Assam Flood: ಅಸ್ಸಾಂ ಪ್ರವಾಹದಲ್ಲಿ ಸಾವಿನ ಸಂಖ್ಯೆ 108ಕ್ಕೆ ಏರಿಕೆ; ಸಿಲ್ಚಾರ್‌ಗೆ ಹೆಲಿಕಾಪ್ಟರ್ ಮೂಲಕ ಆಹಾರ, ನೀರಿನ ಪೂರೈಕೆ
ಅಸ್ಸಾಂನ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರವು ಗಮನಿಸುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿರುವ ಎಲ್ಲ ನೆರವು ನೀಡಲು ಕೇಂದ್ರ ಸರ್ಕಾರವು ಅಸ್ಸಾಂ ರಾಜ್ಯದೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸ್ಸಾಂ: ಅಸ್ಸಾಂನಲ್ಲಿ ಪ್ರವಾಹದ ಆತಂಕ ಭಾರೀ ಹೆಚ್ಚಾಗಿದೆ. ಅಸ್ಸಾಂನ ಪ್ರವಾಹ (Assam Floods) ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ತಲುಪಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ಪ್ರಕಾರ, ಪ್ರಸ್ತುತ ಪ್ರವಾಹದ ಅಬ್ಬರದಿಂದ 32 ಜಿಲ್ಲೆಗಳಲ್ಲಿ 45.34 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಐಎಎಫ್ (IAF) ಹೆಲಿಕಾಪ್ಟರ್‌ಗಳ ಮೂಲಕ ಪ್ರವಾಹ ಪೀಡಿತ ಸಿಲ್ಚಾರ್‌ನ ವಿವಿಧ ಸ್ಥಳಗಳಿಗೆ ಆಹಾರ, ನೀರಿನ ಬಾಟಲಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ.
ಅಸ್ಸಾಂನ ಬರಾಕ್ ಕಣಿವೆಯ ಮೂರು ಜಿಲ್ಲೆಗಳಾದ ಕ್ಯಾಚಾರ್, ಹೈಲಕಂಡಿ ಮತ್ತು ಕರೀಮ್‌ಗಂಜ್ ಪ್ರವಾಹದಿಂದ ಸಂಪೂರ್ಣ ಹಾನಿಯಾಗಿದೆ. ಬರಾಕ್ ಮತ್ತು ಕುಶಿಯಾರಾ ನದಿಗಳ ಏರಿಕೆಯಿಂದ ತೀವ್ರವಾಗಿ ಬಾಧಿತವಾಗಿದ್ದು, ಒಡ್ಡು ಒಡೆದ ಕಾರಣ ಸಿಲ್ಚಾರ್ ಪಟ್ಟಣವು ಮುಳುಗಿದೆ. ಅಸ್ಸಾಂನ ಪ್ರವಾಹದಿಂದ 173 ರಸ್ತೆಗಳು ಮತ್ತು 20 ಸೇತುವೆಗಳು ಹಾನಿಗೊಳಗಾಗಿವೆ. 100869.7 ಹೆಕ್ಟೇರ್‌ಗಳ ಬೆಳೆ ಪ್ರದೇಶ ಮತ್ತು 33,77,518 ಪ್ರಾಣಿಗಳು ಹಾನಿಗೊಳಗಾಗಿವೆ. ಒಟ್ಟು 84 ಪ್ರಾಣಿಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.
#FloodRescue #LifeSaving ?Firoj Ali from Pashchim Islampur, Assam ?Drowns in flood water of River Puthimari ?at North Guwahati, Kamrup Rural ?@01NDRFGUWAHATI rescue him safely #EveryLifeMatters ??@PMOIndia@HMOIndia@BhallaAjay26@AtulKarwal@PIBHomeAffairs@PIB_Guwahati pic.twitter.com/19nTvWfoZA
— NDRF ?? (@NDRFHQ) June 23, 2022
ಶುದ್ಧ ಕುಡಿಯುವ ನೀರು ಪೂರೈಕೆ ಕೊರತೆಯಿರುವ ಕಾರಣ ಗುವಾಹಟಿಯಿಂದ ಹೆಚ್ಚಿನ ನೀರಿನ ಬಾಟಲಿಗಳನ್ನು ಸಿಲ್ಚಾರ್‌ಗೆ ವಿಮಾನದಲ್ಲಿ ತರಲಾಗುವುದು. ನಾವು ಪ್ರತಿದಿನ ಒಂದು ಲಕ್ಷ ಕುಡಿಯುವ ನೀರಿನ ಬಾಟಲಿಯನ್ನು ಏರ್‌ಡ್ರಾಪ್ ಮಾಡಲು ಯೋಜಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Over the last few days, parts of Assam have witnessed flooding due to heavy rainfall. The Central Government is continuously monitoring the situation in Assam and is working closely with the State Government to provide all possible assistance to overcome this challenge.
— Narendra Modi (@narendramodi) June 23, 2022
ಬರಾಕ್ ಕಣಿವೆಯ ಸಿಲ್ಚಾರ್ ಪಟ್ಟಣವು ಹೆಚ್ಚು ಬಾಧಿತವಾಗಿದ್ದು, ಇಲ್ಲಿ ನಾಲ್ಕು ದಿನಗಳಿಂದ ಪರಿಸ್ಥಿತಿ ಅತ್ಯಂತ ಕಷ್ಟಕರವಾಗಿದೆ. ಉಕ್ಕಿ ಹರಿಯುತ್ತಿರುವ ಬರಾಕ್ ನದಿಯು ದಕ್ಷಿಣ ಅಸ್ಸಾಂನ ಪ್ರಮುಖ ಪಟ್ಟಣವನ್ನು ಮುಳುಗಿಸಿದ್ದರಿಂದ ಸುಮಾರು 3 ಲಕ್ಷ ಜನರು ತೊಂದರೆಗೀಡಾಗಿದ್ದು, 71,000ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
This is one of the disastrous situation in northeast.. pray for the people of northeast ? #AssamFloods pic.twitter.com/zxWC8iSV6p
— Masuma Begum (@Masumabegum94) June 21, 2022
ಇದನ್ನೂ ಓದಿ: Assam Floods ಅಸ್ಸಾಂನಲ್ಲಿ ಪ್ರವಾಹ: ಸಾವಿನ ಸಂಖ್ಯೆ 89ಕ್ಕೆ ಏರಿಕೆ; ಕರೀಂಗಂಜ್, ಕಛಾರ್ ತೀವ್ರ ಪ್ರವಾಹ ಬಾಧಿತ
ಆಹಾರ ಮತ್ತು ವಿದ್ಯುತ್ ಇಲ್ಲದೆ, ಮತ್ತು ಕುಡಿಯುವ ನೀರಿನ ತೀವ್ರ ಕೊರತೆಯಿಂದಾಗಿ, ಪಟ್ಟಣವು ಈಗ ಕೇಂದ್ರ ಮತ್ತು ರಾಜ್ಯ ವಿಪತ್ತು ಪಡೆಗಳು, ಸೈನ್ಯ ಮತ್ತು ವಾಯುಪಡೆಯ ವಾಯುಪಡೆಯಿಂದ ಆಹಾರ ಮತ್ತು ಅಗತ್ಯ ವಸ್ತುಗಳ ಮೇಲೆ ಅವಲಂಬಿತವಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಿನ್ನೆ ಸಿಲ್ಚಾರ್‌ನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
Pray for Assam.#assamfloods #AssamFloods2022 pic.twitter.com/5XHdSfD8ng
— Md Aminur Rahman (@aminurrahmanar) June 18, 2022
ಅಸ್ಸಾಂನ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರವು ಗಮನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿರುವ ಎಲ್ಲ ನೆರವು ನೀಡಲು ಕೇಂದ್ರ ಸರ್ಕಾರವು ಅಸ್ಸಾಂ ರಾಜ್ಯದೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದೆ ಎಂದು ಮೋದಿ ಹೇಳಿದ್ದಾರೆ.