Viral Video: ಆನೆಯ ಆಟಕ್ಕೆ ಸುಸ್ತಾದ ರೂಪದರ್ಶಿ, ಸಖತ್ ವೈರಲ್ ಆಗುತ್ತಿದೆ ಈ ವಿಡಿಯೋ

ರೂಪದರ್ಶಿಯೊಬ್ಬರು ಇತ್ತೀಚೆಗೆ ಥೈಲ್ಯಾಂಡ್‌ನ ಚಿಯಾಂಗ್ ಮಾಯ್‌ನಲ್ಲಿರುವ ಅಭಯಾರಣ್ಯಕ್ಕೆ ಭೇಟಿ ನೀಡಿದಾಗ ಆನೆಯ ಮರಿಯೊಂದಿಗೆ ಆಟವಾಡಿದ್ದಾರೆ, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.  

Viral Video: ಆನೆಯ ಆಟಕ್ಕೆ ಸುಸ್ತಾದ ರೂಪದರ್ಶಿ, ಸಖತ್ ವೈರಲ್ ಆಗುತ್ತಿದೆ ಈ ವಿಡಿಯೋ
Viral Video
TV9kannada Web Team

| Edited By: ಅಕ್ಷಯ್​ ಕುಮಾರ್​​

Jun 30, 2022 | 12:46 PM

ಆನೆಗಳ ತುಂಟಾಟದ ವಿಡಿಯೋವನ್ನು ನೋಡಲು ತುಂಬಾ ಮಜಾವಾಗಿರುತ್ತದೆ.  ಸಾಮಾಜಿಕ ಜಾಲತಾಣದಲ್ಲಿ ಆನೆಗಳ ವಿಡಿಯೋ ಸಖತ್ ವೈರಲ್ ಆಗುತ್ತಿದೆ.  ಕೆಲವೊಂದು ಸಾಹಸ ಮತ್ತು ಕಾಮಿಡಿ ವಿಡಿಯೋಗಳು ಸಖತ್ ಇರುತ್ತದೆ. ಇದೀಗ ಇದಕ್ಕೆ ಸಾಕ್ಷಿ ಇಲ್ಲೊಂದು ವಿಡಿಯೋ ಸಖತ್ ವೈರಲ್ ಆಗಿದೆ. ರೂಪದರ್ಶಿಯೊಬ್ಬರು ಇತ್ತೀಚೆಗೆ ಥೈಲ್ಯಾಂಡ್‌ನ ಚಿಯಾಂಗ್ ಮಾಯ್‌ನಲ್ಲಿರುವ ಅಭಯಾರಣ್ಯಕ್ಕೆ ಭೇಟಿ ನೀಡಿದಾಗ ಆನೆಯ ಮರಿಯೊಂದಿಗೆ ಆಟವಾಡಿದ್ದಾರೆ, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ರೂಪದರ್ಶಿ ಹೆಸರು ಮೇಗನ್ ಮಿಲನ್ ಇವರು  ಆನೆಗಳನ್ನು ರಕ್ಷಿಸುವ ಚಿಯಾ ಲಾಯ್ ಆರ್ಕಿಡ್ ಅಭಯಾರಣ್ಯಕ್ಕೆ ಭೇಟಿ ನೀಡಿದಾಗ ಮೂರು ವಾರದ ವಯಸ್ಸಿನ ಆನೆಯು ಅವರೊಂದಿಗೆ ತಮಾಷೆಯಾಗಿ ಆಟವಾಡುತ್ತದೆ. ಮೇಗನ್ ಅವರ ಜೊತೆಗೆ ಆನೆಯು ಗುದ್ದಾಡಲು ಶುರು ಮಾಡುತ್ತದೆ.  ಅವರ ಬಟ್ಟೆಯನ್ನು ಕೂಡ ಛಿದ್ರ ಮಾಡುತ್ತದೆ. ಅವರ ಮೈ ಮೇಲೆ ಎಲ್ಲ ಬಿದ್ದು ಅವರ ಜೊತೆಗೆ ಮಜಾವಾದ ದಿನವನ್ನು ಅವರ ಜೊತೆಗೆ ಕಳೆಯುತ್ತದೆ.

ಇದನ್ನು ಓದಿ : ಹರಿದ್ವಾರದ ಸೇತುವೆಯಿಂದ ಗಂಗಾ ನದಿಗೆ ಧುಮುಕಿದ 70ರ ವೃದ್ಧೆ; ಅಜ್ಜಿಯ ಧೈರ್ಯಕ್ಕೆ ನೆಟ್ಟಿಗರು ಶಾಕ್

ಮರಿ ಆನೆ ಪದೇ ಪದೇ ಮೇಗನ್ ಹತ್ತಿರ ಬರುತ್ತದೆ ಮತ್ತು ಅವರ ಸ್ಕರ್ಟ್ ಅನ್ನು ತಮಾಷೆಯಾಗಿ ಎಳೆಯುವ ವಿಡಿಯೋದಲ್ಲಿ ನೋಡಬಹುದು.  ಮಾಡೆಲ್‌ನ ಸ್ಕರ್ಟ್ ಅನ್ನು  ಹರಿಯುವ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅವರನ್ನು ನೆಲಕ್ಕೆ ಹಾಕಿ ಒದ್ದಾಡಿರುವ  ವಿಡಿಯೋವನ್ನು ನೋಡಿದರೆ ನಗು ಬರುತ್ತದೆ. ಆದರೆ ಈ ಆನೆ ಮೂರು ವಾರಗಲ ಮುದ್ದು ಕಂದ ಎಂದು ಅವರು ವಿವರಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ಸಾಮಾಜಿಕ  ಬಳಕೆದಾರರೂ ತಮಾಷೆಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

View this post on Instagram

A post shared by Storyful (@storyfulvideo)

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada