AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಬುಲೆನ್ಸ್​​ಗೆ ದಾರಿ ಬಿಡದೆ ದುಷ್ಕೃತ್ಯ ಮೆರೆದ ಕಾರು ಚಾಲಕ ! ವಿಡಿಯೋ ವೈರಲ್​​

ಕಾರು ಚಾಲಕ ಆಂಬುಲೆನ್ಸ್​ ಬರುತ್ತಿದ್ದರೂ ಅದಕ್ಕೆ ದಾರಿ ಮಾಡಿಕೊಡದೆ ಆಂಬ್ಯುಲೆನ್ಸ್​​ ಮುಂದೆ ಹೋಗದಂತೆ ಅದಕ್ಕೆ ಅಡ್ಡಲಾಗಿ ಕಾರು ಚಲಾಯಿಸಿದ್ದಾನೆ.  

ಆಂಬುಲೆನ್ಸ್​​ಗೆ ದಾರಿ ಬಿಡದೆ ದುಷ್ಕೃತ್ಯ ಮೆರೆದ ಕಾರು ಚಾಲಕ ! ವಿಡಿಯೋ ವೈರಲ್​​
ವೈರಲ್​​ ವಿಡಿಯೋImage Credit source: Cartoq
TV9 Web
| Updated By: Digi Tech Desk|

Updated on:Jun 30, 2022 | 12:49 PM

Share

ಕೇರಳ: ಆಂಬ್ಯುಲೆನ್ಸ್ (Ambulance) ಅಥವಾ ಇತರ ತುರ್ತು ಸೇವಾ (Emergency) ವಾಹನಗಳಿಗೆ  ದಾರಿ ಮಾಡಿಕೊಡುವುದು ನಮ್ಮ ಕರ್ತವ್ಯ ಮತ್ತು ನಮ್ಮ ದೇಶದಲ್ಲಿ ಇದು ಕಾನೂನಾಗಿಯೂ ಮಾರ್ಪಟ್ಟಿದೆ. ಆಂಬ್ಯುಲೆನ್ಸ್ ಅಥವಾ ಇತರ ತುರ್ತು ಸೇವಾ ವಾಹನಗಳಿಗೆ ದಾರಿ ಮಾಡಿಕೊಡದಿದ್ದರೆ ದಂಡ ವಿಧಿಸಬೇಕಾಗುತ್ತದೆ. ಆದರೆ ಸದ್ಯ ವೈರಲ್​ ಆದ ವಿಡಿಯೋದಲ್ಲಿ ಕಾರು (Car) ಚಾಲಕ (Driver) ಆಂಬುಲೆನ್ಸ್​ ಬರುತ್ತಿದ್ದರೂ ಅದಕ್ಕೆ ದಾರಿ ಮಾಡಿಕೊಡದೆ ಆಂಬ್ಯುಲೆನ್ಸ್​​ ಮುಂದೆ ಹೋಗದಂತೆ ಅಡ್ಡಲಾಗಿ ಕಾರು ಚಲಾಯಿಸಿದ್ದಾನೆ.

ಇದನ್ನು ಓದಿ: ನೆಲಗಡಲೆಯನ್ನು ತಿನ್ನಲು ಹರಸಾಹಸ ಪಡುತ್ತಿರುವ ಅಳಿಲು!

ಘಟನೆ ನಡೆದಿದ್ದು ಕೇರಳದಲ್ಲಿ. ಕೇರಳದ ಹೆದ್ದಾರಿಯೊಂದರಲ್ಲಿ ವಿಪರೀತ ಮಳೆಯ ನಡುವೆ ವೇಗವಾಗಿ ಆಂಬ್ಯುಲೆನ್ಸ್​​ ಹೋಗುವಾಗ ಅದರ ಮುಂದೆ ಹೋಗುತ್ತಿದ್ದ ಟೊಯೊಟಾ ಎಟಿಯೋಸ್ ಸೆಡಾನ್ ಕಾರು ಆಂಬ್ಯುಲೆನ್ಸ್​​ಗೆ ದಾರಿ ಮಾಡಿಕೊಡದೇ, ಆಂಬ್ಯುಲೆನ್ಸ್​​ ಜೊತೆ ಪೈಪೋಟಿಗೆ ಇಳಿದಿದೆ. ಆಂಬ್ಯುಲೆನ್ಸ್​​ ಚಾಲಕ ಎಷ್ಟೇ ಹಾರ್ನ್​​ ಹಾಕಿದರೂ, ಹಾರ್ನ್​​ ಕೇಳಿಸಿದರು ಕೇಳಿಸದಂತೆ ವಿಪರೀತ ವೇಗದಲ್ಲಿ ಮುಂದೆ ಸಾಗಿದ್ದಾನೆ.  ಇದನ್ನು  ಆಂಬ್ಯುಲೆನ್ಸ್ ಲೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ವಿಡಿಯೋದಲ್ಲಿ ಮಳೆಯಿಂದ ರಸ್ತೆ ಸಂಪೂರ್ಣವಾಗಿ ಒದ್ದೆಯಾಗಿದೆ. ಈ ಮಧ್ಯೆ ಆಂಬ್ಯುಲೆನ್ಸ್​​ ಬರುತ್ತಿದ್ದಂತೆ ಉಳಿದ ವಾಹನಗಳು ಆಂಬ್ಯುಲೆನ್ಸ್​​ಗೆ ದಾರಿ ಮಾಡಿಕೊಟ್ಟಿವೆ ಆದರೆ ಈ ಕಾರು ಚಾಲಕ ಮಾತ್ರ ದಾರಿ ಮಾಡಿಕೊಟ್ಟಿಲ್ಲ.

ಹೀಗೆ ಕಾರು ವೇಗವಾಗಿ ಮುಂದೆ ಹೋಗುತ್ತಿದ್ದಂತೆ ಚಾಲಕನು ಮುಂಭಾಗದಲ್ಲಿ ಟ್ರಕ್​​​ನ್ನು ಕಂಡಿದ್ದಾನೆ. ನಂತರ ಕಾರು ಚಾಲಕ ಟ್ರಕ್​​ನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ, ಅವನು ಕಾರಿನ ಮೇಲೆ ನಿಯಂತ್ರಣವನ್ನು ಕಳೆದುಕೊಂಡನು ಮತ್ತು ಕಾರು ಸ್ಕಿಡ್ ಆಗಿ ರಸ್ತೆಯ ಮಧ್ಯಭಾಗದಲ್ಲಿರುವ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.

Published On - 8:30 pm, Wed, 29 June 22