ವಿರೋಧ ಪಕ್ಷ ಆರೋಪಿಸುತ್ತಿರುವ ಯಾವುದೇ ಪಾಠವನ್ನು ಪಠ್ಯಪುಸ್ತಕಗಳಿಂದ ಕೈಬಿಟ್ಟಿಲ್ಲ: ಸಚಿವ ಬಿಸಿ ನಾಗೇಶ

ಸುಳ್ಳಿನ ಆಯಸ್ಸು ಕಡಿಮೆ. ಪಠ್ಯ ಪುಸ್ತಕಗಳು ಮುದ್ರಣ ಕಾಣುವ ಮೊದಲೇ ಇಂಥ ಮಾತಗಳು ಕೇಳಿಬರುತ್ತಿವೆ. ಒಮ್ಮೆ ಪುಸ್ತಕಗಳು ಪ್ರಿಂಟ್ ಆಗಿ ಬಂದರೆ ಈ ಸುಳ್ಳುಗಳು ಸ್ವಾಭಾವಿಕ ಅಂತ್ಯ ಕಾಣುತ್ತವೆ ಎಂದು ಸಚಿವರು ಹೇಳಿದರು.

TV9kannada Web Team

| Edited By: Arun Belly

May 19, 2022 | 10:59 PM

Bengaluru:  ಹತ್ತನೇ ತರಗತಿ ಪಠ್ಯದಲ್ಲಿ ಆರ್ ಎಸ್ ಎಸ್ ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ (KB Hedgewar) ಅವರ ಭಾಷಣ ಸೇರಿಸುವುದಕ್ಕೆ ಸಂಬಂಧಪಟ್ಟಂತೆ ವಿವಾದ ಶುರುವಾಗಿದೆ. ವಿಷಯದ ಹಿನ್ನಲೆಯಲ್ಲಿ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಶಿಕ್ಷಣ ಸಚಿವ ಬಿಸಿ ನಾಗೇಶ (BC Nagesh) ಅವರನ್ನು ಮಾತಾಡಿಸಿದರು. ಸಚಿವರು ಪರೋಕ್ಷವಾಗಿ ಕಾಂಗ್ರೆಸ್ (Congress) ಮೇಲೆ ಟೀಕಾಸ್ತ್ರ ಪ್ರಯೋಗಿಸದರು. ಹಿಜಾಬ್ ವಿವಾದ (hijab row) ಅಸಲಿಗೆ ಶುರುವಾಗಿದ್ದು ಉಡುಪಿಯ ಒಂದು ಕಾಲೇಜಿನಿಂದ. ಅದರೆ ರಾಜ್ಯದಾದ್ಯಂತ ಹಬ್ಬುವಂತೆ ಮಾಡಿದ್ದು ಯಾರು ಅಂತ ನಾಗೇಶ ಕೇಳಿದರು. ರಾಜಕೀಯ ಪಕ್ಷವೊಂದು ಹಿಜಾಭ್ ಧರಿಸುವುದು ಮುಸಲ್ಮಾನರ ಸಂವಿಧಾನಿಕ ಹಕ್ಕು ಅಂತ ಹೇಳಿದ ಬಳಿಕ ಹಿಜಾಬ್ ವಿವಾದದ ರೂಪ ತಳೆಯಿತು ಎಂದು ಸಚಿವರು ಹೇಳಿದರು.

ಈಗ ಅವರು ಪಠ್ಯಗಳಲ್ಲಿ ಭಗತ್ ಸಿಂಗ್ ಪಾಠ ಕೈ ಬಿಟ್ಟಿದ್ದಾರೆ, ಟಿಪ್ಪು ಸುಲ್ತಾನ್ ಪಾಠವನ್ನು ತೆಗೆದು ಹಾಕಿದ್ದಾರೆ, ನಾರಾಯಣ ಗುರು ಅವರ ಪಾಠವನ್ನೂ ಕೈ ಬಿಡಲಾಗಿದೆ ಅಂತ ಆರೋಪಿಸುತ್ತಿದ್ದಾರೆ. ಇವೆಲ್ಲ ಸುಳ್ಳು ಆರೋಪಗಳಾಗಿರುವುದರಿಂದ ಬಹಳ ದಿನ ಉಳಿಯಲಾರವು. ಸುಳ್ಳಿನ ಆಯಸ್ಸು ಕಡಿಮೆ. ಪಠ್ಯ ಪುಸ್ತಕಗಳು ಮುದ್ರಣ ಕಾಣುವ ಮೊದಲೇ ಇಂಥ ಮಾತಗಳು ಕೇಳಿಬರುತ್ತಿವೆ. ಒಮ್ಮೆ ಪುಸ್ತಕಗಳು ಪ್ರಿಂಟ್ ಆಗಿ ಬಂದರೆ ಈ ಸುಳ್ಳುಗಳು ಸ್ವಾಭಾವಿಕ ಅಂತ್ಯ ಕಾಣುತ್ತವೆ ಎಂದು ಸಚಿವರು ಹೇಳಿದರು.

ಭಗತ್ ಸಿಂಗ್ ಪಾಠ, ನಾರಾಯಣ ಗುರು ಪಾಠ-ಯಾವುದನ್ನೂ ಕೈ ಬಿಟ್ಟಿಲ್ಲ, ಅಸಲಿಗೆ ಭಗತ್ ಸಿಂಗ್ ಅವರ ಜೊತೆ ಇನ್ನಷ್ಟು ಕ್ರಾಂತಿಕಾರಿಗಳ ಪಠ್ಯವನ್ನೂ ಸೇರಿಸಲಾಗಿದೆ. ಎಲ್ಲ ಸಂಗತಿಗಳನ್ನು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಗೆ ತಿಳಿಸಲಾಗಿದೆ ಎಂದು ಸಚಿವ ಬಿಸಿ ನಾಗೇಶ್ ಹೇಳಿದರು.

ಇದನ್ನೂ ಓದಿ:   ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ; ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಮರ್ಥನೆ

Follow us on

Click on your DTH Provider to Add TV9 Kannada