AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಚಲಿಸುತ್ತಿದ್ದ ರೈಲಿನಲ್ಲಿ ಯೋಗಾಸನ ಮಾಡಿದ ಪ್ರಯಾಣಿಕರು

ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಚಲಿಸುತ್ತಿದ್ದ ರೈಲಿನಲ್ಲಿ ಯೋಗಾಸನ ಮಾಡಿದ ಪ್ರಯಾಣಿಕರು

Viral Photo: ಚಲಿಸುತ್ತಿದ್ದ ರೈಲಿನಲ್ಲಿ ಯೋಗಾಸನ ಮಾಡಿದ ಪ್ರಯಾಣಿಕರು
ಚಲಿಸುತ್ತಿರುವ ರೈಲಿನಲ್ಲಿ ಯೋಗ
TV9 Web
| Updated By: ವಿವೇಕ ಬಿರಾದಾರ|

Updated on:Jun 21, 2022 | 5:55 PM

Share

ಇಂದು (ಜೂನ್​​ 21) ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) . ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ (Yoga) ದಿನಾಚರಣೆಯನ್ನು ಆಚರಿಸಲಾಯಿತು. ನಮ್ಮ ದೇಶದಲ್ಲಿ ಪ್ರತಿಯೊಂದು ನಗರದಲ್ಲೂ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಾಂಕೃತಿಕ ನಗರಿ ಮೈಸೂರಿನಲ್ಲಿ (Mysore) ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ್ದು, ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ  (PM Narendra Modi) ಮೋದಿಯವರು ಭಾಗಿಯಾಗಿದ್ದರು. ಹಾಗೇ ನಮ್ಮ ಭಾರತೀಯ ರೈಲುಗಳಲ್ಲು (Train) ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ರಾಷ್ಟ್ರದ ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿನಿತ್ಯ ಸಾವಿರಾರು ಜನರು ತಮ್ಮ ಕೆಲಸಗಳಿಗೆ ಹೋಗಲು ರೈಲುಗಳನ್ನು ಅವಲಂಭಿಸಿದ್ದಾರೆ. ರೈಲಿನ ಮೂಲಕ ಹೋಗುತ್ತಾರೆ ರೈಲಿನ ಮೂಲಕ ಬರುತ್ತಾರೆ.

ಇದನ್ನು ಓದಿ: 100 ಮೀಟರ್​​ ಓಟವನ್ನು 45.40 ಸೆಕೆಂಡ್‌ಗಳಲ್ಲಿ ಓಡಿದ 105 ವರ್ಷದ ಸಾಧಕಿ ಈಕೆ

ಹೀಗೆ ದಿನಂಪ್ರತಿ ಸಾಗುತ್ತದೆ. ಇವತ್ತು ಕೂಡ ಪ್ರಯಾಣಿಕರು ರೈಲಿನಲ್ಲಿ ಯೋಗಾಸನ ಮಾಡಿದ್ದಾರೆ. ಆಶ್ಚರ್ಯವಾದರು ಇದು ಸತ್ಯ. ‘ಹೀಲ್ ಸ್ಟೇಷನ್’ ಎಂಬ ಸಂಸ್ಥೆಯ 75 ಕ್ಕೂ ಹೆಚ್ಚು ಯೋಗ ಶಿಕ್ಷಕರು ರೈಲಿನಲ್ಲಿ ಸರಳವಾಗಿ ಯೋಗವನ್ನು ಮಾಡುವುದನ್ನು ಪ್ರಯಾಣಿಕರಿಗೆ ಹೇಳಿಕೊಟ್ಟಿದ್ದಾರೆ ಮತ್ತು ಪ್ರಯಾಣಿಕರು ಮಾಡಿದ್ದಾರೆ. ಇದು ಪ್ರಾರಂಭವಾಗಿದ್ದು 2017ರಲ್ಲಿ. ಯುವ ಪತ್ರಕರ್ತೆ ರುಚಿತಾ ಶಾ ಅವರು 2017ರಲ್ಲಿ  ಪಶ್ಚಿಮ ರೈಲ್ವೆ ಇಲಾಖೆಯ ಅನುಮತಿಯನ್ನು ಪಡೆದು ಮೊದಲ ಬಾರಿಗೆ ರೈಲಿನಲ್ಲಿ ಸುಮಾರು 15-20 ನಿಮಿಷಗಳ ಕಾಲ ಆಸನಗಳನ್ನು ಪ್ರದರ್ಶಿಸಿದರು.

ಇದನ್ನು ಓದಿ: ತರಗತಿಗೆ ವಿದ್ಯಾರ್ಥಿಗಳನ್ನು ವಿಶಿಷ್ಟವಾಗಿ ಸ್ವಾಗತಿಸಿದ ಶಿಕ್ಷಕಿ

ನಂತರ ಇವರು ಹೀಲ್-ಸ್ಟೇಷನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆಯಲ್ಲಿ ಯೋಗ ಕಲಿಯಲು ಸಾಕಷ್ಟು ಜನರು ಆಗಮಿಸುತ್ತಿದ್ದಾರೆ. ಮತ್ತು ಇಂದು ರೈಲಿನಲ್ಲಿ ಪ್ರಯಾಣಿಕರಿಗೆ ಈ ಸಂಸ್ಥೆಯ 100 ಜನ ಸದಸ್ಯರೇ ಪ್ರಯಾಣಿಕರಿಗೆ ಯೋಗವನ್ನು ಹೇಳಿಕೊಟ್ಟಿದ್ದಾರೆ. ಅದರಲ್ಲಿ ಯೋಗ ಶಿಕ್ಷಕರು, ಯುವಕರು ಮತ್ತು ಹಿರಿಯರು ಸೇರಿಕೊಂಡಿದ್ದಾರೆ.

ಇವರು ಪ್ರಯಾಣಿಕರಿಗೆ ಯೋಗ ಕಲಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.  ಪಶ್ಚಿಮ ರೈಲ್ವೇ ಇಲಾಖೆ ತನ್ನ ಅಧಿಕೃತ ಟ್ವಿಟರ್​ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದೆ.  ಮತ್ತು ಬರೆದುಕೊಂಡಿದೆ, ”#InternationalYogaDay2022 ಸಂದರ್ಭದಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ WR ಸಹಯೋಗದೊಂದಿಗೆ ಹೀಲ್-ಸ್ಟೇಷನ್ ಯೋಗವನ್ನು ಆಯೋಜಿಸಲಾಗಿತ್ತು. ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುವಾಗ ಯೋಗಾಭ್ಯಾಸ ಮಾಡುವ ಮೂಲಕ ತಮ್ಮ ಪ್ರಯಾಣದ ಸಮಯವನ್ನು ಫಿಟ್‌ನೆಸ್‌ಗಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪ್ರಯಾಣಿಕರಿಗೆ ಕಲಿಸಲಾಯಿತು ಎಂದು ತಿಳಿಸಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Tue, 21 June 22

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು