Viral Video: ಜಗನ್ನಾಥ ದೇವಾಲಯದ ಮುಂದೆ ಕೊಳಲಲ್ಲಿ ಕಚ್ಚಾ ಬಾದಾಮ್ ಹಾಡು ನುಡಿಸಿ ಗಮನ ಸೆಳೆದ ಯುವಕ
ಭುವನ್ ಬಡ್ಯಾಕರ್ ಎಂಬ ಕಡಲೆಕಾಯಿ ಮಾರಾಟಗಾರನ ಜಿಂಗಲ್ ಕಚ್ಚಾ ಬಾದಾಮ್ ಸೋಷಿಯಲ್ ಮೀಡಿಯಾ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಕೊಳಲು ಮಾರಾಟಗಾರನಿಂದ ಮತ್ತೊಮ್ಮೆ ಕಚ್ಚಾ ಬಾದಾಮ್ ಹಾಡು ವೈರಲ್ ಆಗಿದೆ.
ಇತ್ತೀಚೆಗೆ ಕಚ್ಚಾ ಬಾದಾಮ್ (Kacha Badam Song) ಹಾಡಿನ ರೀಲ್ಸ್ ಭಾರೀ ವೈರಲ್ ಆಗಿತ್ತು. ಎಲ್ಲಿ ನೋಡಿದರೂ ಇದೇ ಹಾಡು ಕೇಳುತ್ತಿತ್ತು. ಇದೀಗ ಆ ಕ್ರೇಜ್ ಕೊಂಚ ಕಡಿಮೆಯಾಗಿದೆ. ಆದರೆ, ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ (Puri Jaganath Temple) ಎದುರು ಕೊಳಲು ಮಾರುವ ಯುವಕನೊಬ್ಬ ಕೊಳಲಿನಲ್ಲಿ ಸರಾಗವಾಗಿ ಈ ಕಚ್ಚಾ ಬಾದಾಮ್ ಹಾಡನ್ನು ನುಡಿಸಿ, ಗಮನ ಸೆಳೆದಿದ್ದಾನೆ. ಈ ವಿಡಿಯೋ ಇದೀಗ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.
ಭುವನ್ ಬಡ್ಯಾಕರ್ ಎಂಬ ಕಡಲೆಕಾಯಿ ಮಾರಾಟಗಾರನ ಜಿಂಗಲ್ ಕಚ್ಚಾ ಬಾದಾಮ್ ನಂತರ ಸೋಷಿಯಲ್ ಮೀಡಿಯಾ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಆಟದ ಸಾಮಾನುಗಳ ಮಾರಾಟಗಾರನಿಂದ ಮತ್ತೊಮ್ಮೆ ಕಚ್ಚಾ ಬಾದಾಮ್ ಹಾಡು ವೈರಲ್ ಆಗಿದೆ. ಕೊಳಲಿನಲ್ಲಿ ಕಚ್ಚಾ ಬಾದಾಮ್ ಹಾಡು ನುಡಿಸಿರುವ ಯುವಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
#kachabadam fever hits #Puri #Odisha Flute artist playing Bengal’s recent popular tune in front of #JagannathTemple #Puri pic.twitter.com/4XIlLmxQ0t
— Suryagni (@Suryavachan) June 20, 2022
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ವೈರಲ್ ಹಾಡಿನ ಮನುಷ್ಯನ ಕೊಳಲು ನಿರೂಪಣೆಯನ್ನು ತೋರಿಸುತ್ತದೆ. ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯ ಲಕ್ಷ್ಮೀನಾರಾಯಣಪುರ ಪಂಚಾಯತ್‌ನ ಕುರಲ್‌ಜುರಿ ಗ್ರಾಮದ ದುಬ್ರಾಜ್‌ಪುರ ಬ್ಲಾಕ್‌ನ ನಿವಾಸಿ ಭುವನ್ ಬಡ್ಯಾಕರ್ ಕಡಲೆಕಾಯಿ ಮಾರಾಟ ಮಾಡಲು ಸೈಕಲ್‌ನಲ್ಲಿ ವಿವಿಧ ಸ್ಥಳಗಳಿಗೆ ಹೋಗುತ್ತಿದ್ದರು. ಕಡಲೆಕಾಯಿ ಮಾರಲು ಆಕರ್ಷಕ ಜಿಂಗಲ್ಸ್ ತಯಾರಿಸುತ್ತಿದ್ದರು.
ಇದನ್ನೂ ಓದಿ: Viral Video: ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹ ದಾಟಿದ ತಂದೆ; ವಿಡಿಯೋ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು
2021ರ ನವೆಂಬರ್‌ನಲ್ಲಿ ಯಾರೋ ಒಬ್ಬರು ಭುವನ್ ಅವರ ಈ ಜಿಂಗಲ್ ಅನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಅದಾದ ಬಳಿಕ ಅವರು ರಸ್ತೆಯಲ್ಲಿ ಹಾಡುತ್ತಿದ್ದ ಕಚ್ಚಾ ಬಾದಾಮ್ ಭಾರೀ ವೈರಲ್ ಆಯಿತು. ಇನ್ಸ್ಟಾಗ್ರಾಂ ರೀಲ್ಸ್ನಲ್ಲಿ ಟ್ರೆಂಡ್ ಸೃಷ್ಟಿಸಿತು.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Tue, 21 June 22