‘10 ವರ್ಷದ ಹಿಂದೆ ಆಗಿದ್ರೆ ಹಾಕ್ಕೊಂಡು ಜಡಿದಿರುತ್ತಿದ್ದೆ, ಆದ್ರೆ ಈಗ ನಾನು ಹಾಗಿಲ್ಲ’: ಜೈ ಜಗದೀಶ್
Jai Jagadish: ಜೈ ಜಗದೀಶ್ ನಿಜಕ್ಕೂ ಹಲ್ಲೆ ಮಾಡಿದ್ರಾ? ಜೂನ್ 5ರಂದು ಅಲ್ಲಿನ ನಡೆದಿದ್ದು ಏನು? ಘಟನೆ ಕುರಿತು ಹಿರಿಯ ನಟ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
ಬೆಳ್ಳೂರು ಕ್ರಾಸ್ ಟೋಲ್ ಬಳಿ ಸ್ಯಾಂಡಲ್ವುಡ್ (Sandalwood) ನಟ ಜೈ ಜಗದೀಶ್ ಅವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಸಂಬಂಧ ಕೇಸ್ (Assault Case) ಕೂಡ ದಾಖಲಾಗಿದೆ. ಈ ಘಟನೆ ಬಗ್ಗೆ ಜೈ ಜಗದೀಶ್ (Jai Jagadeesh) ಸ್ಪಷ್ಟನೆ ನೀಡಿದ್ದಾರೆ. ‘ನಡೆದಿರುವುದು ಸಣ್ಣ ಘಟನೆ. ಅದಕ್ಕೆ ರೆಕ್ಕೆ-ಪುಕ್ಕ ಕಟ್ಟಲಾಗಿದೆ. ಈ ಘಟನೆಯ ಹಿಂದೆ ಯಾರೆಲ್ಲ ಇದ್ದಾರೋ ಗೊತ್ತಿಲ್ಲ. ಬಾಟಲಿ ಆ ಕಡೆ ಎಸೆಯಪ್ಪ ಅಂತ ಹೇಳಿದ್ದಕ್ಕೆ ಆತ ಕೆಟ್ಟ ಮಾತುಗಳಿಂದ ನಿಂದಿಸಿದ. 10 ವರ್ಷದ ಹಿಂದೆ ಆಗಿದ್ರೆ ಈ ಮಾತು ಹೇಳಿದಾಗ ಹಾಕ್ಕೊಂಡು ಜಡಿದಿರುತ್ತಿದ್ದೆ. ಆದ್ರೆ ಈಗ ನಾನು ಹಾಗಿಲ್ಲ. ನನಗೂ ವಯಸ್ಸಾಗಿದೆ. ನಾನೇನು ಮಾತನಾಡಲಿ? ಸೀನಿಯರ್ ಆರ್ಟಿಸ್ಟ್ ಅಂತ ಜನರು ಮರ್ಯಾದೆ ಕೊಡ್ತಾರೆ. ಅದನ್ನು ಉಳಿಸಿಕೊಳ್ಳುವ ಸಲುವಾಗಿ ಏನೂ ಮಾತನಾಡದೇ ನಾನು ಆಚೆ ಬಂದೆ’ ಎಂದು ಜೈ ಜಗದೀಶ್ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಠಾಣೆಗೆ ಬಂದ ಅವರು ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.