ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ

ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿದ್ದ ಆಟೋ ಚಾಲಕನ ರಕ್ಷಣೆಗೆ ಸ್ಥಳೀಯರು ಹರಸಾಹಸಪಟ್ಟರು. ಅರ್ಧಗಂಟೆಗಳ ಕಾಲ ಹರಸಾಹಸದ ಬಳಿಕ ಚಾಲಕನನ್ನು ರಕ್ಷಣೆ ಮಾಡಲಾಯಿತು.

ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ
ಅಪಘಾತದಲ್ಲಿ ಆಟೋ ಜಖಂ ಆಗಿದೆ
TV9kannada Web Team

| Edited By: sandhya thejappa

Jun 13, 2022 | 8:40 AM

ಬೆಂಗಳೂರು: ಮೈಸೂರು ರಸ್ತೆಯ (Mysuru Road) ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ವಾಹನಗಳ ಮಧ್ಯೆ ಅಪಘಾತ (Accident) ನಡೆದಿದೆ. ಟೆಂಪೋ, ಆಟೋ, ಬಿಎಂಟಿಸಿ ಬಸ್ ನಡುವೆ ಡಿಕ್ಕಿಯಾಗಿದ್ದು, ಆಟೋ ಜಖಂವಾಗಿದೆ. ಆಟೋದಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನ ಸ್ಥಳೀಯರು ಹೊರ ತೆಗೆದಿದ್ದಾರೆ. ಅಪಘಾತದಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನು ಸರಣಿ ಅಪಘಾತದಿಂದ ಮೈಸೂರು ರಸ್ತೆಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿದ್ದ ಆಟೋ ಚಾಲಕನ ರಕ್ಷಣೆಗೆ ಸ್ಥಳೀಯರು ಹರಸಾಹಸಪಟ್ಟರು. ಅರ್ಧಗಂಟೆಗಳ ಕಾಲ ಹರಸಾಹಸದ ಬಳಿಕ ಚಾಲಕನನ್ನು ರಕ್ಷಣೆ ಮಾಡಲಾಯಿತು. ಆಟೋ ಚಾಲಕನ ಕಾಲುಗಳು ತುಂಡಾಗಿದೆ ಎಂದು ಹೇಳಲಾಗುತ್ತಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಲಾರಿ ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು: ರಾಯಚೂರು: ಕಬ್ಬಿಣ ತುಂಬಿದ್ದ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಅಂತಗಂಗಿ ಬಳಿ ನಡೆದಿದೆ. ಮುದಗಲ್ ಗ್ರಾಮದ ನಿವಾಸಿ ಶೀಲಪ್ಪ( 40) ಮೃತ ಲಾರಿ ಚಾಲಕ. ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದೆ. ತೆಲಂಗಾಣದ ಮೆಹಬೂಬ್ ನಗರದಿಂದ ಬಳ್ಳಾರಿಗೆ ಹೊರಟಿದ್ದ ಲಾರಿ ಪಲ್ಟಿಯಾಗಿದ್ದು. ಲಾರಿ ಕೆಳಗಡೆ ಚಾಲಕ ಸಿಲುಕಿದ್ದರು. ಮಾಹಿತಿ ತಿಳಿದು ಮಸ್ಕಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ಮಾಡಿದರು.

ಎರಡು ಜೆಸಿಬಿಗಳ ಸಹಾಯದಿಂದ ಪೊಲೀಸರು ಲಾರಿ ಕೆಳಗಡೆ ಸಿಲುಕಿದ್ದ ಮೃತದೇಹವನ್ನು ಹೊರ ತೆಗೆದಿದ್ದಾರೆ. ಚಾಲಕನ ಮೃತದೇಹವನ್ನು ಹೊರ ತೆಗೆಯಲು ಹರಸಾಹಸ ಪಟ್ಟ ವಿಡಿಯೋ ವೈರಲ್ ಆಗಿದೆ.

ಬೈಕ್​ನಿಂದ ಬಿದ್ದು ಉದ್ಯಮಿ ಸಾವು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವ ಬಳಿ ಬೈಕ್ ಸ್ಕಿಡ್​ ಆಗಿ ಹೊಟೇಲ್ ಉದ್ಯಮಿ ಸಾವನ್ನಪ್ಪಿದ್ದಾರೆ. 28 ವರ್ಷದ ದಿನೇಶ್​ ಈರಣ್ಣ ನಾಯಕ್ ಸಾವನ್ನಪ್ಪಿದ ಉದ್ಯಮಿ. ಹೊಟೇಲ್ ಮುಗಿಸಿ ರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದಾಗ ಈ ಘಟನೆ ನಡೆದಿದೆ. ತೆಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada