ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರಿಗೆ ಹಾರ್ಲಿಕ್ಸ್ ಮೈಸೂರು ಪಾಕ್ ಪ್ರಸಾದ
175 ಕೆ.ಜಿ ಕಡಲೆ ಹಿಟ್ಟು, 600 ಕೆ.ಜಿ ಸಕ್ಕರೆ, 30 ಕೆ.ಜಿ ಹಾರ್ಲಿಕ್ಸ್, 18 ಟಿನ್ ಬೆಣ್ಣೆ ಕಾಯಿಸಿದ ತುಪ್ಪ, 30 ಟಿನ್ ರೀಫೈಂಡ್ ಆಯಿಲ್ ಬಳಸಿ 30 ಮಂದಿ ನುರಿತ ಬಾಣಸಿಗರಿಂದ ಹಾರ್ಲಿಕ್ಸ್ ಮೈಸೂರು ಪಾಕ್ ಸಿದ್ದಗೊಳಿಸಲಾಗಿದೆ.
ಮೈಸೂರು: ಆಷಾಡ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಎರಡು ವರ್ಷಗಳ ಬಳಿಕ ಆಷಾಡ ಮಾಸದಲ್ಲಿ ಶಕ್ತಿ ದೇವತೆಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರಿಗೆ ಹಾರ್ಲಿಕ್ಸ್ ಮೈಸೂರು ಪಾಕ್ (Horlicks Mysore Pak) ಪ್ರಸಾದ ನೀಡಲಾಗುತ್ತಿದೆ. ಮೈಸೂರು ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 30 ಸಾವಿರ ಹಾರ್ಲಿಕ್ಸ್ ಮೈಸೂರು ಪಾಕ್ ವಿತರಣೆಗೆ ಸಿದ್ದತೆ ಮಾಡಲಾಗಿದೆ. ಖಾಸಗಿ ಕಲ್ಯಾಣ ಮಂಟಪದಲ್ಲಿ ಹಾರ್ಲಿಕ್ಸ್ ಮೈಸೂರು ಪಾಕ್ ತಯಾರಿ ಮಾಡಲಾಗಿದ್ದು, 175 ಕೆ.ಜಿ ಕಡಲೆ ಹಿಟ್ಟು, 600 ಕೆ.ಜಿ ಸಕ್ಕರೆ, 30 ಕೆ.ಜಿ ಹಾರ್ಲಿಕ್ಸ್, 18 ಟಿನ್ ಬೆಣ್ಣೆ ಕಾಯಿಸಿದ ತುಪ್ಪ, 30 ಟಿನ್ ರೀಫೈಂಡ್ ಆಯಿಲ್ ಬಳಸಿ 30 ಮಂದಿ ನುರಿತ ಬಾಣಸಿಗರಿಂದ ಹಾರ್ಲಿಕ್ಸ್ ಮೈಸೂರು ಪಾಕ್ ಸಿದ್ದಗೊಳಿಸಲಾಗಿದೆ. ಮೈಸೂರು ಪಾಕ್ ಜೊತೆಗೆ 35 ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ಕೂಡ ಇರಲಿದೆ.
ಇದನ್ನೂ ಓದಿ: Udyami Bharat:‘ಉದ್ಯಮಿ ಭಾರತ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಸಂಸಾರದ ಗುಟ್ಟು ರಟ್ಟು ಮಾಡ್ತಾರಾ ಕರಣ್ ಜೋಹರ್?