Viral Photo: ಭೂಕಂಪದಿಂದ ಅನಾಥವಾಯಿತು ಶ್ವಾನ! ಇಲ್ಲಿದೆ ನೋಡಿ ಭಾವನಾತ್ಮಕ ಫೋಟೋ
ಮನೆಗಳ ನಡುವೆ ಶ್ವಾನ ಒಂದು ನಿಂತಿರುವುದನ್ನು ತೋರಿಸುವ ಫೋಟೋ ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ಸಮಿರಾ ಎಸ್‌ಆರ್ ಎಂಬುವವರು ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ. ಭೂಕಂಪದ ನಂತರ ಈ ದೃಶ್ಯ ಕಂಡು ಬಂದಿದೆ. ಈ ಶ್ವಾನಕ್ಕೆ ಸಂಬಂಧಿಸಿದವರು ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಭೂಕಂಪವಾಗಿತ್ತು. ಅನೇಕ ಸಾವು- ನೋವುಗಳ ಸಂಭವಿಸಿತ್ತು. ಅದೆಷ್ಟೋ ಮನೆಗಳು ಧ್ವಂಸಗೊಂಡಿತ್ತು. ಆದರೆ ಇದೀಗ ಇದರ ನಡುವೆ ಒಂದು ಫೋಟೋ ಸಖತ್ ವೈರಲ್ ಆಗುತ್ತಿದೆ. ಮನೆಗಳ ನಡುವೆ ಶ್ವಾನ ಒಂದು ನಿಂತಿರುವುದನ್ನು ತೋರಿಸುವ ಫೋಟೋ ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ಸಮಿರಾ ಎಸ್‌ಆರ್ ಎಂಬುವವರು ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ. ಭೂಕಂಪದ ನಂತರ ಈ ದೃಶ್ಯ ಕಂಡು ಬಂದಿದೆ. ಈ ಶ್ವಾನಕ್ಕೆ ಸಂಬಂಧಿಸಿದವರು ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ. ನೆರೆಹೊರೆಯವರು ಈ ಶ್ವಾನಕ್ಕೆ ಆಹಾರ ಮತ್ತು ಆರೈಕೆಯನ್ನು ಮಾಡುತ್ತಿದ್ದಾರೆ. ಆ ಶ್ವಾನ ನಾಶವಾದ ಮನೆಗೆ ಹಿಂತಿರುವಾಗ ಅದು ಅಳುತ್ತದೆ, ಈ ವೀಡಿಯೊದಲ್ಲಿ ಒಂದು ಶೀರ್ಷಿಕೆಯನ್ನು ನೀವು ನೋಡಬಹುದು.
ಪೋಸ್ಟ್ ಪ್ರಕಾರ, ಚಿತ್ರವನ್ನು ಗಯಾನ್, ಪಕ್ಟಿಕಾದ ಓಚ್ಕಿ ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ. ಶ್ವಾನ ತನ್ನ ಮಾಲೀಕರಿಗಾಗಿ ಹತಾಶವಾಗಿ ಹುಡುಕುತ್ತಿರುವ ಹೃದಯ ವಿದ್ರಾವಕ ಚಿತ್ರದಿಂದ ಟ್ವಿಟರ್ ಬಳಕೆದಾರರು ಭಾವನಾತ್ಮಕವಾದ ಕಮೆಂಟ್ ಗಳನ್ನು ಹಾಕಿದ್ದಾರೆ. ಶ್ವಾನವು ಪ್ರೀತಿಯ ಮನೆ ಮತ್ತು ಆರೈಕೆಗೆ ಮಾಡುವವರು ಬೇಕು ಅದಕ್ಕೆ ನಾವು ಆ ಶ್ವಾನವನ್ನು ನಾವು ದತ್ತು ಪಡೆಯುತ್ತೇವೆ ಎಂದು ದತ್ತು ಪಡೆಯಲು ಮುಂದಾಗಿದ್ದಾರೆ.
ಇದನ್ನು ಓದಿ: ಆನೆಯ ಆಟಕ್ಕೆ ಸುಸ್ತಾದ ರೂಪದರ್ಶಿ, ಸಖತ್ ವೈರಲ್ ಆಗುತ್ತಿದೆ ಈ ವಿಡಿಯೋ
ನಾವು ಮನುಷ್ಯರು ಎಲ್ಲವನ್ನು ಪಡೆದುಕೊಳ್ಳಬಹುದ ಮತ್ತು ಇದನ್ನು ಸಾಕುವುದರಿಂದ ಅದಕ್ಕೆ ಒಂದು ಆಶ್ರಯ ಸಿಕ್ಕಂತೆ ಆಗುತ್ತದೆ. ಈ ಶ್ವಾನಕ್ಕೆ ಕಾಳಜಿ ಮೂಡಿಸುವ ಮನಸ್ಸುಗಳು ಬೇಕು ಎಂದು ಸಾಮಾಜಿಕ ಜಾಲತಾಣ ಬಳಕೆದಾರರೂ ಕಮೆಂಟ್ ಮಾಡಿದ್ದಾರೆ. ಆ ಶ್ವಾನಕ್ಕೆ ತನ್ನವರನ್ನು ಕಳೆದುಕೊಂಡಿರುವ ಶಕ್ತಿಯನ್ನು ಭಗವಂತನು ನೀಡಲಿ” ಎಂದು ಮತ್ತೊಬ್ಬರು ಬರೆದಿದ್ದಾರೆ.
Every person in the house this dog belongs to was killed in the earthquake. Neighbours said they took him with them to feed/take care of. He keeps coming back to the destroyed house and wails.Ochki village in Gayan, Paktika.#AfghanistanEarthquake #Afghanistan pic.twitter.com/A7oCoGIn2V
— Samira SR (@SSamiraSR) June 26, 2022
Published On - 5:01 pm, Wed, 29 June 22