Viral Photos: “ಅಗ್ಲೀಯೆಸ್ಟ್” ಎಂದು ಕರೆಯಲ್ಪಡುವ ದೈತ್ಯಾಕಾರದ ಮೀನು ಪತ್ತೆ!
ಆಗ್ನೇಯ ಆಸ್ಟ್ರೇಲಿಯಾದಲ್ಲಿ "ಅಗ್ಲೀಯೆಸ್ಟ್" ಎಂದು ಕರೆಯಲ್ಪಡುವ ಅಪರಿಚಿತ ಜೀವಿಯೊಂದು ಸಿಕ್ಕಿಬಿದ್ದಿದೆ. ಮೀನುಗಾರ ಜೇಸನ್ ಮೋಯ್ಸ್, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಳ್ಳತ್ತಾರೆ. ಟ್ರ್ಯಾಪ್‌ಮ್ಯಾನ್ ಬೆರ್ಮಗುಯಿ ಎಂಬ ಮಾನಿಕರ್‌ನೊಂದಿದೆ ಹಡುಗಿನಲ್ಲಿ ಹೋಗುವ ಸಮಯದಲ್ಲಿ ಈ ಮೀನು ಸಿಕ್ಕಿದೆ.
ಆಗ್ನೇಯ ಆಸ್ಟ್ರೇಲಿಯಾದಲ್ಲಿ “ಅಗ್ಲೀಯೆಸ್ಟ್” ಎಂದು ಕರೆಯಲ್ಪಡುವ ಅಪರಿಚಿತ ಜೀವಿಯೊಂದು ಸಿಕ್ಕಿಬಿದ್ದಿದೆ. ಮೀನುಗಾರ ಜೇಸನ್ ಮೋಯ್ಸ್, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಳ್ಳತ್ತಾರೆ. ಟ್ರ್ಯಾಪ್‌ಮ್ಯಾನ್ ಬೆರ್ಮಗುಯಿ ಎಂಬ ಮಾನಿಕರ್‌ನೊಂದಿದೆ ಹಡುಗಿನಲ್ಲಿ ಹೋಗುವ ಸಮಯದಲ್ಲಿ ಈ ಮೀನು ಸಿಕ್ಕಿದೆ. ಈ ಮೀನಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣ ಬಳಕೆದಾರಿಗೆ ಇದರ ಬಗ್ಗೆ ಗೊಂದಲ ಉಂಟಾಗಿದೆ. ಇದು ಯಾವು ಪ್ರಾಣಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಚಾರ್ಟರ್ ಬೋಟ್‌ನ ಕ್ಯಾಪ್ಟನ್ ನಿಗೂ ಕೂಡ ಇದು ಯಾವ ಮೀನು ಎಂದು ತಿಳಿದಿರಲಿಲ್ಲ.
ಸೋಶಿಯಲ್ ಮಿಡಿಯಾದ ಶೀರ್ಷಿಕೆಯಲ್ಲಿ, ಶ್ರೀ ಮೋಯ್ಸ್ ಈ ಬಗ್ಗೆ ಬರೆದುಕೊಂಡಿದ್ದಾರೆ, ಇದು ಬ್ಲಾಬ್‌ಫಿಶ್, ಬೆರ್ಮಗುಯಿಯಿಂದ ಪೂರ್ವದ ಸಮುದ್ರದಲ್ಲಿ ಸಿಕ್ಕಿದೆ. ನಾನು ನೋಡಿದ ಅತ್ಯಂತ ಕೊಳಕು ಮೀನು. ಇದನ್ನು ಸರಿಯಾಗಿ ಸ್ವಚ್ಛ ಮಾಡುವುದು ಉತ್ತಮ. ಮೀನು ಗುಲಾಬಿ-ಬೂದು ಬಣ್ಣವನ್ನು ಹೊಂದಿದೆ. ಅದರ ಕಣ್ಣುಗಳು ಅದರ ತಲೆಯ ಬದಿಗಳಿಂದ ಉಬ್ಬುತ್ತವೆ ಮತ್ತು ದೊಡ್ಡ ಬಾಯಿಯು ಚೂಪಾದ ಹಲ್ಲುಗಳ ಹೊಂದಿದೆ. ದೈತ್ಯಾಕಾರದ ಮೀನು ಎಂದು ಹೇಳೀದ್ದಾರೆ.
ಇದನ್ನು ಓದಿ: ಕಾಶ್ಮೀರದ ದಾಲ್ ಸರೋವರದಲ್ಲಿ ಶ್ವಾನಗಳ ಶಿಕಾರಾ ಸವಾರಿ
ಇದನ್ನು ನೋಡಿ ಬಳಕೆದಾರರನ್ನು ದಿಗ್ಭ್ರಮೆಗೊಂಡಿದ್ದಾರೆ. ಕಮೆಂಟ್ ಮಾಡಿದ ಅನೇಕರು ಇದು ಬ್ಲಾಬ್‌ಫಿಶ್ ಎಂಬ ಮೋಯ್ಸ್ ಅವರ ವಾದವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಇತರರು ಮಾಂಕ್‌ಫಿಶ್ ಅಥವಾ ಟೋಡ್‌ಫಿಶ್ ಎಂದು ಹೇಳಿದ್ದಾರೆ. ಕೆಲವು ಬಳಕೆದಾರರು ಮೀನು “ಖಂಡಿತವಾಗಿಯೂ ದುಃಸ್ವಪ್ನ ಎಂದು ಹಾಸ್ಯಮಯವಾಗಿ ತಮಾಷೆ ಮಾಡಿದರು.