Assam Floods ಅಸ್ಸಾಂನಲ್ಲಿ ಪ್ರವಾಹ: ಸಾವಿನ ಸಂಖ್ಯೆ 89ಕ್ಕೆ ಏರಿಕೆ; ಕರೀಂಗಂಜ್, ಕಛಾರ್ ತೀವ್ರ ಪ್ರವಾಹ ಬಾಧಿತ
ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಒಟ್ಟು 233 ಶಿಬಿರಗಳ ಪೈಕಿ 42 ಶಿಬಿರಗಳು ಪ್ರವಾಹದ ನೀರಿನಿಂದ ಮುಳುಗಿದ್ದು, ಎಂಟು ಪ್ರಾಣಿಗಳು ಸಾವಿಗೀಡಾಗಿವೆ. ಬಕ್ಸಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ಧುಬ್ರಿ ಮತ್ತು ಹೈಲಕಂಡಿಯಂತಹ ಜಿಲ್ಲೆಗಳಿಂದ ನದಿ ತೀರಗಳ ದೊಡ್ಡ ಪ್ರಮಾಣದ ಸವೆತ ವರದಿಯಾಗಿದೆ.
ಅಸ್ಸಾಂನಲ್ಲಿ (Assam Floods ) ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಸಾವಿನ ಸಂಖ್ಯೆ 89 ಕ್ಕೆ ತಲುಪಿದ್ದು ಮಂಗಳವಾರ 7 ಮಂದಿ ಸಾವಿಗೀಡಾಗಿದ್ದಾರೆ. ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಇದುವರೆಗೆ 32 ಜಿಲ್ಲೆಗಳಲ್ಲಿ 55 ಲಕ್ಷ ಜನರು ಪ್ರವಾಹದಿಂದ ಕಂಗೆಟ್ಟಿದ್ದಾರೆ. ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಮತ್ತು ಅವುಗಳ ಉಪನದಿಗಳು ಉಕ್ಕಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬರಾಕ್ ಮತ್ತು ಕುಶಿಯಾರಾ ನದಿಯ ನೀರಿನಿಂದಾಗಿ ಕರೀಂಗಂಜ್ (Karimganj) ಮತ್ತು ಕಛಾರ್ (Cachar) ತೀವ್ರವಾಗಿ ಬಾಧಿತವಾಗಿವೆ. ಕಛಾರ್‌ನಲ್ಲಿ 506 ಗ್ರಾಮಗಳಲ್ಲಿ 2.16 ಲಕ್ಷ ಜನರು ಬಳಲುತ್ತಿದ್ದು, ಕರೀಂಗಂಜ್‌ನಲ್ಲಿ 454 ಹಳ್ಳಿಗಳಲ್ಲಿ 1.47 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಿಲ್ಚಾರ್‌ನ ಹಲವು ಪ್ರದೇಶಗಳು ಜಲಾವೃತವಾಗಿವೆ. ಒಟ್ಟು 425 ಜನರನ್ನು ರಕ್ಷಿಸಲಾಗಿದೆ ಮತ್ತು 10,468 ಜನರನ್ನು 57 ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು. ಇತ್ತೀಚಿನ ಮೂರು ಸಾವುಗಳು ಕಾಮರೂಪ್ನಿಂದ ವರದಿಯಾಗಿದ್ದು, ದರ್ರಾಂಗ್, ಕರೀಮ್‌ಗಂಜ್, ತಮುಲ್‌ಪುರ್ ಮತ್ತು ಉದಲ್‌ಗುರಿಯಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಕಾಮರೂಪ್ದಿಂದ ಒಬ್ಬ ವ್ಯಕ್ತಿಯೂ ನಾಪತ್ತೆಯಾಗಿದ್ದಾರೆ. ಬಾರ್‌ಪೇಟಾದಲ್ಲಿ 12.51 ಲಕ್ಷ ಜನರು ಪ್ರವಾಹದಲ್ಲಿ ಸಿಲುಕಿದ್ದು ಧುಬ್ರಿಯಲ್ಲಿ 5.94 ಲಕ್ಷ ಜನರು ಮತ್ತು ದರ್ಂಗ್ 5.47 ಲಕ್ಷ ಜನರು ಬಾಧಿತರಾಗಿದ್ದಾರೆ. ಒಟ್ಟು 862 ಪರಿಹಾರ ಶಿಬಿರಗಳಲ್ಲಿ 2.62 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಕಾಮರೂಪ್ ಮತ್ತು ಕರೀಂಗಂಜ್‌ನಲ್ಲಿ ಭೂಕುಸಿತಗಳು ವರದಿಯಾಗಿವೆ. ಏಳು ಒಡ್ಡುಗಳು ಒಡೆದು ಹೋಗಿವೆ, 316 ರಸ್ತೆಗಳು ಮತ್ತು 20 ಸೇತುವೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ ಎಂದು ಎಎಸ್ ಡಿಎಂಎ ತಿಳಿಸಿದೆ.
Assam CM HB Sarma visited a flood relief camp set up at West Borigog Sarbajanin Sri Durga Mandap, Deharkuchi, Nalbari to inspect the facilities put in place.
ಇದನ್ನೂ ಓದಿ“Directed dist admin to ensure that affected people get access to relief materials, including child food”, tweeted CM pic.twitter.com/0mpDDA54eb
— ANI (@ANI) June 21, 2022
ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಒಟ್ಟು 233 ಶಿಬಿರಗಳ ಪೈಕಿ 42 ಶಿಬಿರಗಳು ಪ್ರವಾಹದ ನೀರಿನಿಂದ ಮುಳುಗಿದ್ದು, ಎಂಟು ಪ್ರಾಣಿಗಳು ಸಾವಿಗೀಡಾಗಿವೆ. ಬಕ್ಸಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ಧುಬ್ರಿ ಮತ್ತು ಹೈಲಕಂಡಿಯಂತಹ ಜಿಲ್ಲೆಗಳಿಂದ ನದಿ ತೀರಗಳ ದೊಡ್ಡ ಪ್ರಮಾಣದ ಸವೆತ ವರದಿಯಾಗಿದೆ.
ಏತನ್ಮಧ್ಯೆ, ಪ್ರವಾಹ ಪೀಡಿತ ನಲ್ಬರಿ ಮತ್ತು ಕಾಮರೂಪ್ ಜಿಲ್ಲೆಗಳಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಶೀಘ್ರದಲ್ಲೇ ಪ್ಯಾಕೇಜ್ ಘೋಷಿಸಲಾಗುವುದು ಎಂದು ಹೇಳಿದರು. “ನಮ್ಮ ಸರ್ಕಾರವು ಪೀಡಿತ ಜನರಿಗೆ ತಮ್ಮ ಜಾನುವಾರು ನಷ್ಟ ಮತ್ತು ಪ್ರವಾಹದಿಂದ ಉಂಟಾದ ಇತರ ಹಾನಿಗಳನ್ನು ನೋಂದಾಯಿಸಲು ಶೀಘ್ರದಲ್ಲೇ ಪೋರ್ಟಲ್ ಅನ್ನು ಪ್ರಾರಂಭಿಸುತ್ತದೆ.ಅತಿವೃಷ್ಟಿ ಪರಿಹಾರ ಪ್ಯಾಕೇಜ್ ಕೂಡ ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಅವರು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:54 pm, Wed, 22 June 22