ಕಾರ್ಯಕ್ರಮದಲ್ಲಿ ಬಿಜೆಪಿ‌ ನಾಯಕರ ಫೋಟೋ; ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಡಿ.ಕೆ.ಸುರೇಶ್ ತರಾಟೆ

ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಬಿಜೆಪಿ ಬ್ಯಾನರ್ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ಡಿಕೆ ಸಹೋದರರ ಪರ ಬೆಂಬಲಿಗರು ಜೈಕಾರ ಹಾಕಿದ್ರು.

ಕಾರ್ಯಕ್ರಮದಲ್ಲಿ ಬಿಜೆಪಿ‌ ನಾಯಕರ ಫೋಟೋ; ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಡಿ.ಕೆ.ಸುರೇಶ್ ತರಾಟೆ
ಸಂಸದ ಡಿಕೆ ಸುರೇಶ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Jun 12, 2022 | 7:33 PM

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಬಿಜೆಪಿ(BJP) ಮತ್ತು ಕಾಂಗ್ರೆಸ್(Congress) ನಾಯಕರು ಭಾಗಿಯಾಗಿದ್ದು ಕಾರ್ಯಕ್ರಮದ ವೇದಿಕೆ ಮೇಲೆ ಬಿಜೆಪಿ‌ ನಾಯಕರ ಫೋಟೋ ಬಳಕೆ ಮಾಡಿದಕ್ಕೆ ಡಿ.ಕೆ.ಸುರೇಶ್(DK Suresh) ಗರಂ ಆಗಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಎಲ್ಲಾ ಕಡೆಗೂ ಬಿಜೆಪಿ ಬಾವುಟ, BJP ನಾಯಕರ ಫೋಟೋ ಹಾಕಿದ್ದಾರೆ. ನಮ್ಮ ಪಕ್ಷದ ನಾಯಕರ ಫೋಟೋ ಕೂಡ ಹಾಕಬಹುದಿತ್ತು. ಸರ್ಕಾರಿ‌ ಕಾರ್ಯಕ್ರಮದಲ್ಲಿ ಫೋಟೋ‌ ಬಳಕೆ ಸರಿಯಲ್ಲ. ಇದು ಎರಡನೇ ಬಾರಿ ಹೇಳ್ತಿದ್ದೇನೆ ಎಂದು ಡಿ.ಕೆ.ಸುರೇಶ್ ಕಿಡಿ ಕಾರಿದ್ದಾರೆ. ಇನ್ಮುಂದೆ ಇದನ್ನ ಸರಿಪಡಿಸುವ ಕೆಲಸ ಸಿಎಂ ಬೊಮ್ಮಾಯಿ ಮಾಡ್ತಾರೆ ಅಂದುಕೊಂಡಿದ್ದೇನೆ ಅಂತಾ ಹೇಳುವ ಮೂಲಕ ಡಿ.ಕೆ.ಸುರೇಶ್ ಭಾಷಣ ಮುಗಿಸಿದ್ದಾರೆ.

ಇದು ಸರ್ಕಾರಿ ಕಾರ್ಯಕ್ರಮನಾ, ಪಕ್ಷದ ಕಾರ್ಯಕ್ರಮನಾ? ಎಂದು ಅಧಿಕಾರಿಗಳಿಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಬಿಜೆಪಿ ಬ್ಯಾನರ್ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ಡಿಕೆ ಸಹೋದರರ ಪರ ಬೆಂಬಲಿಗರು ಜೈಕಾರ ಹಾಕಿದ್ರು. ಇದನ್ನೂ ಓದಿ: ಆಫ್ರಿಕಾದ ಅತ್ಯಂತ ದೊಡ್ದ ದಂತ ಉಳ್ಳ ಆನೆಗಳ ಚಿತ್ರಗಳು ಇಲ್ಲಿವೆ

ಇನ್ನು ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್, ಮುನಿರತ್ನ ಕಾಲೆಳೆದಿದ್ದಾರೆ. ಮುನಿರತ್ನ ಕಾಳಿನಾ ಬೋಳಿ ಮಾಡ್ತಾರೆ ಬೋಳಿನಾ ಕಾಳಿ ಮಾಡ್ತಾರೆ. ಹಾಗಂತ ಎಲ್ಲಾ ಒಳ್ಳೇದು ಮಾಡ್ತಾರೆ ಅಂತ ಅಲ್ಲ ಎಂದು ಮುನಿರತ್ನರ ಕಾರ್ಯವೈಖರಿ ಬಗ್ಗೆ ಕಾಲೆಳೆದಿದ್ದಾರೆ. ಲಕ್ಷ್ಮೀ ದೇವಿನಗರದ ಸ್ಲಂ ಬೋರ್ಡ್‌ ಮನೆಗಳ ನಿರ್ಮಾಣವಾಗ್ತಿದೆ. ಬಹಳ‌ ಸಂತೋಷದ ವಿಚಾರ. ಈ ಸ್ಲಂ‌ ಆರಂಭವಾಗಿ 35 ವರ್ಷಗಳಾಗಿವೆ. ಈ‌ ಹಿಂದೆ‌ ಶಾಸಕ ರಮೇಶ್‌ ಅವರು ಮನೆಗಳನ್ನ ನಿರ್ಮಿಸೋಕೆ‌ ಪ್ರಯತ್ನಪಟ್ಟರು. ಅಲ್ಲಿಂದ‌ ಇಂದಿನವರೆಗೂ ಜನರು‌ ಹೆಚ್ಚುತ್ತಲೇ ಇದ್ದಾರೆ. ಈ‌ ಹಿಂದೆ ಮನಮೋಹನ್ ಸಿಂಗ್ ಅವಧಿಯಲ್ಲೂ ವಿ.ಸೋಮಣ್ಣ ಅವರು‌ ವಸತಿ ಸಚಿವರಾಗಿದ್ದಾಗ‌ ಮನೆ ನಿರ್ಮಿಸಿಕೊಟ್ಟಿದ್ದಾರೆ. 1580 ಮನೆಗಳನ್ನ ಈ ಹಿಂದೆ ಕಟ್ಟಲಾಗಿತ್ತು. 1300 ಕುಟಂಬಗಳನ್ನ ತೆರವು ಗೊಳಿಸಿ ಈಗ ಅವರಿಗೆ‌ ನೂತನ ಮನೆಗಳ ನಿರ್ಮಿಸಲಾಗ್ತಿದೆ. ಸಿಎಂ‌ ಅವರಿಗೆ ಧನ್ಯವಾದ. ಕೇಂದ್ರಸರ್ಕಾರ 1.50/_ಲಕ್ಷ, ರಾಜ್ಯ ಸರ್ಕಾರ‌ 1.80. ಲಕ್ಷ ಪ್ರೋತ್ಸಾಹ ಧನ ನೀಡಲಾಗ್ತಿದೆ. ಇಲ್ಲಿಯ ಮನೆಗಳ ನಿರ್ಮಾಣಕ್ಕೆ ಆರೂವರೆ‌ ಲಕ್ಷ ಹಣ‌ ಆಗ್ತಿದೆ. ಉಳಿದ‌ ಹಣವನ್ನ ಬ್ಯಾಂಕ್ ಗಳಿಂದ ಎರಡೂವರೆ‌ ಲಕ್ಷ ಸಾಲ ನೀಡಬೇಕು ಅನ್ನೋದು‌ ಬೋರ್ಡ್ ನಿಯಮ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಡಿಕೆ ಸುರೇಶ್ ಫ್ಲೆಕ್ಸ್ ಬ್ಯಾನರ್​ಗೆ ಪ್ರತಿ ಉತ್ತರ ಕೊಟ್ಟ ಮುನಿರತ್ನ‌ ಸಾರ್ ಮುಂಜೆಗಿಂತ ಕಡಿಮೆ ಮಾಡಿದ್ದೇನೆ. ನಾನು ಬಿಜೆಪಿಗೆ ಬಂದ ಮೇಲೆ ಫ್ಲೆಕ್ಸ್ ಹಾಕುವುದನ್ನ ಕಡಿಮೆ ಮಾಡು ಅಂತ ಹೇಳಿದ್ರು. ಆಗಿನಿಂದ ಕಡಿಮೆ ಮಾಡಿದ್ದೀನಿ‌. ಇನ್ನು ಕಡಿಮೆ ಮಾಡಿ ಅಂತ ಹೇಳಿದ್ರೆ ಇನ್ನು ಕಡಿಮೆ ಮಾಡ್ತೇನೆ. ಇಂದು ಭಾರತೀಯ ಜನತಾ ಪರ್ಟಿ ರಕ್ಷಣೆ ನೀಡುತ್ತಿದೆ. 2023ಕ್ಕೆ ಕಮಲ ಗುರುತು ರಾಜ್ಯದಲ್ಲಿ ಹರಿಯುತ್ತೆ. ಮುಖ್ಯಮಂತ್ರಿ ಸ್ಥಾನವನ್ನ ನಮ್ಮ ಬಿಜೆಪಿ ತೆಗೆದುಕೊಳ್ಳುತ್ತೆ ಎಂದರು.

Published On - 6:09 pm, Sun, 12 June 22

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್