ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ಸಂಸಾರದ ಗುಟ್ಟು ರಟ್ಟು ಮಾಡ್ತಾರಾ ಕರಣ್​ ಜೋಹರ್​?

Priyanka Chopra | Nick Jonas: ‘ಕಾಫಿ ವಿತ್​ ಕರಣ್​’ ಶೋನಲ್ಲಿ ಕೂತು ಹರಟೆ ಹೊಡೆಯಲು ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಚೋಪ್ರಾ ಒಪ್ಪಿದ್ದಾರಾ? ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ಸಂಸಾರದ ಗುಟ್ಟು ರಟ್ಟು ಮಾಡ್ತಾರಾ ಕರಣ್​ ಜೋಹರ್​?
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್, ಕರಣ್ ಜೋಹರ್
Follow us
TV9 Web
| Updated By: ಮದನ್​ ಕುಮಾರ್​

Updated on:Jun 30, 2022 | 9:24 AM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮದುವೆ ಆದ ಬಳಿಕ ಅಮೆರಿಕದಲ್ಲೇ ವಾಸವಾಗಿದ್ದಾರೆ. ಹಾಲಿವುಡ್​ ಪ್ರಾಜೆಕ್ಟ್​ಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಮೆರಿಕದ ಖ್ಯಾತ ಸಿಂಗರ್ ಮತ್ತು ಹಾಲಿವುಡ್​ ನಟ​ ನಿಕ್​ ಜೋನಸ್​ (Nick Jonas) ಜೊತೆ ಅವರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಈ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿದ ಸುದ್ದಿ ಈ ವರ್ಷ ಆರಂಭದಲ್ಲೇ ಕೇಳಿಬಂದಿತ್ತು. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್​ ಎಂದು ಹೆಸರಿಟ್ಟಿದ್ದಾರೆ ಎಂಬುದು ಬಿಟ್ಟರೆ ಹೆಚ್ಚಿನ ವಿವರ ಹೊರಬಿದ್ದಿಲ್ಲ. ಮದುವೆ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಭಾರತದ ಮಾಧ್ಯಮಗಳ ಕೈಗೆ ಅಷ್ಟಾಗಿ ಸಿಕ್ಕಿಲ್ಲ. ಅವರ ಪ್ರೇಮ್​ ಕಹಾನಿ ಶುರು ಆಗಿದ್ದು ಹೇಗೆ ಎಂಬುದರಿಂದ ಹಿಡಿದು ಸಂಸಾರದ ಗುಟ್ಟುಗಳವರೆಗೆ ಅನೇಕ ವಿಚಾರಗಳನ್ನು ಬಾಯಿ ಬಿಡಿಸಬೇಕು ಎಂದು ಅನೇಕರು ಕಾದಿದ್ದಾರೆ. ಅದಕ್ಕಾಗಿ ಕರಣ್​ ಜೋಹರ್​ ಅವರಿಗೆ ಕಾಲ ಕೂಡಿಬಂದಿದೆ ಎನ್ನಲಾಗುತ್ತಿದೆ. ‘ಕಾಫಿ ವಿತ್​ ಕರಣ್​ 7’ (Koffee With Karan) ಶೋನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಅವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ಕಾಫಿ ವಿತ್​ ಕರಣ್’ ಶೋ ತುಂಬ ಬೋಲ್ಡ್​ ಆಗಿರುತ್ತದೆ. ಇದರಲ್ಲಿ ಭಾಗವಹಿಸಿದ ಅತಿಥಿಗಳಿಗೆ ತೀರಾ ವೈಯಕ್ತಿಕವಾದ ಪ್ರಶ್ನೆಗಳನ್ನು ಕರಣ್​ ಜೋಹರ್​ ಕೇಳುತ್ತಾರೆ. ಅಂಥ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ವಿವಾದ ಹುಟ್ಟಿಕೊಂಡಿದ್ದೂ ಉಂಟು. ಆ ಕಾರಣದಿಂದ ಕೆಲವು ಸೆಲೆಬ್ರಿಟಿಗಳು ‘ಕಾಫಿ ವಿತ್​ ಕರಣ್​’ ಶೋಗೆ ಬರಲು ಹಿಂದೇಟು ಹಾಕುತ್ತಾರೆ.

ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಚೋಪ್ರಾ ಅವರನ್ನು ಈ ಶೋಗೆ ಕರೆತರಬೇಕು ಎಂದು ಕರಣ್​ ಜೋಹರ್ ಮತ್ತು ಅವರ ತಂಡದವರು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ದಂಪತಿಯಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದೆ ಎಂದು ಹೇಳಲಾಗುತ್ತಿದೆಯಾದರೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಒಂದು ವೇಳೆ ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಈ ಕಾರ್ಯಕ್ರಮಕ್ಕೆ ಬರುವುದೇ ಹೌದಾದರೆ ಕರಣ್​ ಜೋಹರ್​ ಅವರು ಈ ದಂಪತಿಗೆ ಸಂಸಾರದ ಗುಟ್ಟುಗಳ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳುವುದು ಗ್ಯಾರಂಟಿ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ.

ಇದನ್ನೂ ಓದಿ
Image
Priyanka Chopra: ಫ್ಯಾನ್ಸ್​ ವಾವ್​ ಎನ್ನುವಂತೆ ಗ್ಲಾಮರ್​ ವೇಷ ಧರಿಸಿದ ಪ್ರಿಯಾಂಕಾ ಚೋಪ್ರಾ; ಇಲ್ಲಿವೆ ಫೋಟೋಗಳು
Image
ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​
Image
ಪ್ರಿಯಾಂಕಾ ಚೋಪ್ರಾ ಮಗಳ ಹೆಸರು ಮಾಲ್ತಿ ಮೇರಿ ಚೋಪ್ರಾ ಜೋನಸ್​; ಏನು ಇದರ ಅರ್ಥ?
Image
ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ

ನಿರೂಪಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕರಣ್​ ಜೋಹರ್ ಫೇಮಸ್​ ಆಗಿದ್ದಾರೆ. ‘ಕಾಫಿ ವಿತ್​ ಕರಣ್​’ ಶೋ ತುಂಬ ಜನಪ್ರಿಯವಾಗಿದ್ದರೂ ಕೂಡ ಕೆಲವು ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಲು ಒಪ್ಪುತ್ತಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ಈ ಬಾರಿ ದಕ್ಷಿಣ ಭಾರತದ ಅನೇಕ ನಟ-ನಟಿಯರನ್ನು ಈ ಕಾರ್ಯಕ್ರಮಕ್ಕೆ ಕರೆತರುವ ಪ್ರಯತ್ನ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: 22 ವರ್ಷಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಹೇಗಿದ್ರು ನೋಡಿ; ಇಲ್ಲಿದೆ ಫೋಟೋ

Priyanka Chopra: ಪ್ರಿಯಾಂಕಾ ಚೋಪ್ರಾ ರಕ್ತಸಿಕ್ತ ಮುಖ ನೋಡಿ ಗಾಬರಿಯಾದ ಫ್ಯಾನ್ಸ್; ಗಾಯಗಳ ಬಗ್ಗೆ ನಟಿ ಹೇಳಿದ್ದೇನು?

Published On - 9:24 am, Thu, 30 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ