AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೆಲಗಡಲೆಯನ್ನು ತಿನ್ನಲು ಹರಸಾಹಸ ಪಡುತ್ತಿರುವ ಅಳಿಲು!

ಇತ್ತೀಚೆಗಷ್ಟೇ ಅಳಿಲೊಂದು ಕಡಲೆಕಾಯಿ ತಿನ್ನಲು ಪ್ರಯತ್ನಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.  ಅಳಿಲು  ಕಡಲೆ ಕಾಯಿಯನ್ನು ತಿನ್ನಲು ಹರಸಾಹಸ ಮಾಡುತ್ತಿದೆ.  ಆದರೆ ಅದು ತನ್ನ ಬಾಯಿ ಒಳಗೆ ಹೋಗುತ್ತಿಲ್ಲ, ಈ ವಿಡಿಯೋ ತುಂಬಾ ಮುದ್ಧಾಗಿ ಸೆರೆಯಾಗಿದೆ. 

Viral Video: ನೆಲಗಡಲೆಯನ್ನು ತಿನ್ನಲು ಹರಸಾಹಸ ಪಡುತ್ತಿರುವ ಅಳಿಲು!
Viral Video
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 29, 2022 | 7:24 PM

ಅಳಿಲುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅವುಗಳು ಮಾಡುವ ಕೆಲವೊಂದು ತಮಾಷೆಯ ಸನ್ನಿವೇಶಗಳು ನಿಮ್ಮ ಮನಸ್ಸಿಗೆ ಖುಷಿ ನೀಡುವುದು ಖಂಡಿತ.  ಅವುಗಳ ಮುಗ್ಧ ನಡವಳಿಕೆ ಮತ್ತು  ವರ್ತನೆಗಳು ನೋಡುಗರ ಹೃದಯವನ್ನು ಸಂತೋಷಗೊಳಿಸುತ್ತದೆ . ಇತ್ತೀಚೆಗಷ್ಟೇ ಅಳಿಲೊಂದು ಕಡಲೆಕಾಯಿ ತಿನ್ನಲು ಪ್ರಯತ್ನಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.  ಅಳಿಲು  ಕಡಲೆ ಕಾಯಿಯನ್ನು ತಿನ್ನಲು ಹರಸಾಹಸ ಮಾಡುತ್ತಿದೆ.  ಆದರೆ ಅದು ತನ್ನ ಬಾಯಿ ಒಳಗೆ ಹೋಗುತ್ತಿಲ್ಲ, ಈ ವಿಡಿಯೋ ತುಂಬಾ ಮುದ್ಧಾಗಿ ಸೆರೆಯಾಗಿದೆ.

ಅಳಿಲು ಕ್ಯಾಮರದಲ್ಲಿ ನನ್ನನ್ನೂ ಸೆರೆಹಿಡಿಯಲಾಗುತ್ತಿದೆ ಎಂದು ಗೊತ್ತಾಗುತ್ತದೆ. ತಕ್ಷಣ ಕ್ಯಾಮರದಿಂದ ತನ್ನ ಗಮನವನ್ನು   ಬೇರೆ ಕಡೆ ತಿರುಗಿಸುತ್ತದೆ. ಆ ಕಡೆ ತಿರುಗಿದರು ಕಡಲೆ ಕಾಯಿ ಜಗ್ಗಿಯುವುದನ್ನು ನಿಲ್ಲಿಸುವುದಿಲ್ಲ, ಕೊನೆಗೆ ಇದು ಗಟ್ಟಿಯಾದ ಕಡಲೆಯನ್ನು ಬಿಡುವುದಿಲ್ಲ, ಇದರ ಜೊತೆಗೆ ಇನ್ನೊಂದು ಕಡಲೆಯನ್ನು ತೆಗೆದುಕೊಂಡು ಓಡಿ ಹೋಗುತ್ತದೆ.

ನನ್ನನ್ನು ನೋಡುವುದನ್ನು ನಿಲ್ಲಿಸಿ” ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಟ್ವಿಟರ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 30,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ ಈ ವಿಡಿಯೋ . ಈ ಪೋಸ್ಟ್ ಅನ್ನು ಇಲ್ಲಿಯವರೆಗೆ 4,000 ಕ್ಕೂ ಹೆಚ್ಚು ಬಳಕೆದಾರರು ಮರು ಟ್ವೀಟ್ ಮಾಡಿದ್ದಾರೆ. ಈ ವೀಡಿಯೊವನ್ನು ನೋಡಿದವರು ಸಂತೋಷಪಟ್ಟರು ಮತ್ತು  ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ
Image
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Image
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ಇದನ್ನು ಓದಿ: ಸೈಕಲ್​​ ಓಡಿಸುವಾಗ ತಲೆ ಮೇಲೆ ಸೂಟ್​​ಕೇಸ್ ಇಟ್ಟುಕೊಂಡು​​ ಬ್ಯಾಲೆನ್ಸ್​​ ಮಾಡುವ ವ್ಯಕ್ತಿ

ಇದರಲ್ಲಿ ಒಬ್ಬರು ಜನರು ನಾನು ತಿನ್ನುವುದನ್ನು ನೋಡುವುದು ನನಗೆ ಇಷ್ಟವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. “ನನ್ನನ್ನು ವಿಡಿಯೋ ಮಾಡುವುದನ್ನು ನಿಲ್ಲಿಸಿ ಎಂದು ಕಮೆಂಟ್ ಮಾಡಿದ್ದಾರೆ.

ಬ್ಯುಟೆಂಗೆಬೀಡೆನ್ ಹಂಚಿಕೊಂಡ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತವೆ. ಅವರ ಇತ್ತೀಚಿನ ವೀಡಿಯೊಗಳಲ್ಲಿ ಒಂದು ಮಹಿಳೆ ಬಾಯಾರಿದ ಅಳಿಲಿಗೆ ಬಾಟಲಿಯಿಂದ ನೀರು ಕುಡಿಯಲು ಸಹಾಯ ಮಾಡುವುದನ್ನು ತೋರಿಸಿದೆ. ವೀಡಿಯೋವನ್ನು ಶೇರ್ ಮಾಡಿದ ನಂತರ 2.6 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.