ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗಾಡುವುದಕ್ಕೆ ಮಾತ್ರ ಕೆಡಿಪಿ ಮೀಟಿಂಗ್​ಗಳು ಸೀಮಿತವೇ?

ವೇದಿಕೆಯಲ್ಲಿ ಆಸೀನರಾಗಿರುವ ಕೆಲ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಒಬ್ಬ ಕಿರಿಯ ಅಧಿಕಾರಿಯನ್ನು ಸರತಿಯ ಮೇಲೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮಂಡ್ಯದ ಶಾಸಕ ಶ್ರೀಕಂಠಯ್ಯನವರರೂ ಏರಿದ ಧ್ವನಿಯಲ್ಲಿ ಮಾತಾಡುತ್ತಿದ್ದಾರೆ.

TV9kannada Web Team

| Edited By: Arun Belly

Jun 29, 2022 | 9:00 PM

Mandya:  ಕೆಡಿಪಿ (KDP meeting) ಸಭೆಗಳು ಅಂದರೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಗಳು ಜನಪ್ರತಿನಿಧಿಗಳು ಆಧಿಕಾರಿಗಳನ್ನು ಎಲ್ಲಿರೆದುರು ಬಯ್ಯುವುದಕ್ಕೆ ಸೀಮಿವಾದಂತಿವೆ ಮಾರಾಯ್ರೇ. ನಾವು ತೋರಿಸುವ ಎಲ್ಲ ಕೆಡಿಪಿ ಮೀಟಿಂಗ್ಗಳಲ್ಲಿ ಹೆಚ್ಚಿನವು ಇಂಥವೇ ಆಗಿರುತ್ತವೆ. ಮಂಡ್ಯದಲ್ಲಿ (Mandya) ಬುಧವಾರ ನಡೆದ ಸಭೆಯಲ್ಲಿ ಏನು ನಡೆಯುತ್ತಿದೆ ಅಂತ ನೀವೇ ನೋಡಿ. ವೇದಿಕೆಯಲ್ಲಿ ಆಸೀನರಾಗಿರುವ ಕೆಲ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಒಬ್ಬ ಕಿರಿಯ ಅಧಿಕಾರಿಯನ್ನು (official) ಸರತಿಯ ಮೇಲೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮಂಡ್ಯದ ಶಾಸಕ ಶ್ರೀಕಂಠಯ್ಯನವರಂತೂ ಏರಿದ ಧ್ವನಿಯಲ್ಲಿ ಮಾತಾಡುತ್ತಿದ್ದಾರೆ.

ವೇದಿಕೆ ಮೇಲೆ ಶ್ರೀಕಂಠಯ್ಯ ಅವರಲ್ಲದೆ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಸಚಿವರರಾದ ಗೋಪಾಲಯ್ಯ, ಕೆಸಿ ನಾರಾಯಣಗೌಡ ಶಾಸಕ ಸಿ ಎಸ್ ಪುಟ್ಟರಾಜು ಮೊದಲಾದವರನ್ನು ಕಾಣಬಹುದು.

ಇದನ್ನೂ ಓದಿ:  ಆಂಬುಲೆನ್ಸ್​​ಗೆ ದಾರಿ ಬಿಡದೆ ದುಷ್ಕೃತ್ಯ ಮೆರೆದ ಕಾರು ಚಾಲಕ ! ವಿಡಿಯೋ ವೈರಲ್​​

Follow us on

Click on your DTH Provider to Add TV9 Kannada