‘777 ಚಾರ್ಲಿ’ ಎಷ್ಟು ಲಾಭ ಮಾಡಿದೆ? ಮಾಹಿತಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

ಸಿನಿಮಾ ತೆರೆಕಂಡ ಬಳಿಕ ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ

TV9kannada Web Team

| Edited By: Rajesh Duggumane

Jun 12, 2022 | 1:55 PM

‘777 ಚಾರ್ಲಿ’ ಚಿತ್ರ (777 Charlie) ಜೂನ್​ 10ರಂದು ರಿಲೀಸ್ ಆಗಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ಸಿನಿಮಾಗೆ ಮೊದಲು ಹಾಗೂ ಎರಡನೇ ದಿನ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಂದು (ಜೂನ್ 12) ಭಾನುವಾರ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿತ್ರಮಂದಿರಕ್ಕೆ ತೆರಳುತ್ತಿದ್ದಾರೆ. ಸ್ವತಃ ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಿಂದ ಅವರಿಗೆ ಸಖತ್ ಲಾಭ ಆಗಿದೆ. ಸಿನಿಮಾ ತೆರೆಕಂಡ ಬಳಿಕ ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಈ ಸಿನಿಮಾದಿಂದ ಸೇಫ್​ ಆಗಿದ್ದು ಮಾತ್ರವಲ್ಲ, ಒಳ್ಳೆಯ ಲಾಭದಲ್ಲೇ ಇದ್ದೀನಿ’ ಎಂದಿದ್ದಾರೆ ರಕ್ಷಿತ್ ಶೆಟ್ಟಿ (Rakshit Shetty). ರಕ್ಷಿತ್ ಅವರು ನಿರ್ಮಾಪಕನಾಗಿ, ಹೀರೋ ಆಗಿ ಈ ಚಿತ್ರದಿಂದ ಯಶಸ್ಸು ಕಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada