ಸೈಕಲ್ ಓಡಿಸುವಾಗ ತಲೆ ಮೇಲೆ ಸೂಟ್ಕೇಸ್ ಇಟ್ಟುಕೊಂಡು ಬ್ಯಾಲೆನ್ಸ್ ಮಾಡುವ ವ್ಯಕ್ತಿ
ವ್ಯಕ್ತಿಯೋರ್ವ ತೆಲೆ ಮೇಲೆ ಸೂಟ್ಕೇಸ್ ಇಟ್ಟುಕೊಂಡು ಬ್ಯಾಲೆನ್ಸ್ ಮಾಡಿಕೊಂಡು ಸೈಕಲ್ ಓಡಿಸಿದ್ದಾನೆ.
ಸಾಮಾನ್ಯವಾಗಿ ರಸ್ತೆಯಲ್ಲಿ ಸೈಕಲ್ ಮೇಲೊ ಅಥವಾ ಬೇರೆ ಯಾವುದೆ ವಾಹನದಲ್ಲಿ ಹೋಗುವಾಗ ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ನಾವು ಎಷ್ಟೇ ಜಾಗೃತಿಯಿಂದ ಇದ್ದರೂ ಅಪಘಾತ ಸಂಭವಿಸುತ್ತದೆ. ಆದರೆ ವೈರಲ್ ಆದ ಈ ವಿಡಿಯೋದಲ್ಲಿ ವ್ಯಕ್ತಿಯೋರ್ವ ಸೈಕಲ್ನಲ್ಲಿ ರಸ್ತೆ ಮೇಲೆ ಹೋಗುವಾಗ, ತಲೆಯ ಮೇಲೆ ಸೂಟ್ಕೇಸ್ ಇಟ್ಟುಕೊಂಡು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾನೆ. ಈತನ ಈ ಸಾಹಸ ಕಾರ್ಯ ನೋಡಿ ಅಕ್ಕಪಕ್ಕ ಇದ್ದ ಜನರು ಬೆರಗಾಗಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ನಾನಾ ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋದಲ್ಲಿ ಈ ಚಮತ್ಕಾರಿಕ ದೃಶ್ಯಾವಳಿ ಕಂಡು ಬಂದಿದ್ದು ಅಮೇರಿಕದಲ್ಲಿ. ವ್ಯಕ್ತಿಯೋರ್ವ ತಲೆ ಮೇಲೆ ಸೂಟ್ಕೇಸ್ ಇಟ್ಟುಕೊಂಡು ಬ್ಯಾಲೆನ್ಸ್ ಮಾಡಿಕೊಂಡು ಸೈಕಲ್ ಓಡಿಸಿದ್ದಾನೆ. ದೃಶ್ಯಾವಳಿಯನ್ನು ನೌ ದಿಸ್ ಎಂಬ ಟ್ವಿಟರ್ ಖಾತೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Heavy load! This cyclist balances a suitcase on his head while traveling up Brooklyn’s 5th Avenue ? pic.twitter.com/ndXdHxmd1f
— NowThis (@nowthisnews) June 28, 2022
— Ruined (@ruinedxjosh) June 28, 2022