ಬೆಂಗಳೂರಲ್ಲಿ ಸನ್ನಿ ಲಿಯೋನ್​ ಬರ್ತ್​​ಡೇ ಸೆಲೆಬ್ರೇಷನ್ ಹೇಗಿತ್ತು ನೋಡಿ

ಸನ್ನಿ ಎಲ್ಲರ ಎದುರು ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಅವರಿಗೆ ತಂಡದವರು ಬರ್ತ್​ಡೇ ವಿಶ್​ ಮಾಡಿದ್ದಾರೆ. ‘ಚಾಂಪಿಯನ್​’ ತಂಡ ತೋರಿದ ಪ್ರೀತಿ ನೋಡಿ ಖುಷಿಪಟ್ಟರು ಸನ್ನಿ.

TV9kannada Web Team

| Edited By: Rajesh Duggumane

May 20, 2022 | 2:02 PM

ನಟಿ ಸನ್ನಿ ಲಿಯೋನ್​ಗೆ (Sunny Leone) ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ ಇದೆ. ಅವರಿಗೆ ಇಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸನ್ನಿ ಲಿಯೋನ್ ಅವರು ಕನ್ನಡದ ‘ಚಾಂಪಿಯನ್​’ ಸಿನಿಮಾದಲ್ಲಿ (Champion Movie) ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಬೆಂಗಳೂರಲ್ಲಿ ನಡೆಯಿತು. ಹೀಗಾಗಿ, ಅವರು ಬೆಂಗಳೂರಿಗೆ ಆಗಮಿಸಿದ್ದರು. ಇತ್ತೀಚೆಗೆ ಸನ್ನಿ ಲಿಯೋನ್ ಬರ್ತ್​ಡೇ ಆಚರಿಸಿಕೊಂಡಿದ್ದರು. ಕುಟುಂಬದ ಜತೆ ಕೇಕ್​ ಕತ್ತರಿಸಿ ಅವರು ಸಂಭ್ರಮಿಸಿದ್ದರು. ಈಗ ಸನ್ನಿ ಬೆಂಗಳೂರಿಗೆ ಬಂದ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಸನ್ನಿ ಬರ್ತ್​ಡೇ ಆಚರಿಸಲಾಯಿತು. ಸನ್ನಿ ಎಲ್ಲರ ಎದುರು ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಅವರಿಗೆ ತಂಡದವರು ಬರ್ತ್​ಡೇ ವಿಶ್​ ಮಾಡಿದ್ದಾರೆ. ‘ಚಾಂಪಿಯನ್​’ ತಂಡ ತೋರಿದ ಪ್ರೀತಿ ನೋಡಿ ಖುಷಿಪಟ್ಟರು ಸನ್ನಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on

Click on your DTH Provider to Add TV9 Kannada