿಳಂಬವಾಗುವುದಕ್ಕೆ ಕೊವಿಡ್ ಕೂಡ ಒಂದು ಕಾರಣ. ಇದರ ಜತೆಗೆ ಚಿತ್ರದ ಕೆಲಸಗಳು ಹೆಚ್ಚಿನ ಸಮಯಾವಕಾಶ ಕೇಳುತ್ತಿವೆ. ಹೀಗಾಗಿ, ಸಿನಿಮಾ ಕೆಲಸಗಳು ವಿಳಂಬವಾದವು. ಸದ್ಯ, ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರವೇ ಡಬ್ಬಿಂಗ್ ಆರಂಭವಾಗುತ್ತಿದೆ. ಸಿನಿಮಾ ಯಾವ ಹಂತದಲ್ಲಿ ಇದೆ, ಟೀಸರ್ ರಿಲೀಸ್ ಯಾವಾಗ ಎಂಬಿತ್ಯಾದಿ ವಿಚಾರಗಳ ಬಗ್ಗೆ ನಿರ್ದೇಶಕ ಆರ್​.ಚಂದ್ರು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ. ಈ ಮೊದಲು ರಿಲೀಸ್ ಆಗಿದ್ದ ಸಿನಿಮಾದ ಪೋಸ್ಟರ್​​ಗಳು ಕುತೂಹಲ ಮೂಡಿಸಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada