ಪಿಜ್ಜಾ ಶಾಪ್ನಲ್ಲಿ ಕುಳಿತಿದ್ದ ನಿರಾಶ್ರಿತ ಮಕ್ಕಳನ್ನು ಸಿಬ್ಬಂದಿ ಹೊರಕ್ಕೆ ಕಳಿಸಿದ ಮನ ಕಲಕುವ ವಿಡಿಯೋ ವೈರಲ್; ಸಿಬ್ಬಂದಿ ವಿರುದ್ಧ ನೆಟ್ಟಿಗರು ಆಕ್ರೋಶ
ಮಕ್ಕಳನ್ನು ಹೊರಕ್ಕೆ ಕಳಿಸಿದ ಸಿಬ್ಬಂದಿ ವಿರುದ್ಧ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಆ ಮುಗ್ಧ, ಅಮಾಯಕ ಮಕ್ಕಳು ಎದುರಿಸುತ್ತಿರುವ ದುಸ್ಥಿತಿಯನ್ನು ನೋಡಲು ಸಾಧ್ಯವಿಲ್ಲ,” ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ: ಪಿಜ್ಜಾ ತಿನ್ನಲು ಬಂದಿದ್ದ ಸೂರಿಲ್ಲದ ನಿರಾಶ್ರಿತ ಮಕ್ಕಳನ್ನು ಪಿಜ್ಜಾ ಉದ್ಯೋಗಿಯೊಬ್ಬ ಶಾಪ್ನಿಂದ ಹೊರಗೆ ಕಳಿಸುವ ಮನ ಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಪಿಜ್ಜಾ ಉದ್ಯೋಗಿ ಮೇಲೆ ಗರಂ ಆಗಿದ್ದಾರೆ.
ಮೊದಲಿಗೆ ವಿಡಿಯೋದಲ್ಲಿ ಒಬ್ಬ ಬಾಲಕ ಮತ್ತು ಬಾಲಕಿ ಒಂದು ಟೇಬಲ್ನಲ್ಲಿ ಕುಳಿತುಕೊಂಡಿರುತ್ತಾರೆ. ಇದನ್ನು ಗಮನಿಸಿದ ಪಿಜ್ಜಾ ಉದ್ಯೋಗಿ ಅವರಿಬ್ಬರನ್ನೂ ಆಚೆ ಹೋಗಿ ಎಂದು ಬೈಯುತ್ತಾನೆ. ಪಿಜ್ಜಾ ಸಿಬ್ಬಂದಿ ಬೈದಿದನ್ನು ಕೇಳಿ ಕುರ್ಚಿಯಿಂದ ಮೇಲೆದ್ದ ಮಕ್ಕಳು ಸಪ್ಪೆ ಮುಖ ಮಾಡಿಕೊಂಡು ಬಾಗಿಲ ಬಳಿ ಬರುತ್ತಾರೆ. ಆಗ ಮತ್ತೆ ರೇಗುತ್ತಲೇ ಆ ಪಿಜ್ಜಾ ಸಿಬ್ಬಂದಿ ಶಾಪ್ನ ಬಾಗಿಲು ತೆರೆದು ಆಚೆ ಹೋಗುವಂತೆ ಆದೇಶಿಸುತ್ತಾನೆ. ಆಗ ಆ ಇಬ್ಬರು ಮಕ್ಕಳು ಆಚೆ ಹೋಗುತ್ತಾರೆ. ಇದನ್ನೆಲ್ಲ ಗಮನಿಸುತ್ತಿದ್ದ, 2ನೇ ಟೇಬಲ್ನಲ್ಲಿ ಕುಳಿತಿದ್ದ ಪುಟ್ಟ ಬಾಲಕಿಗೂ ಆ ಪಿಜ್ಜಾ ಸಿಬ್ಬಂದಿ ಬೈಯುತ್ತಾನೆ. ಆಗ ಆಕೆ ಕೂಡ ಅವರೊಂದಿಗೆ ಹೊರ ನಡೆಯುತ್ತಾಳೆ. ಆ ಪುಟ್ಟ ಮಕ್ಕಳು ಆಚೆ ಹೋಗುವವರೆಗೂ ಆ ಸಿಬ್ಬಂದಿ ಬಾಗಿಲು ತೆರೆದಿಟ್ಟು ಅಲ್ಲೇ ನಿಂತಿದ್ದು ಅವರು ಹೋದ ಬಳಿಕ ಬಾಗಿಲು ಮುಚ್ಚುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಿಬ್ಬಂದಿ ವರ್ತನೆಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ನೆರೆ ಪೀಡಿತ ಅಸ್ಸಾಂಗೆ 25 ಲಕ್ಷ ರೂಪಾಯಿ ನೀಡಿದ ಆಮಿರ್ ಖಾನ್; ಧನ್ಯವಾದ ಹೇಳಿದ ಸಿಎಂ
Don't Know About The Place But If These Kids Have Paid For Something They Should Be Allowed To Sit Inside.
But The Way The Waiter Is Pushing Them Out And Kids Looking At Each Other Shows, We See The Financial Status Of Person And Decide How Much Respcet To Give.
— ਹਤਿੰਦਰ ਸਿੰਘ (@Hatindersinghr3) June 27, 2022
ಇನ್ನು ಈ ವಿಡಿಯೋವನ್ನು ಎಲ್ಲಿ ಮತ್ತು ಯಾವಾಗ ಚಿತ್ರಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅನೇಕರನ್ನು ಅಸಮಾಧಾನಗೊಳಿಸಿದೆ, ಹಾಗೂ ಮಕ್ಕಳನ್ನು ರೆಸ್ಟೋರೆಂಟ್ ಒಳಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕು. ಅವರೇನು ತಪ್ಪು ಮಾಡಿದರು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ರೆಕಾರ್ಡ್ ಮಾಡುವುದರಿಂದ ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುವುದರಿಂದ ಯಾವುದೇ ಸಹಾಯ ಅಥವಾ ಬದಲಾವಣೆಯಾಗುವುದಿಲ್ಲ. ಆದ್ರೆ ಘಟನೆ ವೇಳೆ ಅದರ ವಿರುದ್ಧ ನಿಲ್ಲಬಹುದಿತ್ತು. ಅದನ್ನು ತಡೆಯಬಹುದಿತ್ತು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನು ಮಕ್ಕಳನ್ನು ಹೊರಕ್ಕೆ ಕಳಿಸಿದ ಸಿಬ್ಬಂದಿ ವಿರುದ್ಧ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಆ ಮುಗ್ಧ, ಅಮಾಯಕ ಮಕ್ಕಳು ಎದುರಿಸುತ್ತಿರುವ ದುಸ್ಥಿತಿಯನ್ನು ನೋಡಲು ಸಾಧ್ಯವಿಲ್ಲ,” ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ನೆಟ್ಟಿಗ ಸಿಬ್ಬಂದಿ ಆ ಮಕ್ಕಳನ್ನು ಹುಡುಕಿ ಮಕ್ಕಳಿಗೆ ಜೀವನಪೂರ್ತಿ ಉಚಿತವಾಗಿ ವಿಐಪಿ ಸೌಲಭ್ಯ ನೀಡಬೇಕು ಎಂದು ಸಲಹೆ ನೀಡಿದ್ದಾನೆ.
Published On - 10:34 pm, Tue, 28 June 22