Viral Video: ಹರಿದ್ವಾರದ ಸೇತುವೆಯಿಂದ ಗಂಗಾ ನದಿಗೆ ಧುಮುಕಿದ 70ರ ವೃದ್ಧೆ; ಅಜ್ಜಿಯ ಧೈರ್ಯಕ್ಕೆ ನೆಟ್ಟಿಗರು ಶಾಕ್

ಈ ವಿಡಿಯೋವನ್ನು ಛತ್ತೀಸ್‌ಗಢ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಶೋಕ್ ಬಸೋಯಾ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆಕೆಯ ದೃಢ ನಿರ್ಧಾರಕ್ಕೆ ಜನ ಶಾಕ್ ಆಗಿದ್ದಾರೆ.

ಸೇತುವೆಯಿಂದ ಹಾರಿದ ಅಜ್ಜಿಯ ವಿಡಿಯೋ ವೈರಲ್Image Credit source: India.com
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 29, 2022 | 1:06 PM

ಹರಿದ್ವಾರ: ಏನಾದರೂ ಸಾಧಿಸಬೇಕು ಎಂಬ ಹಠವಿದ್ದರೆ ಅದಕ್ಕೆ ವಯಸ್ಸು ಅಡ್ಡಿಯಾಗಲಾರದು ಎಂಬ ಮಾತಿದೆ. 70 ವರ್ಷದ ವೃದ್ಧೆಯೊಬ್ಬರು ತಮ್ಮ ಧೈರ್ಯದಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ. ವಯಸ್ಸಾದ ಮೇಲೆ ಎಲ್ಲರಿಗೂ ತೀರ್ಥಯಾತ್ರೆಗೆ ಹೋಗಬೇಕೆಂಬ ಆಸೆ ಸಹಜ. ಆದರೆ, ಸಾಹಸ ಕ್ರೀಡೆಗಳಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ ಈ 70 ವರ್ಷದ ಅಜ್ಜಿ ಹರಿದ್ವಾರದ (Haridwar) ಎತ್ತರದ ಸೇತುವೆಯಿಂದ ಗಂಗಾನದಿಗೆ ಹಾರಿ, ಅಲ್ಲಿನ ಪವಿತ್ರ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಈ ವೃದ್ಧೆ ಗಂಗಾ ನದಿಗೆ ಹಾರುವ ಮೊದಲು ಹರಿದ್ವಾರದ ಹರ್ ಕಿ ಪೌರಿ ಘಾಟ್‌ನಲ್ಲಿರುವ ಸೇತುವೆಯಿಂದ ಮುಂದೆ ಜಿಗಿಯುವುದನ್ನು ವಿಡಿಯೋದಲ್ಲಿ ಕಾಣಬಹುದು.

ನದಿಗೆ ಹಾರುವಾಗ ಸುತ್ತಲೂ ಇದ್ದ ನೋಡುಗರು ಆ ಅಜ್ಜಿಯನ್ನು ಹುರಿದುಂಬಿಸುತ್ತಾರೆ. ಆಗ ಸೇತುವೆಯಿಂದ ಹಾರಿದ ಅಜ್ಜಿ ತುಂಬಿ ಹರಿಯುತ್ತಿದ್ದ ಗಂಗಾ ನದಿಯ ಪ್ರವಾಹದ ಉದ್ದಕ್ಕೂ ಈಜುತ್ತಾ, ತನ್ನ ಪವಿತ್ರ ಸ್ನಾನವನ್ನು ಆನಂದಿಸುತ್ತಾರೆ.

ಈ ವಿಡಿಯೋವನ್ನು ಛತ್ತೀಸ್‌ಗಢ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಶೋಕ್ ಬಸೋಯಾ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆಕೆಯ ದೃಢ ನಿರ್ಧಾರಕ್ಕೆ ಜನ ಶಾಕ್ ಆಗಿದ್ದಾರೆ.

ಅನೇಕರು ಅವಳ ಆತ್ಮವನ್ನು ಶ್ಲಾಘಿಸಿದ್ದಾರೆ. ಈ ವಯಸ್ಸಿನಲ್ಲೂ ಹೆದರದೆ ಅಷ್ಟು ಎತ್ತರದಿಂದ ಜಿಗಿದ ಅಜ್ಜಿಯ ಹಠಕ್ಕೆ ಅನೇಕರು ಅಭಿನಂದಿಸಿದ್ದಾರೆ.

Published On - 1:05 pm, Wed, 29 June 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ