ನೆರೆ ಪೀಡಿತ ಅಸ್ಸಾಂಗೆ 25 ಲಕ್ಷ ರೂಪಾಯಿ ನೀಡಿದ ಆಮಿರ್ ಖಾನ್; ಧನ್ಯವಾದ ಹೇಳಿದ ಸಿಎಂ
ರಾಜ್ಯ ಸರ್ಕಾರ ಭರದಿಂದ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಕ್ಕೆ ಅನೇಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆಮಿರ್ ಖಾನ್ ಕೂಡ ಸಹಾಯ ಹಸ್ತ ಚಾಚಿದ್ದಾರೆ.
ನಟ ಆಮಿರ್ ಖಾನ್ (Aamir Khan) ನಟನೆಯ ಜತೆಗೆ ಸಾಮಾಜಿಕ ಕೆಲಸಗಳ ಮೂಲಕವೂ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗ ನೆರೆ ಪೀಡಿತ ಅಸ್ಸಾಂ ರಾಜ್ಯಕ್ಕೆ ಧನಸಹಾಯ ಮಾಡಿದ್ದಾರೆ. ತಮ್ಮ ದುಡಿಮೆಯ ಹಣದಿಂದ 25 ಲಕ್ಷ ರೂಪಾಯಿಯನ್ನು ಅವರು ಅಲ್ಲಿನ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಅವರ ಕಾರ್ಯಕ್ಕೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ (Himanta Biswa Sarma) ಅವರು ಧನ್ಯವಾದ ಅರ್ಪಿಸಿದ್ದಾರೆ. ಆಮಿರ್ ಖಾನ್ ಅವರ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಅಸ್ಸಾಂನಲ್ಲಿ ಭೀಕರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಆದರೂ ಪ್ರವಾಹದ ನೀರಿನಿಂದ ಮುಳುಗಡೆಯಾದ ಊರುಗಳಲ್ಲಿ ಸಿಲುಕಿಕೊಂಡಿರುವ ಜನರು ಇನ್ನೂ ಪರದಾಡುತ್ತಿದ್ದಾರೆ. ಈ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 127 ದಾಟಿದೆ. ಅಸ್ಸಾಂ ರಾಜ್ಯಾದ್ಯಂತ 74,706 ಹೆಕ್ಟೇರ್‌ನಲ್ಲಿ ಪ್ರವಾಹದ ನೀರು ಹರಿದು ಬೆಳೆ ಹಾನಿಯಾಗಿದೆ. ರಾಜ್ಯದಾದ್ಯಂತ 564 ಪರಿಹಾರ ಶಿಬಿರಗಳಲ್ಲಿ 2,17,413 ಮಂದಿ ವಾಸ್ತವ್ಯ ಹೂಡಿದ್ದಾರೆ. ರಾಜ್ಯ ಸರ್ಕಾರ ಭರದಿಂದ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಕ್ಕೆ ಅನೇಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆಮಿರ್ ಖಾನ್ ಕೂಡ ಸಹಾಯ ಹಸ್ತ ಚಾಚಿದ್ದಾರೆ.
ಈ ಬಗ್ಗೆ ಬರೆದುಕೊಂಡಿರುವ ಹಿಮಂತ ಬಿಸ್ವ ಶರ್ಮಾ, ‘ಪ್ರವಾಹಕ್ಕೆ ತುತ್ತಾದ ನಮ್ಮ ರಾಜ್ಯದವರ ನೆರವಿಗೆ ಬಾಲಿವುಡ್ ನಟ ಆಮಿರ್ ಖಾನ್ ಆಗಮಿಸಿದ್ದಾರೆ. ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯು ನೀಡಿದ್ದಾರೆ. ಅವರಿಗೆ ನನ್ನ ಕೃತಜ್ಞತೆ’ ಎಂದು ಟ್ವೀಟ್ ಮಾಡಿದ್ದಾರೆ. ಆಮಿರ್ ಖಾನ್ ಮಾತ್ರವಲ್ಲದೆ, ಅರ್ಜುನ್ ಕಪೂರ್, ಗಾಯಕ ಸೋನು ನಿಗಮ್ ಹಾಗೂ ನಿರ್ಮಾಪಕ ಭೂಷಣ್ ಕುಮಾರ್ ಮೊದಲಾದವರು ತಮ್ಮ ಕೈಲಾದಷ್ಟು ಹಣವನ್ನು ನೀಡಿದ್ದಾರೆ.
Eminent Bollywood actor Amir Khan extended a helping hand to the flood-affected people of our State by making a generous contribution of ₹25 lakh towards CM Relief Fund.
My sincere gratitude for his concern and act of generosity.
— Himanta Biswa Sarma (@himantabiswa) June 27, 2022
ಆಮಿರ್ ಖಾನ್ ಅವರ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಇದಾಗಿದೆ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರಲಿದೆ. ಆಮಿರ್ಗೆ ಜತೆಯಾಗಿ ಕರೀನಾ ಕಪೂರ್ ನಟಿಸಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಮಗಳಿಗೆ ನಿರಂತರವಾಗಿ ಕಾಡುತ್ತಿದೆ ಈ ಸಮಸ್ಯೆ; ಹೊರ ಬರಲು ದಾರಿ ಕಾಣದೆ ಒದ್ದಾಡುತ್ತಿದ್ದಾರೆ ಇರಾ
Assam Flood: ಅಸ್ಸಾಂನಲ್ಲಿ ಪ್ರವಾಹದ ಮಟ್ಟ ಕೊಂಚ ಇಳಿಕೆ; 127 ಜನ ಸಾವು, ಸಂಕಷ್ಟದಲ್ಲಿ 22 ಲಕ್ಷ ಜನ