Vajpayee Biopic: ಅಟಲ್​ ಬಿಹಾರಿ ವಾಜಪೇಯಿ​ ಬಯೋಪಿಕ್​ ಘೋಷಣೆ; ಸಿನಿಮಾ ಆಗಲಿದೆ ‘ಅಜಾತಶತ್ರು’ ಬದುಕಿನ ವಿವರ

Atal Bihari Vajpayee Biopic: ವಿನೋದ್​ ಭಾನುಶಾಲಿ ಮತ್ತು ಸಂದೀಪ್​ ಸಿಂಗ್​ ಅವರು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಅಟಲ್​ ಬಿಹಾರಿ ವಾಜಪೇಯಿ ಅವರ 99ನೇ ವರ್ಷದ ಜನ್ಮದಿನದ ಪ್ರಯುಕ್ತ ಬಯೋಪಿಕ್​ ರಿಲೀಸ್​ ಆಗಲಿದೆ.

Vajpayee Biopic: ಅಟಲ್​ ಬಿಹಾರಿ ವಾಜಪೇಯಿ​ ಬಯೋಪಿಕ್​ ಘೋಷಣೆ; ಸಿನಿಮಾ ಆಗಲಿದೆ ‘ಅಜಾತಶತ್ರು’ ಬದುಕಿನ ವಿವರ
ಅಟಲ್ ಬಿಹಾರಿ ವಾಜಪೇಯಿ
Follow us
| Updated By: ಮದನ್​ ಕುಮಾರ್​

Updated on: Jun 29, 2022 | 12:53 PM

​ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ (Atal Bihari Vajpayee) ಅವರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ. ಅವರನ್ನು ಆದರ್ಶವಾಗಿ ಇಟ್ಟುಕೊಂಡವರು ಕೋಟ್ಯಂತರ ಮಂದಿ ಇದ್ದಾರೆ. ಅವರ ಜೀವನದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಜನರಿಗೆ ಆಸಕ್ತಿ ಇದೆ. ಈಗ ಅಟಲ್​ ಬಿಹಾರಿ ವಾಜಪೇಯಿ ಅವರ ಜೀವನದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಹೌದು, ವಾಜಪೇಯಿ ಬಯೋಪಿಕ್​ (Atal Bihari Vajpayee Biopic) ಘೋಷಣೆ ಆಗಿದೆ. ಈ ಸಿನಿಮಾ ಬಗ್ಗೆ ಈಗ ಸಖತ್​ ನಿರೀಕ್ಷೆ ಮೂಡಿದೆ. ಬಾಲಿವುಡ್​ನಲ್ಲಿ (Bollywood) ಈ ಬಯೋಪಿಕ್​ ನಿರ್ಮಾಣ ಆಗಲಿದ್ದು, ಚಿತ್ರತಂಡದ ಬಗ್ಗೆ ಇನ್ನಷ್ಟೇ ಹೆಚ್ಚಿನ ವಿವರ ಸಿಗಬೇಕಿದೆ. ಸದ್ಯಕ್ಕೆ ಟೈಟಲ್​ ಟೀಸರ್​ ಬಿಡುಗಡೆ ಮಾಡಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಟೀಸರ್​ ವೈರಲ್​ ಆಗಿದೆ. ಶೂಟಿಂಗ್​ ಪ್ಲ್ಯಾನ್​ ಬಗ್ಗೆಯೂ ಮಾಹಿತಿ ನೀಡಲಾಗಿದೆ.

‘ಅಟಲ್​’ ಎಂದು ಈ ಸಿನಿಮಾಗೆ ಹೆಸರು ಇಡಲಾಗಿದೆ. ‘ಮೇ ರಹೂ ಯಾ ನಾ ರಹೂ ಯೇ ದೇಶ್​​ ರೆಹ್ನಾ ಚಾಹಿಯೇ: ಅಟಲ್​’ ಎಂಬುದು ಈ ಚಿತ್ರದ ಪೂರ್ತಿ ಶೀರ್ಷಿಕೆ. ‘ನಾನು ಇರಲಿ, ಇಲ್ಲದೇ ಇರಲಿ. ಈ ದೇಶ ಇರಬೇಕು’ ಎಂಬುದು ಈ ವಾಕ್ಯದ ಅರ್ಥ. ದೇಶದ ಬಗ್ಗೆ ಅಟಲ್​ ಬಿಹಾರಿ ವಾಜಪೇಯಿ ಅವರು ಹೊಂದಿದ್ದ ದೂರದೃಷ್ಟಿ ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ.

ಉಲ್ಲೇಖ್​ ಎನ್​.ಪಿ. ಅವರು ಬರೆದ ‘The Untold Vajpayee: Politician and Paradox’ ಕೃತಿಯನ್ನು ಆಧರಿಸಿ ಈ ಸಿನಿಮಾ ತಯಾರಾಗಲಿದೆ. ಈ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಾರೆ? ಅಟಲ್​ ಬಿಹಾರಿ ವಾಜಪೇಯಿ ಅವರ ಪಾತ್ರಕ್ಕೆ ಬಣ್ಣ ಹಚ್ಚಲಿರುವುದು ಯಾರು? ಇನ್ನುಳಿದ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ವಿನೋದ್​ ಭಾನುಶಾಲಿ ಮತ್ತು ಸಂದೀಪ್​ ಸಿಂಗ್​ ಅವರು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. 2023ರ ಆರಂಭದಲ್ಲಿ ಈ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗಲಿದೆ. ಅದೇ ವರ್ಷ ಕ್ರಿಸ್​ಮಸ್​ ಹಬ್ಬಕ್ಕೆ (ಡಿ.25) ಬಯೋಪಿಕ್​ ರಿಲೀಸ್​ ಆಗಲಿದೆ. ಅಂದು ಅಟಲ್​ ಬಿಹಾರಿ ವಾಜಪೇಯಿ ಅವರ 99ನೇ ವರ್ಷದ ಜನ್ಮದಿನ ಎಂಬುದು ವಿಶೇಷ. ಈಗಾಗಲೇ ಅನೇಕ ಮಹಾನ್​ ವ್ಯಕ್ತಿಗಳ ಬಯೋಪಿಕ್​ ಮೂಡಿಬಂದಿದೆ. ಕೆಲವು ಚಿತ್ರಗಳು ಸೂಪರ್​ ಹಿಟ್​ ಕೂಡ ಆಗಿವೆ. ಈಗ ಅಟಲ್​ ಬಿಹಾರಿ ವಾಜಪೇಯಿ ಅವರ ಬಯೋಪಿಕ್​ ಹೇಗೆ ಸಿದ್ಧವಾಗಲಿದೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ