ಶೇಕಡಾ 96 ಕ್ಕಿಂತ ಹೆಚ್ಚು ಅಂಕ ಪಡೆದಿರುವ ಬಾಲಕಿಗೆ ಸಂಭ್ರಮಿಸುವ ಅವಕಾಶವನ್ನೂ ಮಳೆ ನೀಡಲಿಲ್ಲ
ಎಸ್ ಎಸ್ ಎಲ್ ಸಿಯಲ್ಲಿ ಶೇಕಡಾ 96 ಕ್ಕಿಂತ ಹೆಚ್ಚು ಅಂಕ ಪಡೆದ ಖುಷಿಗಿಂತಲೂ ತನ್ನಿಂದ ಬೇರೆಯವರಿಗೆ ಸಿಗಬಹುದಾದ ನೆರವು ತಪ್ಪಿತಲ್ಲ ಅಂತ ಅವಳು ವಿಷಾದ ವ್ಯಕ್ತಪಡಿಸುತ್ತಿದ್ದಾಳೆ.
Bengaluru: ವಯಸ್ಸಿಗೂ ಮೀರಿದ ಪ್ರಬುದ್ಧತೆ ಅಂದರೆ ಇದೇ ಇರಬೇಕು ಅನಿಸುತ್ತೆ. ಈ ಬಾಲಕಿಯ ಮಾತುಗಳನ್ನು ಕೇಳಿಸಿಕೊಳ್ಳಿ. ಅವಳಿಗಿನ್ನೂ 15-16 ರ ಪ್ರಾಯ. ನಿನ್ನೆಯಷ್ಟೇ (ಗುರುವಾರ) ಅವಳ ಎಸ್ ಎಸ್ ಎಲ್ ಸಿ ರಿಸಲ್ಟ್ (SSLC Results) ಬಂದಿದೆ ಮತ್ತು 96.48 ಪರ್ಸೆಂಟ್ (percent) ಅಂಕ ಗಳಿಸಿ ಪಾಸಾಗಿದ್ದಾಳೆ. ಯಶಸ್ಸಿನ ಶ್ರೇಯಸ್ಸನ್ನು ಅವಳು ತನ್ನ ಶಿಕ್ಷಕರಿಗೆ (teachers) ನೀಡುತ್ತಾಳೆ. ಅವರ ನೆರವಿಲ್ಲದಿದ್ದರೆ ಅಷ್ಟು ಅಂಕ ಗಳಿಸುವುದು ಸಾಧ್ಯವಾಗುತ್ತಿರಲಿಲ್ಲ ಅಂತ ಹೇಳುತ್ತಾಳೆ. ಆದರೆ ನಗರದಲ್ಲಿ ಒಂದೇ ಸಮ ಸುರಿಯುತ್ತಿರುವ ಮಳೆ ಮತ್ತು ಅವಳು ವಾಸಿಸುವ ಲೇಔಟ್ ನ ಕೆಟ್ಟ ಪ್ಲ್ಯಾನಿಂಗ್ (bad planning) ಸಂಭ್ರಮಿಸುವ ಅವಕಾಶ ನೀಡಿಲ್ಲ. 7ನೇ ಕ್ಲಾಸ್ ಪಾಸಾಗಿರುವ ತಮ್ಮ ಮತ್ತು ತಂದೆತಾಯಿಗಳೊಂದಿಗೆ ಅವಳು ವ್ಹೈಟ್ ಫೀಲ್ಡ್ ಏರಿಯಾದಲ್ಲಿರುವ ಸಾಯಿ ಲೇಔಟ್ ನಲ್ಲಿ ವಾಸವಾಗಿದ್ದಾಳೆ.
ಮಳೆ ನೀರು ಮನೆಯೊಳಗೆ ನುಗ್ಗಿ ಅವಳ ಮತ್ತು ಅವಳ ತಮ್ಮನ ಪುಸ್ತಕ ಮತ್ತು ನೋಟ್ಸ್ ಸೇರಿದಂತೆ ಉಳಿದೆಲ್ಲ ವಸ್ತುಗಳು ತೊಯ್ದು ಹಾಳಾಗಿವೆ. ಮೋರಿ ನೀರು ಮನೆಯೊಳಗೆ ನುಗ್ಗುತ್ತಿರುವುದರಿಂದ ಮನೆ ಮತ್ತು ಬಟ್ಟೆಗಳಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಅವಳು ಹೇಳುತ್ತಾಳೆ.
ತನ್ನ ಮತ್ತು ತಮ್ಮನ ಬುಕ್ಸ್ ಹಾಗೂ ನೋಟ್ಸ್ ಗಳನ್ನು ತನ್ನ ಜ್ಯೂನಿಯರ್ ಗಳಿಗೆ ಕೊಡಬೇಕು ಅವಳು ಅಂದುಕೊಂಡಿದ್ದಳು. ಅವೆಲ್ಲ ನೆನೆದು ಹಾಳಾಗಿರುವುದು ಅವಳಲ್ಲಿ ವ್ಯಥೆಯನ್ನುಂಟು ಮಾಡಿದೆ. ಎಸ್ ಎಸ್ ಎಲ್ ಸಿಯಲ್ಲಿ ಶೇಕಡಾ 96 ಕ್ಕಿಂತ ಹೆಚ್ಚು ಅಂಕ ಪಡೆದ ಖುಷಿಗಿಂತಲೂ ತನ್ನಿಂದ ಬೇರೆಯವರಿಗೆ ಸಿಗಬಹುದಾದ ನೆರವು ತಪ್ಪಿತಲ್ಲ ಅಂತ ಅವಳು ವಿಷಾದ ವ್ಯಕ್ತಪಡಿಸುತ್ತಿದ್ದಾಳೆ.
ಮಳೆಯಾದಾಗಲೆಲ್ಲ ಇದೇ ಗೋಳು, ಪ್ರತಿವರ್ಷ ಮನೆಗಳಲ್ಲಿ ನೀರು ನುಗ್ಗುತ್ತದೆ ಅಂತ ಹೇಳುವ ಅವಳು ಮನೆಯಲ್ಲಿರುವ ಫ್ರಿಜ್, ವಾಷಿಂಗ್ ಮಷೀನ್, ಯುಪಿಎಸ್ ಎಲ್ಲ ಹಾಳಾಗಿವೆ ಅನ್ನುತ್ತಾಳೆ. ಜನ ಪ್ರತಿನಿಧಿಗಳಿಲ್ಲದೆ ಅನಾಥವಾಗಿರುವ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರ ವರ್ಗ ನಗರದ ಇನ್ಪ್ರಾಸ್ಟ್ರಕ್ಚರ್ ಸರಿ ಮಾಡುವ ಪ್ರಯತ್ನಕ್ಕಿಳಿಯುತ್ತಾರೆಯೇ ಕಾದು ನೋಡಬೇಕು.
ಇದನ್ನೂ ಓದಿ: ಬೆಂಗಳೂರು ಹೊರಮಾವು ಪ್ರದೇಶದಲ್ಲಿ 300-400 ಮನೆಗಳು ಜಲಾವೃತ! 24 ಗಂಟೆಗೆ 114 ಮಿಮೀ ಮಳೆ ದಾಖಲು