ಮತ್ತೊಮ್ಮೆ ಸರಳತೆ ಮೆರೆದ ಶಿಕ್ಷಣ ಸಚಿವ ನಾಗೇಶ್ ಜೆಪಿ ನಗರದಿಂದ ಮಂತ್ರಿ ಮಾಲ್​ಗೆ ಮೆಟ್ರೋ ರೈಲಲ್ಲಿ ಪ್ರಯಾಣಿಸಿದರು

ಸಾಮಾನ್ಯವಾಗಿ ಸಚಿವರುಗಳ ಜೊತೆ ಪಟಾಲಂ ಇರುತ್ತದೆ. ಅಧಿಕಾರಿಗಳು, ಅಂಗರಕ್ಷಕರು, ಬೆಂಬಲಿಗರು, ಚೇಲಾಗಳು ಇರುತ್ತಾರೆ. ಆದರೆ ಶಿಕ್ಷಣ ಸಚಿವರೊಂದಿಗೆ ಯಾರೂ ಇಲ್ಲ. ಅಂದಹಾಗೆ ಅವರು ಮಂತ್ರಿ ಮಾಲ್ ನಲ್ಲಿ ನೋಡ ಹೊರಟಿದ್ದ ಸಿನಿಮಾ ಯಾವುದು ಗೊತ್ತಾ?

TV9kannada Web Team

| Edited By: Arun Belly

May 23, 2022 | 9:53 PM

Bengaluru: ರಾಜ್ಯದ ಶಿಕ್ಷಣ ಸಚಿವ ಬಿಸಿ ನಾಗೇಶ (BC Nagesh) ಅವರು ತಮ್ಮ ಸರಳತೆಗೆ ಹೆಸರಾಗುತ್ತಿದ್ದಾರೆ. ಸೋಮವಾರ ಬೆಳಗ್ಗೆ ಅವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದ ಸಾಗರ ಕಾಲೇಜಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗಮಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮಲ್ಲೇಶ್ವರಂನಲ್ಲಿರುವ (Malleswaram) ಮಂತ್ರಿ ಮಾಲ್ ಸಿನಿಮಾ ನೋಡಲು ಹೋಗುವ ಪ್ಲ್ಯಾನ್ ಇತ್ತು. ಅವರು ಅಲ್ಲಿಗೆ ತಲಪಲು ಬಳಸಿದ್ದ ಸಾರ್ವಜನಿಕ ಸಾರಿಗೆ ಮಾಧ್ಯಮ. ಹೌದು, ಮಾರಾಯ್ರೇ ಅವರು ಜನಸಾಮಾನ್ಯರ ಹಾಗೆ ಜೆಪಿ ನಗರನಲ್ಲಿ (JP Nagar) ಮೆಟ್ರೋ ರೈಲು ಹತ್ತಿ ಮಂತ್ರಿ ಮಾಲ್ ತಲುಪಿಕೊಂಡರು. ನೀವು ಈ ವಿಡಿಯೋನಲ್ಲಿ ನೋಡಬಹುದು. ಸಚಿವ ನಾಗೇಶ ಸಹಪ್ರಯಾಣಿಕರ ಜೊತೆ ಸ್ನೇಹ ಮತ್ತು ಸಲುಗೆಯಿಂದ ಮಾತಾಡುತ್ತಾ ಪ್ರಯಾಣಿಸುತ್ತಿದ್ದಾರೆ. ತಾನೊಬ್ಬ ಮಂತ್ರಿ ಅನ್ನೋ ಹಮ್ಮು ಅವರಲ್ಲಿ ಕೊಂಚವೂ ಕಾಣದು. ರೈಲಿನಲ್ಲಿರುವ ಕೆಲ ಜನರಿಗೆ ಅವರೊಬ್ಬ ಮಂತ್ರಿ ಗೊತ್ತಿರಲಾರದು.

ಸಾಮಾನ್ಯವಾಗಿ ಸಚಿವರುಗಳ ಜೊತೆ ಪಟಾಲಂ ಇರುತ್ತದೆ. ಅಧಿಕಾರಿಗಳು, ಅಂಗರಕ್ಷಕರು, ಬೆಂಬಲಿಗರು, ಚೇಲಾಗಳು ಇರುತ್ತಾರೆ. ಆದರೆ ಶಿಕ್ಷಣ ಸಚಿವರೊಂದಿಗೆ ಯಾರೂ ಇಲ್ಲ. ಅಂದಹಾಗೆ ಅವರು ಮಂತ್ರಿ ಮಾಲ್ ನಲ್ಲಿ ನೋಡ ಹೊರಟಿದ್ದ ಸಿನಿಮಾ ಯಾವುದು ಗೊತ್ತಾ? ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅಭಿನಯದ ‘ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ’.

ನಿಮಗೆ ನೆನಪಿರುಬಹುದು. ಕೆಲ ವಾರಗಳ ಹಿಂದೆ ನಾಗೇಶ ಅವರು ಮಡಿಕೇರಿಗೆ ಹೋಗಿದ್ದಾಗ ಚಿಕ್ಕ ಹೊಟೆಲೊಂದರಲ್ಲಿ ಸ್ಥಳೀಯ ಕಾರ್ಯಕರ್ತರು ಮತ್ತು ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಜೊತೆ ಚಹಾ ಕುಡಿದಿದ್ದರು. ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರಾಗಿ ಮಾಡುವರೆಲ್ಲ ಸರಳ ಸ್ವಾಭಾವವರು ಅಂತ ಕಾಣುತ್ತೆ. ನಾಗೇಶ್ ಅವರಿಗಿಂತ ಮೊದಲು ಈ ಖಾತೆಯ ಸಚಿವರಾಗಿದ್ದ ಸುರೇಶ ಕುಮಾರ ಅವರು ಸಹ ಸರಳತೆ ಹೆಸರಾಗಿದ್ದರು.

ಇದನ್ನೂ ಓದಿ:   ವಿರೋಧ ಪಕ್ಷ ಆರೋಪಿಸುತ್ತಿರುವ ಯಾವುದೇ ಪಾಠವನ್ನು ಪಠ್ಯಪುಸ್ತಕಗಳಿಂದ ಕೈಬಿಟ್ಟಿಲ್ಲ: ಸಚಿವ ಬಿಸಿ ನಾಗೇಶ

Follow us on

Click on your DTH Provider to Add TV9 Kannada