Shocking News: ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!

ಪಾಕಿಸ್ತಾನದಲ್ಲಿ 32 ವರ್ಷ ಹಿಂದೂ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಯ ಸಿಬ್ಬಂದಿ ಆಕೆಯ ಹೊಟ್ಟೆಯಲ್ಲಿದ್ದ ಮಗುವಿನ ತಲೆ ಕತ್ತರಿಸಿ, ಅದನ್ನು ಹೊರತೆಗೆಯಲಾಗದೆ ಗರ್ಭದಲ್ಲೇ ಬಿಟ್ಟಿದ್ದಾರೆ.

Shocking News: ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!
ಸಾಂದರ್ಭಿಕ ಚಿತ್ರImage Credit source: NDTV
Follow us
| Updated By: ಸುಷ್ಮಾ ಚಕ್ರೆ

Updated on:Jun 21, 2022 | 10:26 AM

ಕರಾಚಿ: ಪ್ರಾಣ ಉಳಿಸಬೇಕಾದ ವೈದ್ಯರ ನಿರ್ಲಕ್ಷ್ಯದ ಕಾರಣದಿಂದ ಹುಟ್ಟುವ ಮೊದಲೇ ಮಗುವೊಂದು (Newborn Child) ಸಾವನ್ನಪ್ಪಿರುವ ಘಟನೆ ನಡೆದಿದೆ. ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದ ಸಿಬ್ಬಂದಿ ಮಹಿಳೆಗೆ ಡೆಲಿವರಿ ಮಾಡುವಾಗ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ, ಅದನ್ನು ಹೊರತೆಗೆಯದೆ ತಾಯಿಯ ಗರ್ಭದೊಳಗೆ ಹಾಗೇ ಬಿಟ್ಟಿದ್ದಾರೆ. ಇದರಿಂದ ಆ ಮಹಿಳೆಯ ಪ್ರಾಣಕ್ಕೂ ಆಪತ್ತು ಎದುರಾಗಿದೆ. 32 ವರ್ಷದ ಹಿಂದೂ ಮಹಿಳೆಯ (Hindu Woman) ಹೊಟ್ಟೆಯಲ್ಲೇ ಮಗುವಿನ ತಲೆಯನ್ನು ಉಳಿಸಲಾಗಿದ್ದು, ಆಕೆಯ ಜೀವ ಉಳಿಯುವುದು ಕೂಡ ಅನುಮಾನ ಎನ್ನಲಾಗಿದೆ.

ಈ ಆಘಾತಕಾರಿ ಘಟನೆ ನಡೆದ ಬಳಿಕ ಅಪರಾಧಿಗಳನ್ನು ಪತ್ತೆಹಚ್ಚಲು ವೈದ್ಯಕೀಯ ತನಿಖಾ ಮಂಡಳಿಯನ್ನು ರಚಿಸಲು ಸಿಂಧ್ ಸರ್ಕಾರ ಆದೇಶಿಸಿದೆ. ತಾರ್ಪಾರ್ಕರ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ವಾಸವಾಗಿದ್ದ ಭೀಲ್ ಹಿಂದೂ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮೊದಲು ತನ್ನ ಪ್ರದೇಶದಲ್ಲಿನ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ (RHC) ಹೋಗಿದ್ದರು. ಆದರೆ ಮಹಿಳಾ ಸ್ತ್ರೀರೋಗತಜ್ಞರು ಲಭ್ಯವಿಲ್ಲದ ಕಾರಣ ಯಾವುದೇ ಅನುಭವವಿಲ್ಲದ ಆಸ್ಪತ್ರೆಯ ಸಿಬ್ಬಂದಿ ಸೇರಿಕೊಂಡು ಆಕೆಗೆ ಹೆರಿಗೆ ಮಾಡಿಸಲು ಪ್ರಯತ್ನಿಸಿದ್ದಾರೆ.

ಈ ವೇಳೆ ಮಗುವನ್ನು ಹೊರತೆಗೆಯಲಾಗದೆ ಪರದಾಡಿದ ಸಿಬ್ಬಂದಿ ಭಾನುವಾರ ನಡೆಸಿದ ಶಸ್ತ್ರಚಿಕಿತ್ಸೆಯ ವೇಳೆ ತಾಯಿಯ ಗರ್ಭದಲ್ಲಿರುವ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ, ಆ ಸತ್ತ ಮಗುವನ್ನು ಆಕೆಯ ಗರ್ಭದೊಳಗೆ ಹಾಗೇ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಆ ಮಹಿಳೆಗೆ ಪ್ರಾಣಾಪಾಯ ಎದುರಾಗಿದ್ದು, ಆಕೆಗೆ ಚಿಕಿತ್ಸೆ ನೀಡಲು ಯಾವುದೇ ಸೌಲಭ್ಯಗಳಿಲ್ಲದ ಕಾರಣ ಮಿಥಿಯ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

ಇದನ್ನೂ ಓದಿ
Image
Assam Tea: ನೀವು ಚಹಾ ಪ್ರಿಯರಾ?; 1 ಲಕ್ಷ ರೂ.ಗೆ ಮಾರಾಟವಾಯ್ತು ಅಪರೂಪದ ಅಸ್ಸಾಂ ಟೀ!
Image
ಮದುವೆಯಾದ 10 ತಿಂಗಳ ಬಳಿಕ ಗಂಡನ ಅಸಲಿಯತ್ತು ತಿಳಿದು ಆಶ್ಚರ್ಯಗೊಂಡ ಪತ್ನಿ
Image
Viral Video: ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸಿದ ಜಲಪಾತ, ಸೇತುವೆ ಮೇಲಿಂದ ಚಿಮ್ಮಿದ ನೀರು!

ಇದನ್ನೂ ಓದಿ: Shocking News: ಈ ಕಂಪನಿಯಲ್ಲಿ ಹಸ್ತಮೈಥುನಕ್ಕೂ ಸಿಗುತ್ತೆ ಅರ್ಧ ಗಂಟೆ ಬ್ರೇಕ್; ಸೆಕ್ಸ್​ ಟಾಯ್ಸ್​ ಕೂಡ ಕೊಡ್ತಾರೆ!

ಕೊನೆಗೆ ಆಕೆಯ ಕುಟುಂಬವು ಆ ಮಹಿಳೆಯನ್ನು LUMHSಗೆ ಕರೆತಂದಿತು. ಅಲ್ಲಿ ನವಜಾತ ಶಿಶುವಿನ ಉಳಿದ ದೇಹವನ್ನು ತಾಯಿಯ ಗರ್ಭದಿಂದ ಹೊರತೆಗೆದು, ಆಕೆಯ ಜೀವವನ್ನು ಉಳಿಸಲಾಯಿತು. ಮಗುವಿನ ತಲೆ ಒಳಗೆ ಸಿಲುಕಿಕೊಂಡಿತ್ತು. ತಾಯಿಯ ಗರ್ಭಾಶಯವು ಛಿದ್ರವಾಗಿತ್ತು. ಆಕೆಯ ಜೀವವನ್ನು ಉಳಿಸಲು ವೈದ್ಯರು ಆಕೆಯ ಹೊಟ್ಟೆಯ ಆಪರೇಷನ್ ಮಾಡಿ, ಮಗುವಿನ ತಲೆಯನ್ನು ಹೊರತೆಗೆಯಬೇಕಾಯಿತು ಎಂದು ವೈದ್ಯರು ಹೇಳಿದ್ದಾರೆ.

ಭಯಾನಕ ಪ್ರಮಾದ ಹೊರಬಿದ್ದ ಬಳಿಕ ಸಿಂಧ್ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಜುಮಾನ್ ಬಹೋಟೊ ಈ ಪ್ರಕರಣದ ವಿಚಾರಣೆಗೆ ಆದೇಶಿಸಲಾಯಿತು. ಚಚ್ರೋದಲ್ಲಿರುವ ಆರ್‌ಎಚ್‌ಸಿಯಲ್ಲಿ ಸ್ತ್ರೀರೋಗತಜ್ಞರು ಮತ್ತು ಮಹಿಳಾ ಸಿಬ್ಬಂದಿಯ ಅನುಪಸ್ಥಿತಿಯಲ್ಲಿ ಏನಾಯಿತು ಎಂಬುದನ್ನು ವಿಚಾರಣಾ ಸಮಿತಿಗಳು ಕಂಡುಹಿಡಿಯಲಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 am, Tue, 21 June 22