ಬೆಂಗಳೂರಿಗೆ ಬಂದು ಮಂಡ್ಯ ಅಭಿಮಾನಿಗಳ ಬಗ್ಗೆ ಮಾತನಾಡಿದ ಸನ್ನಿ ಲಿಯೋನ್

ಬೆಂಗಳೂರಿಗೆ ಬಂದು ಮಂಡ್ಯ ಅಭಿಮಾನಿಗಳ ಬಗ್ಗೆ ಮಾತನಾಡಿದ ಸನ್ನಿ ಲಿಯೋನ್

TV9 Web
| Updated By: ರಾಜೇಶ್ ದುಗ್ಗುಮನೆ

Updated on: May 19, 2022 | 9:21 PM

‘ಚಾಂಪಿಯನ್’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಸನ್ನಿ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನೆರವೇರಿದೆ. ಈ ವೇದಿಕೆ ಮೇಲೆ ಸನ್ನಿ ಮಂಡ್ಯದ ಜನತೆ ಬಗ್ಗೆ ಮಾತನಾಡಿದ್ದಾರೆ.

ನಟಿ ಸನ್ನಿ ಲಿಯೋನ್ ಅವರು (Sunny Leone) ಇಂದು (ಮೇ 19) ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಕನ್ನಡದ ‘ಚಾಂಪಿಯನ್’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನೆರವೇರಿದೆ. ಈ ವೇದಿಕೆ ಮೇಲೆ ಸನ್ನಿ ಮಂಡ್ಯದ (Mandya) ಜನತೆ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಸನ್ನಿ ಬರ್ತ್​ಡೇ ಆಚರಿಸಿಕೊಂಡರು. ಈ ದಿನದಂದು ಮಂಡ್ಯದ ಸನ್ನಿ ಅಭಿಮಾನಿಗಳು ರಕ್ತದಾನ ಮಾಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಊರಿನ ಜನತೆಗೆ ಬಾಡೂಟ ಹಾಕಿದ್ದಾರೆ. ಈ ಬಗ್ಗೆ ಸನ್ನಿ ಲಿಯೋನ್ ಮಾತನಾಡಿದ್ದಾರೆ. ಈ ಮೊದಲು ಹೇಳಿದಂತೆ ರಕ್ತದಾನ ಮಾಡುವ ವಿಚಾರವನ್ನು ಪುನರುಚ್ಛರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ