ಪ್ರತಿಯೊಬ್ಬರೂ ನೋಡಲೇಬೇಕಾದ ವಿಡಿಯೋ; ಸೊಪ್ಪು ಮಾರಾಟ ಮಾಡುವ ಮಹಿಳೆಯರು ಸೊಪ್ಪು ತೊಳೆಯೋದು ಎಲ್ಲಿ ಗೊತ್ತಾ?
ಬಾಗಲಕೋಟೆಯ ನವನಗರದ ಸೆಕ್ಟರ್ ನಂ.4ರಲ್ಲಿ ಕೆಲ ಮಹಿಳಾ ವ್ಯಾಪಾರಸ್ಥರು ಚರಂಡಿ ನೀರಲ್ಲಿ ಸೊಪ್ಪು ತೊಳೆದಿದ್ದಾರೆ. ಸದ್ಯ ಮಹಿಳೆಯರು ಚರಂಡಿ ನೀರಲ್ಲಿ ಸೊಪ್ಪು ತೊಳೆಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಗಲಕೋಟೆ: ತರಕಾರಿ ಆರೋಗ್ಯಕ್ಕೆ ಅತಿ ಮುಖ್ಯ. ಆದ್ರೆ ತರಕಾರಿ ಬೆಳೆಯುವಾಗ ಕಿಮಿಕಲ್ ಹಾಕಲಾಗುತ್ತಿದೆ. ಹೀಗಾಗಿ ತರಕಾರಿಗಳಲ್ಲಿ ಮೊದಲಿನಂತಹ ಅಂಶಗಳಿಲ್ಲ ಎಂಬ ಮಾತು ಸಾಮಾನ್ಯ. ಆದ್ರೆ ಈ ವಿಡಿಯೋ ನೋಡಿದ್ರೆ ನೀವು ಶಾಕ್ ಆಗ್ತೀರಾ. ತರಕಾರಿ ಮಾರುವ ಮಹಿಳೆಯರು ಮಾರುಕಟ್ಟೆಗೆ ಹೋಗುವ ಮುನ್ನ ಸೊಪ್ಪನ್ನು ಚರಂಡಿ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ ನಂತರ ಮಾರುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ಬಾಗಲಕೋಟೆಯ ನವನಗರದ ಸೆಕ್ಟರ್ ನಂ.4ರಲ್ಲಿ ಕೆಲ ಮಹಿಳಾ ವ್ಯಾಪಾರಸ್ಥರು ಚರಂಡಿ ನೀರಲ್ಲಿ ಸೊಪ್ಪು ತೊಳೆದಿದ್ದಾರೆ. ಸದ್ಯ ಮಹಿಳೆಯರು ಚರಂಡಿ ನೀರಲ್ಲಿ ಸೊಪ್ಪು ತೊಳೆಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚರಂಡಿ ನೀರಲ್ಲಿ ತೊಳೆದ ಸೊಪ್ಪನ್ನ, ಸಮೀಪದ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

