Viral Video: 100 ಮೀಟರ್ ಓಟವನ್ನು 45.40 ಸೆಕೆಂಡ್‌ಗಳಲ್ಲಿ ಓಡಿದ 105 ವರ್ಷದ ಸಾಧಕಿ ಈಕೆ
105 ವರ್ಷದ ರಂಬಾಯ್ ಗುಜರಾತ್‌ನ ವಡೋದರಾದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟವನ್ನು ಕೇವಲ 45.40 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಮನುಷ್ಯನ ವಯಸ್ಸು ದೇಹಕ್ಕಷ್ಟೇ ಮನಸ್ಸಿಗಲ್ಲ ಎಂದು ಸಾಕಷ್ಟು ಜನರು ಬಾಳಿ ತೋರಿಸಿದ್ದಾರೆ. ಶತಾಯುಷಿಗಳಾಗಿರುವ ಹಲವರು ನವಯುವಕರಂತೆ ಸಕ್ರಿಯರಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಲವಲವಿಕೆಯಿಂದ ಬಾಳುತ್ತಾರೆ. ಅವರ ಇಳಿ ವಯಸ್ಸಿನ ಉತ್ಸಾಹ ಕಂಡು ಯುವಕರು ಕೂಡ ನಾಚಬೇಕು ಆ ರೀತಿ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ. ಉದಾಹಣೆಗೆ ಸಿದ್ದಗಂಗೆ ಮಠದ ಲಿಂಗೈಕ್ಯ ಪರಮಪೂಜ್ಯ ಡಾ. ಶಿವಕುಮಾರ ಶ್ರೀಗಳು. ಸ್ವಾಮಿಜಿ ಶತಾಯುಷಿಗಳಾಗಿ ಅಸಂಖ್ಯ ಜನರ ಪಾಲಿನ ಆರಾಧ್ಯ ದೈವವಾಗಿ, ಜಗತ್ತಿಗೆ ಮಾದರಿ ಪುರುಷನಾಗಿ ಸಾರ್ಥಕ ಜೀವನ ನಡೆಸಿ ಇಹಲೋಕ ತ್ಯಜಿಸಿದರು. ಇಲ್ಲಿಯು ಕೂಡ 105 ವರ್ಷದ (Years) ಇಳಿಯ ವಯಸ್ಸಿನ ಹಿರಿಯ ಜೀವ (Senior Citizen) ಒಂದು ಸಾಧನೆಯನ್ನು ಮಾಡಿದ್ದಾದೆ. ಇವರನ್ನು ನೋಡಿದರೆ ಇವರಿಗೆ 105 ವರ್ಷ ವಯಸ್ಸು ಆಗಿದೆ ಅಂತ ಅನ್ನಿಸೋದಿಲ್ಲ ಅಷ್ಟು ಲವಲವಿಕೆಯಿಂದ (Aggressiveness) ಇದ್ದಾರೆ. ಈ ವಯಸ್ಸಿನಲ್ಲು ಇವರು ಮಾಡಿದ ಸಾಧನೆ ಹುಬ್ಬೇರಿಸುವಂತಿದೆ. ಅವರು ಯಾರು ಇಲ್ಲಿದೆ ಓದಿ…
105 ವರ್ಷದ ರಂಬಾಯ್ ಗುಜರಾತ್‌ನ (Gujarat) ವಡೋದರಾದಲ್ಲಿ (Vadodara) ಏರ್ಪಡಿಸಿದ್ದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟವನ್ನು ಕೇವಲ 45.40 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಏರ್ಪಡಿಸಿದ್ದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀ ಮತ್ತು 200 ಮೀ ಎರಡು ಓಟಗಳಲ್ಲಿ ಓಡಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದನ್ನು ಓದಿ: ಜಗನ್ನಾಥ ದೇವಾಲಯದ ಮುಂದೆ ಕೊಳಲಲ್ಲಿ ಕಚ್ಚಾ ಬಾದಾಮ್ ಹಾಡು ನುಡಿಸಿ ಗಮನ ಸೆಳೆದ ಯುವಕ
This is incredible ! 105 years old Super Grandma sprints new 100m record at National Open Masters Athletics Championship. #Rambai ran alone as there was no competitor above 85.#Vadodara #yogaday2022 #YogaForHumanity pic.twitter.com/VC0jKj14qg
— Piyush Goyal (@goyalpp) June 21, 2022
ಜೂನ್ 15 ರಂದು 100 ಮೀ ಮತ್ತು ಜೂನ್ 19 ರಂದು 200 ಮೀ 1 ನಿಮಿಷ ಮತ್ತು 52.17 ಸೆಕೆಂಡುಗಳಲ್ಲಿ ರಂಬಾಯಿ ಓಡಿ ಚಿನ್ನದ ಪದಕ ಪಡೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇವರಿಗಿಂತ ಮೊದಲು 101 ವರ್ಷದ ಮನ್ ಕೌರ್ ಅವರು ವಿಶ್ವ ಮಾಸ್ಟರ್ಸ್ ಕೂಟದಲ್ಲಿ 74 ಸೆಕೆಂಡುಗಳಲ್ಲಿ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಇವರ ದಾಖಲೆಯನ್ನು ಸರಿಗಟ್ಟಿದ ರಂಬಾಯ್ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಇದನ್ನು ಓದಿ: ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹ ದಾಟಿದ ತಂದೆ; ವಿಡಿಯೋ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು
ಹರಿಯಾಣದ ಚರ್ಖಿ ದಾದ್ರಿ ಜಿಲ್ಲೆಯಲ್ಲಿ ಜನವರಿ 1, 1917ರಲ್ಲಿ ರಾಂಬಾಯಿ ಜನಿಸಿದರು. ರಾಂಬಾಯಿ ಅವರ ದೈನಂದಿನ ಆಹಾರದಲ್ಲಿ 1 ಲೀಟರ್ ಹಾಲು, ಚುರ್ಮಾ, ಬಜ್ರಾ ರೊಟ್ಟಿ, 250 ಗ್ರಾಂ ತುಪ್ಪ ಮತ್ತು 500 ಗ್ರಾಂ ದಹಿ (ಮೊಸರು) ಇರುತ್ತದೆ. ಅವರು 104 ನೇ ವಯಸ್ಸಿನಿಂದ ಓಡಲು ಪ್ರಾರಂಭಿಸಿದರು, 2021 ರ ನವೆಂಬರ್‌ನಲ್ಲಿ ವಾರಣಾಸಿಯಲ್ಲಿ ರಂಬಾಯಿ ತನ್ನ ಚೊಚ್ಚಲ ಓಟವನ್ನು ಪ್ರಾರಂಭಿಸಿದರು. ಇದರ ಹೊರತಾಗಿ, ಅವರು ಕೇರಳ, ಮಹಾರಾಷ್ಟ್ರ, ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಡಜನ್ಗಳಷ್ಟು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Tue, 21 June 22