ಶಿಕ್ಷಣ ಇಲಾಖೆಗೂ ತಟ್ಟಿದ ಲಿಂಗಾಯತ VS ವೀರಶೈವ ಪ್ರತ್ಯೇಕ ಧರ್ಮದ ಎಫೆಕ್ಟ್

ಬಸವಣ್ಣ ಪಾಠ ಪರಿಷ್ಕರಣೆ ‌ಮುಕ್ತವಾಗಿ ಮಾಡುತ್ತೇವೆ ಎಂದು ಶಿಕ್ಷಣ ‌ಇಲಾಖೆ ಹೇಳಿದ್ದು, ಸದ್ಯ ಶಿಕ್ಷಣ ಇಲಾಖೆಯ  ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತ್ತಾಗಿದೆ.

ಶಿಕ್ಷಣ ಇಲಾಖೆಗೂ ತಟ್ಟಿದ ಲಿಂಗಾಯತ VS ವೀರಶೈವ ಪ್ರತ್ಯೇಕ ಧರ್ಮದ ಎಫೆಕ್ಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 13, 2022 | 10:30 AM

ಬೆಂಗಳೂರು: ಲಿಂಗಾಯತ VS ವೀರಶೈವ ಪ್ರತ್ಯೇಕ ಧರ್ಮದ ಎಫೆಕ್ಟ್ ಶಿಕ್ಷಣ ಇಲಾಖೆಗೂ ತಟ್ಟಿದ್ದು, ಶಿಕ್ಷಣ ಇಲಾಖೆ ಪಠ್ಯಪುಸ್ತಕ ‌ಪರಿಷ್ಕರಣೆ ಕಬ್ಬಿಣದ ಕಡಲೆಯಾದಂತ್ತಾಗಿದೆ. ಬಸವಣ್ಣ ಪಾಠ ಪರಿಷ್ಕರಣೆ ‌ಮುಕ್ತವಾಗಿ ಮಾಡುತ್ತೇವೆ ಎಂದು ಶಿಕ್ಷಣ ‌ಇಲಾಖೆ ಹೇಳಿದ್ದು, ಸದ್ಯ ಶಿಕ್ಷಣ ಇಲಾಖೆಯ  ಪರಿಸ್ಥಿ ತಿ ಅಡಕತ್ತರಿಯಲ್ಲಿ ಸಿಲುಕಿದಂತ್ತಾಗಿದೆ. ಬಸವಣ್ಣ ಯಾವ ಸಿದ್ದಾಂತವನ್ನು ಪ್ರತಿಪಾದಿಸಿದರು ಎಂಬ ಅಂಶವನ್ನು ಅಳವಡಿಸಲು ವಿಚಾರ ಮಾಡಲಾಗುತ್ತಿದೆ. ಬಸವಣ್ಣನ ಪಾಠಕ್ಕೂ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಭಾವ ಬೀರಿದ್ದು, ಯಾವ ಧರ್ಮ ಪ್ರಚಾರ ಮಾಡಿದರು ಎಂಬುದನ್ನ ಪಠ್ಯದಲ್ಲಿ ಸೇರಿಸಬೇಕೆಂಬ ಗೊಂದಲಕ್ಕೆ ಶಿಕ್ಷಣ  ಇಲಾಖೆ ಸಿಲುಕಿದೆ. ಲಿಂಗಾಯತ ಸ್ವಾಮೀಜಿಗಳು ಬಸವಣ್ಣ ಲಿಂಗಾಯತ ಧರ್ಮ ಪ್ರಚಾರ ಮಾಡಿದರು ಎಂಬುದನ್ನ ಸೇರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ‌ವೀರಶೈವ ಸ್ವಾಮೀಜಿಗಳು ಇದಕ್ಕೆ ತಿರುಗೇಟು ನೀಡಿದ್ದು, ಬಸವಣ್ಣ ವೀರಶೈವ ಧರ್ಮ ಪ್ರಚಾರ ಮಾಡಿದರು ಎಂಬುದು ಸರಿ. ವೀರಶೈವ ಎಂಬುದಕ್ಕೆ ನಮ್ಮ ಸಹಮತ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಪತ್ರ ಬರೆದಿದ್ದಾರೆ. ಬಸವಣ್ಣ ಲಿಂಗಾಯತ ಹೊಸ ಧರ್ಮ ಸ್ಥಾಪನೆ ಮಾಡಿದರು ಎನ್ನುವುದು ಧರ್ಮ ರಾಜರಕಾರಣದ ಅಪಪ್ರಚಾರ. ಇದಕ್ಕೆ ಅಂತಿಮ ತೆರೆಯನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಡಲಿ ಎಂದು ವೀರಶೈವ ಸ್ವಾಮೀಜಿಗಳ ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: Rishabh Pant: ಸತತ 2ನೇ ಸೋಲಿನ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ರಿಷಭ್ ಪಂತ್: ಏನಂದ್ರು ಗೊತ್ತೇ?

ಲಿಂಗಾಯತ ಸ್ವಾಮೀಜಿಗಳ ವಾದ ಏನು..?

ಬಸವಣ್ಣ ಅವರು ವೀರಶೈವ ಮತವನ್ನು ಸುಧಾರಿಸಿದರು ಎಂಬುದು ಶುದ್ಧ ಸುಳ್ಳು. ಬಸವಣ್ಣ ಅವರು ಲಿಂಗಾಯತ ಧರ್ಮ ಜಾರಿಗೆ ತಂದರು ಎಂಬುದು ಸತ್ಯ. ಜಾತಿಯ ಕಡು ವಿರೋಧಿಯಾಗಿದ್ದವರು ಬಸವಣ್ಣ, ತಮ್ಮ ಉಪನಯನದ ಮೂಲಕ ಯಜ್ಞೋಪವೀತ ಕಿತ್ತೆಸೆದು ಕೂಡಲಸಂಗಮಕ್ಕೆ ನಡೆದರು ಎಂಬುದು ಸರಿ.

ವೀರಶೈವ ಸ್ವಾಮೀಜಿಗಳ ವಾದ ಏನು..?

ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂಬುದು ಧರ್ಮ ರಾಜಕಾರಣದ ಅಪಪ್ರಚಾರ. ಬಸವಣ್ಣ ವೀರಶೈವ ಧರ್ಮ ಪ್ರಚಾರ ಮಾಡಿದರು ಎಂಬುದು ಸತ್ಯ ಇದಕ್ಕೆ ನಮ್ಮ ಸಹಮತ ಇದೆ. ಬಸವಣ್ಣ ಅವರು ಉಪನಯನದ ಬಳಿಕ‌ ಕೂಡಲಸಂಗಮಕ್ಕೆ‌ ನಡೆದರು ಎಂಬುದು ಸತ್ಯಕ್ಕೆ ದೂರವಾದದ್ದು. ಬಸವಣ್ಣನವರಿಗೆ ಇನ್ನೇನು ಉಪನಯನ ಸಂಸ್ಕಾರ ನೀಡಬೇಕೆಂದು ಮುಂದಾಗಿದ್ದರು. ಆಗ ತಮ್ಮ ಅಕ್ಕ ನಾಗಮ್ಮನಿಗೂ ಉಪನಯನ ಸಂಸ್ಕಾರ ನೀಡಬೇಕೆಂದು ಬಸವಣ್ಣ ಆಗ್ರಹಿದರು. ಸ್ತ್ರೀಯರಿಗೆ ಉಪನಯನ ಸಂಸ್ಕಾರದ ಅಧಿಕಾರ ಇಲ್ಲವೆಂದಾಗ, ಅಕ್ಕನಿಗೆ ಇಲ್ಲದ ಸಂಸ್ಕಾರ ನನಗೇಕೆಂದು ತಮಗಾಗಬೇಕಿದ್ದ ಉಪನಯನ ಸಂಸ್ಕಾರವನ್ನು ಧಿಕ್ಕರಿಸಿ ಬಸವಣ್ಣನವರು ಕೂಡಲಸಂಗಮಕ್ಕೆ ನಡೆದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:19 am, Mon, 13 June 22

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ