Accident: ಉತ್ತರ ಪ್ರದೇಶದಲ್ಲಿ ಹರಿದ್ವಾರದಿಂದ ಭಕ್ತರನ್ನು ಸಾಗಿಸುತ್ತಿದ್ದ ವಾಹನ ಅಪಘಾತ, 10 ಜನ ಸಾವು, 7 ಮಂದಿಗೆ ಗಾಯ
ಉತ್ತರ ಪ್ರದೇಶದ ಡಿಸಿಎಂ ವಾಹನ ಇಂದು ಬೆಳಗಿನ ಜಾವ 4:30ರ ಸುಮಾರಿಗೆ ಅಪಘಾತಕ್ಕೀಡಾಗಿ 10 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶ : ಹರಿದ್ವಾರದಿಂದ ಹಿಂತಿರುಗುತ್ತಿದ್ದ ಉತ್ತರ ಪ್ರದೇಶದ ಡಿಸಿಎಂ (Uttar Pradesh) ವಾಹನ ಇಂದು ಬೆಳಗಿನ ಜಾವ 4:30ರ ಸುಮಾರಿಗೆ ಅಪಘಾತಕ್ಕೀಡಾಗಿ (Accident) 10 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಡಿಸಿಎಂ ವಾಹನದಲ್ಲಿ 17 ಜನರು ಪ್ರಯಾಣಿಸುತ್ತಿದ್ದರು. ಈ 17 ಜನರಲ್ಲಿ, 10 ಜನರು ಸ್ಥಳದಲ್ಲೇ ಸಾವನ್ನಪ್ಪಿದರು, 5 ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 2 ಜನರು ಬರೇಲಿಗೆ ದಾಖಲಿಸಲಾಗಿದೆ. ನಾವು ಅವರ ಕುಟುಂಬಗಳನ್ನು ಸಂಪರ್ಕಿಸಿದ್ದೇವೆ ಎಂದು ಪಿಲ್ಭಿತ್ ಡಿಎಂ ಪುಲ್ಕಿತ್ ಖರೆ ಹೇಳಿದ್ದಾರೆ.
ವರದಿಗಳ ಪ್ರಕಾರ, ಹರಿದ್ವಾರದಿಂದ ಲಖಿಂಪುರ್‌ಗೆ ಹಿಂತಿರುಗುತ್ತಿದ್ದಾಗ ಉತ್ತರ ಪ್ರದೇಶದ ಪಿಲಿಭಿತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಕ್ತರನ್ನು ಸಾಗಿಸುತ್ತಿದ್ದ ವಾಹನವು ಮರಕ್ಕೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿದೆ.
UP | 10 dead, 7 injured after a DCM vehicle returning from Haridwar met with an accident at about 4:30 am this morning. Of the 17 people, 10 died on the spot, 5 being treated at a district hospital, 2 referred to Bareilly. We’ve contacted their families..: Pilbhit DM Pulkit Khare pic.twitter.com/V92UDkn17U
— ANI UP/Uttarakhand (@ANINewsUP) June 23, 2022
ಇದಕ್ಕೂ ಮೊದಲು, ಅಮುಲ್ ಮಾಲೀಕತ್ವದ ಭಾರತದ ಪ್ರಮುಖ ಡೈರಿ ಸಹಕಾರಿ ಜಿಸಿಎಂಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌ಎಸ್ ಸೋಧಿ ಅವರು ಗುಜರಾತ್‌ನ ಆನಂದ್ ಪಟ್ಟಣದ ಬಳಿ ಬುಧವಾರ ರಾತ್ರಿ ರಸ್ತೆ ಅಪಘಾತಕ್ಕೊಳಗಾಗಿದ್ದರು. ಸಣ್ಣಪುಟ್ಟ ಗಾಯಗಳಾಗಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ಡಿ. ಜಡೇಜಾ ಅವರ ಪ್ರಕಾರ, ರಾತ್ರಿ 9 ಗಂಟೆಗೆ ಆನಂದ್- ಬಕ್ರೋಲ್ ರಸ್ತೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಸೋಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 am, Thu, 23 June 22