AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂನಲ್ಲಿ ಕುಂಭದ್ರೋಣದಿಂದ ಪ್ರವಾಹ ತಲೆದೋರಿ ಜನಜೀವನ ಅಸ್ತವ್ಯಸ್ತ, ಸುರಕ್ಷಿತ ಸ್ಥಳಗಳಿಗೆ ಜನರ ಪಲಾಯನ

ಅಸ್ಸಾಂನಲ್ಲಿ ಕುಂಭದ್ರೋಣದಿಂದ ಪ್ರವಾಹ ತಲೆದೋರಿ ಜನಜೀವನ ಅಸ್ತವ್ಯಸ್ತ, ಸುರಕ್ಷಿತ ಸ್ಥಳಗಳಿಗೆ ಜನರ ಪಲಾಯನ

TV9 Web
| Edited By: |

Updated on: May 19, 2022 | 6:27 PM

Share

ಗುರುವಾರದಿಂದ ಮೂರು ದಿನಗಳ ಕಾಲ ಭಾರಿ ಮತ್ತು ಅತಿ ಭಾರಿ ಮಳೆಯಾಗಲಿರುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಅಸ್ಸಾಂ ಸರ್ಕಾರ ಇಡೀ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

Assam:  ಮಳೆ ಕೇವಲ ಕರ್ನಾಟಕದಲ್ಲಿ ಮಾತ್ರ ಜನರ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿಲ್ಲ ಮಾರಾಯ್ರೇ. ನಮ್ಮಿಂದ ಗಾವುದ ದೂರದಲ್ಲಿರುವ ಈಶಾನ್ಯ ಭಾರತದ (north-east India) ಅಸ್ಸಾಂನಲ್ಲೂ (Assam) ವರುಣ ಪ್ರಳಯವನ್ನೇ ಸೃಷ್ಟಿಸಿಬಿಟ್ಟಿದ್ದಾನೆ. ಪಿಟಿಐ ಸುದ್ದಿಸಂಸ್ಥೆಯ ವರದಿಯೊಂದರ ಪ್ರಕಾರ ಕೇವಲ ಒಂದು ದಿನದ ಅವಧಿಯಲ್ಲಿ ಅಸ್ಸಾಮಿನ 4 ಲಕ್ಷಕ್ಕೂ ಹೆಚ್ಚು ಜನ ನೆರೆಪೀಡಿತರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಧೋ ಎಂದು ಸುರಿಯುತ್ತಿರುವ ಮಳೆಯು ರಾಜ್ಯದ 26 ಜಿಲ್ಲೆಗಳ ಜನರನ್ನು ಸಂಕಷ್ಟಕ್ಕೆ ದೂಡಿದೆ. ಅಸ್ಸಾಮಿನ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಒದಗಿಸಿರುವ ಮಾಹಿತಿ ಪ್ರಕಾರ ಕಛಾರ್ ಜಿಲ್ಲೆಯೊಂದರಲ್ಲೇ 96,697 ಜನ ಪ್ರವಾಹದಿಂದ ಪ್ರಭಾವಿತರಾಗಿ ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ.

ಹೊಜೈ ಜಿಲ್ಲೆಯಲ್ಲಿ 88,420, ನಾಗಾಂವ್ ಜಿಲ್ಲೆಯಲ್ಲಿ 58,975, ದರಾಂಗ್ ಜಿಲ್ಲೆಯಲ್ಲಿ 56,960, ಬಿಸ್ವನಾಥ್ ಜಿಲ್ಲೆಯಲ್ಲಿ 39,874 ಮತ್ತು ಉದಲಗುರಿ ಜಿಲ್ಲೆಯಲ್ಲಿ 22,526 ಜನ ತಮ್ಮ ಊರುಗಳನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. ಪ್ರವಾಹದ ಜೊತೆ ನ್ಯೂ ಕುಂಜುಂಗ್, ಫಿಯಾಂಗ್ಪಿ, ಮೌಲ್ಹೊಯಿ, ನಮ್ಜೀರಂಗ್, ಸೌತ್ ಬಗೆತಾರ್, ಮಹಾದೇವ್ ಟಿಲ್ಲಾ, ಕಲಿಬರಿ, ನಾರ್ತ್ ಬಗೆತಾರ್, ಜಿಯೋನ್ ಮತ್ತು ಪಂಗ್ಮೌಲ್ ಗ್ರಾಮಗಳಲ್ಲಿ ಭೂಕುಸಿತದ ಪ್ರಕರಣಗಳು ಉಂಟಾಗಿವೆ.

ಗುರುವಾರದಿಂದ ಮೂರು ದಿನಗಳ ಕಾಲ ಭಾರಿ ಮತ್ತು ಅತಿ ಭಾರಿ ಮಳೆಯಾಗಲಿರುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಅಸ್ಸಾಂ ಸರ್ಕಾರ ಇಡೀ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ಈ ವಿಡಿಯೋನಲ್ಲಿ ಭಾರಿ ಮಳೆ ಮತ್ತು ಅದರಿಂದ ಉಂಟಾಗಿರುವ ಪ್ರವಾಹವನ್ನು ಗಮನಿಸಬಹುದು. ಜನ ನೀರಲ್ಲಿ ನಡೆದು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದಾರೆ.

ಇದನ್ನೂ ಓದಿ:   Assam Flood: ಅಸ್ಸಾಂನಲ್ಲಿ ಭಾರೀ ಪ್ರವಾಹ; 7 ಮಂದಿ ಸಾವು, 2 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ