Viral Video: ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹ ದಾಟಿದ ತಂದೆ; ವಿಡಿಯೋ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು

Assam Flood: ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಹಸುಗೂಸನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಟ್ಟುಕೊಂಡು ಆ ಮಗುವಿನ ಅಪ್ಪ ತನ್ನ ಎದೆಯ ಮಟ್ಟಕ್ಕೆ ನಿಂತಿದ್ದ ಮಳೆ ನೀರಿನಲ್ಲಿಯೇ ನಡೆದು, ಮಗುವನ್ನು ಎತ್ತರದ ಸ್ಥಳಕ್ಕೆ ಕೊಂಡೊಯ್ಯುವ ವಿಡಿಯೋ ವೈರಲ್ ಆಗಿದೆ.

Viral Video: ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹ ದಾಟಿದ ತಂದೆ; ವಿಡಿಯೋ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು
ಅಸ್ಸಾಂನಲ್ಲಿ ಪ್ರವಾಹದ ನೀರಿನಲ್ಲಿ ಮಗುವನ್ನು ಸಾಗಿಸಿದ ತಂದೆImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 21, 2022 | 3:24 PM

ಗುವಾಹಟಿ: ಅಸ್ಸಾಂನಲ್ಲಿ ಭೀಕರ ಪ್ರವಾಹ (Assam Floods) ಉಂಟಾಗಿದ್ದು, ಅಲ್ಲಿನ ಜನರು ಮಳೆಯ ಆರ್ಭಟಕ್ಕೆ ತತ್ತರಿಸಿಹೋಗಿದ್ದಾರೆ. ಈಗಾಗಲೇ ಅಸ್ಸಾಂನಲ್ಲಿ (Assam Rains) ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಇದರ ನಡುವೆ ಪ್ರವಾಹ ಪೀಡಿತ ಅಸ್ಸಾಂನ ಜನರ ನೋವನ್ನು ಸೆರೆಹಿಡಿಯುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೀಗ ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ತಂದೆಯೊಬ್ಬರು ತನ್ನ ನವಜಾತ ಶಿಶುವನ್ನು ಬುಟ್ಟಿಯಲ್ಲಿಟ್ಟುಕೊಂಡು, ಆ ಬುಟ್ಟಿಯನ್ನು ಹೊತ್ತುಕೊಂಡು ಪ್ರವಾಹದ ನೀರಿನಿಂದ ಆವೃತವಾದ ರಸ್ತೆಯನ್ನು ದಾಟುತ್ತಿರುವುದನ್ನು ನೋಡಬಹುದು.

ಬಟ್ಟೆ ಸುತ್ತಿಟ್ಟಿದ್ದ ಹಸುಗೂಸನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಟ್ಟುಕೊಂಡು ಆ ಮಗುವಿನ ಅಪ್ಪ ತನ್ನ ಎದೆಯ ಮಟ್ಟಕ್ಕೆ ನಿಂತಿದ್ದ ಮಳೆ ನೀರಿನಲ್ಲಿಯೇ ನಡೆದು, ಮಗುವನ್ನು ಎತ್ತರದ ಸ್ಥಳಕ್ಕೆ ಕೊಂಡೊಯ್ಯುವ ವಿಡಿಯೋ ವೈರಲ್ ಆಗಿದೆ. ಆ ಮಗುವಿನ ಜೊತೆ ಬರುತ್ತಿದ್ದವರು ಆ ಮಗುವನ್ನು ನಗಿಸುತ್ತಾ, ಮಳೆನೀರಿನಿಂದ ತುಂಬಿದ್ದ ಮನೆಯಿಂದ ಎತ್ತರದ ಸ್ಥಳಕ್ಕೆ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ
Image
Viral Video: ಹೈವೇಯಲ್ಲಿ ಕಾರಿಗೆ ಡಿಕ್ಕಿ ಹೊಡೆದು, ರಸ್ತೆ ಮಧ್ಯೆ ಒದ್ದಾಡಿದ ಚಿರತೆ; ಶಾಕಿಂಗ್ ವಿಡಿಯೋ ಇಲ್ಲಿದೆ
Image
Shocking News: ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!
Image
Assam Tea: ನೀವು ಚಹಾ ಪ್ರಿಯರಾ?; 1 ಲಕ್ಷ ರೂ.ಗೆ ಮಾರಾಟವಾಯ್ತು ಅಪರೂಪದ ಅಸ್ಸಾಂ ಟೀ!

ಈ ವೀಡಿಯೋವನ್ನು ಶೇರ್ ಮಾಡಿದ ನೆಟ್ಟಿಗರು ಶ್ರೀಕೃಷ್ಣನನ್ನು ಹೊತ್ತುಕೊಂಡು ಯಮುನೆಯನ್ನು ದಾಟಿದ ವಾಸುದೇವನಿಗೆ ಈ ಅಪ್ಪ-ಮಗುವಿನ ವಿಡಿಯೋವನ್ನು ಹೋಲಿಸಿದ್ದಾರೆ.

ಇದನ್ನೂ ಓದಿ: Assam Flood: ಭೀಕರ ಪ್ರವಾಹದಿಂದ ದ್ವೀಪವಾಗಿದೆ ಅಸ್ಸಾಂ; ಮಳೆಯ ಹೊಡೆತಕ್ಕೆ 81 ಜನ ಸಾವು

ಅಸ್ಸಾಂ ರಾಜ್ಯದ ಎಲ್ಲಾ 34 ಜಿಲ್ಲೆಗಳು ಪ್ರವಾಹದ ಬಿಕ್ಕಟ್ಟಿಗೆ ಸಿಲುಕಿವೆ. ಅಸ್ಸಾಂನಲ್ಲಿ ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಪ್ರವಾಹ ಪೀಡಿತ ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದುವರೆಗೆ 47 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಸೋಮವಾರ ಏಳು ಮಂದಿ ನಾಪತ್ತೆಯಾಗಿದ್ದು, 2.3 ಲಕ್ಷ ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಒಟ್ಟಾರೆಯಾಗಿ, ಎಲ್ಲಾ ಪೀಡಿತ ಪ್ರದೇಶಗಳಲ್ಲಿ 810 ಪರಿಹಾರ ಶಿಬಿರಗಳು ಮತ್ತು 615 ಪರಿಹಾರ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.

ಒಟ್ಟು 1,13,485.37 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, 5,000ಕ್ಕೂ ಹೆಚ್ಚು ಹೆಕ್ಟೇರ್ ಜಮೀನು ಕೊಚ್ಚಿಹೋಗಿದೆ. ಅಸ್ಸಾಂ ರಾಜ್ಯದಲ್ಲಿನ ಕಠೋರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತನಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮ ಅವರಿಗೆ ಫೋನ್ ಮಾಡಿ ಪ್ರವಾಹದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Tue, 21 June 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್