ಬಾಕ್ಸ್ ಆಫೀಸ್​ನಲ್ಲಿ ‘777 ಚಾರ್ಲಿ’ ಓಟ; ವಾರಾಂತ್ಯಕ್ಕೆ ರಕ್ಷಿತ್ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ವಿವರ

‘777 ಚಾರ್ಲಿ’ ಸಿನಿಮಾವನ್ನು ರಕ್ಷಿತ್​ ಅವರೇ ನಿರ್ಮಾಣ ಮಾಡಿದ್ದರಿಂದ ಹೆಚ್ಚಿನ ಶ್ರಮ ಹಾಕಿದ್ದಾರೆ. ಈ ಶ್ರಮ ಫಲಕೊಟ್ಟಿದೆ. ಈ ಚಿತ್ರ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಳಿಕೆ ಮಾಡುತ್ತಿದೆ.

ಬಾಕ್ಸ್ ಆಫೀಸ್​ನಲ್ಲಿ ‘777 ಚಾರ್ಲಿ’ ಓಟ; ವಾರಾಂತ್ಯಕ್ಕೆ ರಕ್ಷಿತ್ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ವಿವರ
ರಕ್ಷಿತ್ ಶೆಟ್ಟಿ
TV9kannada Web Team

| Edited By: Rajesh Duggumane

Jun 13, 2022 | 6:22 PM

ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ (777 Charlie) ಹಿಟ್ ಆಗಿದೆ. ಈ ಚಿತ್ರ ಮೊದಲ ವಾರಾಂತ್ಯಕ್ಕೆ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ಗೆಲುವಿನ ನಗೆ ಬೀರಿದೆ. ಕನ್ನಡ ಮಾತ್ರವಲ್ಲದೆ, ಪರಭಾಷೆಯ ಮಂದಿಯೂ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ, ಸಿನಿಮಾದ ಗಳಿಕೆ 20 ಕೋಟಿ ರೂಪಾಯಿ ಸಮೀಪಿಸಿದೆ ಅನ್ನೋದು ವಿಶೇಷ. ಈ ವಿಚಾರ ಕೇಳಿ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಸಿನಿಮಾದ ಗಳಿಕೆ ಲೆಕ್ಕ ನೋಡಿ ಹಿರಿಹಿರಿ ಹಿಗ್ಗಿದ್ದಾರೆ.

ರಕ್ಷಿತ್ ಶೆಟ್ಟಿ ಪ್ರತಿ ಸಿನಿಮಾಗೂ ಭಿನ್ನ ಅವತಾರ ತಾಳುತ್ತಾರೆ. ಕೇವಲ ನಟನಾಗಿ ಮಾತ್ರ ಅವರು ಸಿನಿಮಾದಲ್ಲಿ ನಟಿಸುವುದಿಲ್ಲ. ತಂತ್ರಜ್ಞನಾಗಿಯೂ ಕೆಲಸ ಮಾಡುತ್ತಾರೆ. ‘777 ಚಾರ್ಲಿ’ ಸಿನಿಮಾವನ್ನು ಅವರೇ ನಿರ್ಮಾಣ ಮಾಡಿದ್ದರಿಂದ ಹೆಚ್ಚಿನ ಶ್ರಮ ಹಾಕಿದ್ದಾರೆ. ಈ ಶ್ರಮ ಫಲಕೊಟ್ಟಿದೆ. ಈ ಚಿತ್ರ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಳಿಕೆ ಮಾಡುತ್ತಿದೆ.

‘777 ಚಾರ್ಲಿ’ ಮೊದಲ ವೀಕೆಂಡ್​ನಲ್ಲಿ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಪಿಂಕ್​ವಿಲ್ಲಾ ವೆಬ್​ಸೈಟ್ ವರದಿ ಮಾಡಿದೆ. ಸಿನಿಮಾ ರಿಲೀಸ್ ಆಗಿದ್ದು ಜೂನ್​ 10ಕ್ಕೆ. ಅದಕ್ಕೂ ಮೊದಲು ಅನೇಕ ಕಡೆಗಳಲ್ಲಿ ಸಿನಿಮಾ ಪ್ರೀಮಿಯರ್ ಆಗಿತ್ತು. ಪ್ರೀಮಿಯರ್​ನಿಂದ ಚಿತ್ರ 1.10 ಕೋಟಿ ರೂಪಾಯಿ ಗಳಿಸಿದೆ. ಜೂನ್​ 10 (4.90 ಕೋಟಿ ರೂಪಾಯಿ), ಜೂನ್​ 11 (6.25 ಕೋಟಿ ರೂಪಾಯಿ) ಕೋಟಿ ರೂಪಾಯಿ ಹಾಗೂ ಭಾನುವಾರ ಜೂನ್​ 12 (7.50 ಕೋಟಿ ರೂಪಾಯಿ) ಗಳಿಕೆ ಆಗಿದೆ. ಈ ಮೂಲಕ ಚಿತ್ರದ ಒಟ್ಟೂ ಗಳಿಕೆ 19.75 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ‘777 ಚಾರ್ಲಿ’ ಎಷ್ಟು ಲಾಭ ಮಾಡಿದೆ? ಮಾಹಿತಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

ಎಲ್ಲೆಲ್ಲಿ ಎಷ್ಟೆಷ್ಟು?

ಕರ್ನಾಟಕದಲ್ಲಿ ‘777 ಚಾರ್ಲಿ’ ಸಿನಿಮಾಗೆ ಹೆಚ್ಚು ಹಣ ಸಿಕ್ಕಿದೆ. ಒಟ್ಟೂ ಕಲೆಕ್ಷನ್​ನಲ್ಲಿ ಕರ್ನಾಟಕದ ಕಲೆಕ್ಷನ್ 15.25 ಕೋಟಿ ರೂಪಾಯಿ ಆಗಿದೆ. ಆಂಧ್ರ ಪ್ರದೇಶದಲ್ಲಿ 1.50 ಕೋಟಿ ರೂಪಾಯಿ, ಕೇರಳದಲ್ಲಿ 90 ಲಕ್ಷ, ತಮಿಳುನಾಡಿನಲ್ಲಿ 60 ಲಕ್ಷ ರೂಪಾಯಿ ಹಾಗೂ ಉಳಿದ ಭಾಗದಿಂದ 1.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಚಿತ್ರದ ಲೈಫಟೈಮ್​ ಗಳಿಕೆ 40-50 ಕೋಟಿ ರೂಪಾಯಿ ಆಗಬಹುದು ಎಂದು ಊಹಿಸಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada