Assam Flood: ಅಸ್ಸಾಂನಲ್ಲಿ ಪ್ರವಾಹದ ಮಟ್ಟ ಕೊಂಚ ಇಳಿಕೆ; 127 ಜನ ಸಾವು, ಸಂಕಷ್ಟದಲ್ಲಿ 22 ಲಕ್ಷ ಜನ
ಅಸ್ಸಾಂ ರಾಜ್ಯಾದ್ಯಂತ 74,706 ಹೆಕ್ಟೇರ್‌ನಲ್ಲಿ ಪ್ರವಾಹದ ನೀರು ಹರಿದು ಬೆಳೆ ಹಾನಿಯಾಗಿದೆ. ರಾಜ್ಯದಾದ್ಯಂತ 564 ಪರಿಹಾರ ಶಿಬಿರಗಳಲ್ಲಿ 2,17,413 ಮಂದಿ ವಾಸ್ತವ್ಯ ಹೂಡಿದ್ದಾರೆ.
ಅಸ್ಸಾಂನಲ್ಲಿ ಮಳೆಯ (Assam Rain) ಅಬ್ಬರ ಕೊಂಚ ಕಡಿಮೆಯಾಗಿದೆ. ಆದರೂ ಪ್ರವಾಹದ ನೀರಿನಿಂದ ಮುಳುಗಡೆಯಾದ ಊರುಗಳಲ್ಲಿ ಸಿಲುಕಿಕೊಂಡಿರುವ ಜನರು ಇನ್ನೂ ಪರದಾಡುತ್ತಿದ್ದಾರೆ. ನಿನ್ನೆ ಐವರು ಸಾವನ್ನಪ್ಪುವ ಮೂಲಕ ಅಸ್ಸಾಂ ಪ್ರವಾಹದಲ್ಲಿ (Assam Floods) ಮೃತಪಟ್ಟವರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ. ಅಸ್ಸಾಂ ರಾಜ್ಯಾದ್ಯಂತ 74,706 ಹೆಕ್ಟೇರ್‌ನಲ್ಲಿ ಪ್ರವಾಹದ ನೀರು ಹರಿದು ಬೆಳೆ ಹಾನಿಯಾಗಿದೆ. ರಾಜ್ಯದಾದ್ಯಂತ 564 ಪರಿಹಾರ ಶಿಬಿರಗಳಲ್ಲಿ 2,17,413 ಮಂದಿ ವಾಸ್ತವ್ಯ ಹೂಡಿದ್ದಾರೆ.
ಅಸ್ಸಾಂನ ಬಾರ್ಪೇಟಾ, ಕ್ಯಾಚಾರ್, ದರ್ರಾಂಗ್, ಕರೀಮ್‌ಗಂಜ್ ಮತ್ತು ಮೊರಿಗಾಂವ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು, 22 ಲಕ್ಷಕ್ಕೂ ಹೆಚ್ಚು ಜನರು ಇನ್ನೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ಸಾಂ ರಾಜ್ಯದಲ್ಲಿ ಈ ವರ್ಷದ ಪ್ರವಾಹ ಮತ್ತು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ ಈಗ 127ಕ್ಕೆ ಏರಿದೆ. ಈ ಪೈಕಿ 17ಕ್ಕೂ ಹೆಚ್ಚು ಜನರು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Assam Flood: ಅಸ್ಸಾಂ ಪ್ರವಾಹದಲ್ಲಿ ಸಾವಿನ ಸಂಖ್ಯೆ 108ಕ್ಕೆ ಏರಿಕೆ; ಸಿಲ್ಚಾರ್ಗೆ ಹೆಲಿಕಾಪ್ಟರ್ ಮೂಲಕ ಆಹಾರ, ನೀರಿನ ಪೂರೈಕೆ
#WATCH | For Assam flood relief ops,IAF deployed 7 types of fixed&rotary-wing aircraft which transported 77 tonnes of relief material to different parts.Till now IAF has flown more than 130 humanitarian assurance missions&dropped 700 tons of load in the last 5 days: IAF officials pic.twitter.com/lTs1Ctfp5c
— ANI (@ANI) June 26, 2022
ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಇತರ ರಾಜ್ಯ ಏಜೆನ್ಸಿಗಳು ಇನ್ನೂ ತಮ್ಮ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಮುಂದುವರೆಸುತ್ತಿವೆ. ಕ್ಯಾಚಾರ್ ಜಿಲ್ಲೆಯಲ್ಲಿ ಒಟ್ಟು 2,77,158 ಜನರು ಬಾಧಿತರಾಗಿದ್ದಾರೆ. ಸಿಲ್ಚಾರ್‌ನಲ್ಲಿ ಕನಿಷ್ಠ 96,972 ಜನರು ಇನ್ನೂ ಬಳಲುತ್ತಿದ್ದಾರೆ. ಸಿಲ್ಚಾರ್‌ನಲ್ಲಿ 25,223 ಜನ ಸೇರಿದಂತೆ ಜಿಲ್ಲೆಯ 230 ಪರಿಹಾರ ಶಿಬಿರಗಳಲ್ಲಿ 1.09 ಲಕ್ಷಕ್ಕೂ ಹೆಚ್ಚು ಜನರು ನೆಲೆಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಸಿಲ್ಚಾರ್ ಪಟ್ಟಣಕ್ಕೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದ್ದಾರೆ.
#WATCH | Assam CM Himanta Biswa Sarma visited the flood affected Barak valley area where a resident braved flood waters to greet him with a ‘Gamusa’ pic.twitter.com/VOvQayYBoo
— ANI (@ANI) June 26, 2022
ಬಾರ್ಪೇಟಾ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ಸುಮಾರು ಏಳು ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ. ನಾಗಾವ್ (5.13 ಲಕ್ಷ ಜನರು) ಮತ್ತು ಕ್ಯಾಚಾರ್ (2.77 ಲಕ್ಷಕ್ಕೂ ಹೆಚ್ಚು ಜನರು)ನಲ್ಲಿ ಸಿಲುಕಿದ್ದಾರೆ. ಬಜಾಲಿ, ಬಕ್ಸಾ, ಬರ್ಪೇಟಾ, ಬಿಸ್ವನಾಥ್, ಕ್ಯಾಚಾರ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್, ದಿಮಾ ಹಸಾವೊ, ಗೋಲ್‌ಪಾರಾ, ಗೋಲಾಘಾಟ್, ಹೈಲಕಂಡಿ, ಹೊಜೈ, ಕಾಮ್ರೂಪ್, ಕಾಮ್ರೂಪ್ ಮೆಟ್ರೋಪಾಲಿಟನ್, ಕರ್ಬಿ ಆಂಗ್ಲಾಂಗ್ ವೆಸ್ಟ್, ಕರೀಂಗಂಜ್, ಲಾಖ್‌ಪುರ್, ಕರೀಂಗಂಜ್ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳು.