AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ 10 ತಿಂಗಳ ಬಳಿಕ ಗಂಡನ ಅಸಲಿಯತ್ತು ತಿಳಿದು ಆಶ್ಚರ್ಯಗೊಂಡ ಪತ್ನಿ

ಇಂಡೋನೇಷ್ಯಾದ ಮಹಿಳೆಯೊಬ್ಬಳು ಮದುವೆಯಾದ ನಂತರ ತನ್ನ ಗಂಡ ಅಸಲಿಯತ್ತು ತಿಳಿದು ಬೆರಗಾಗಿದ್ದಾಳೆ. ಅದೇನು ಅಸಲಿಯತ್ತು? ಇಲ್ಲಿದೆ ಓದಿ

ಮದುವೆಯಾದ 10 ತಿಂಗಳ ಬಳಿಕ ಗಂಡನ ಅಸಲಿಯತ್ತು ತಿಳಿದು ಆಶ್ಚರ್ಯಗೊಂಡ ಪತ್ನಿ
ಸಾಂಧರ್ಬಿಕ ಚಿತ್ರ
TV9 Web
| Edited By: |

Updated on:Jun 20, 2022 | 5:18 PM

Share

ಮದುವೆಯ ನಂತರ ಸುಖ ಜೀವನ ನಡೆಸಬೇಕಾದ ದಂಪತಿ ಜಗಳವಾಡಿಕೊಂಡು ದೂರಾಗಿದ್ದಾರೆ. ಕಾರಣ ತಿಳಿದರೆ ನೀವು ನಿಜವಾಗಲೂ ಶಾಕ್​​ ಆಗುತ್ತಿರಾ. ಈ ಘಟನೆ ನಡೆದಿದ್ದು ನಮ್ಮ ದೇಶದಲ್ಲಿ ಅಲ್ಲ ಇಂಡೋನೇಷ್ಯಾದಲ್ಲಿ.  ಇಂಡೋನೇಷ್ಯಾದ (Indonesia) ಮಹಿಳೆಯೊಬ್ಬಳು ಮದುವೆಯಾದ (Marriage)  ನಂತರ ತನ್ನ ಗಂಡ (Husband) ಅಸಲಿಯತ್ತು ತಿಳಿದು ಬೆರಗಾಗಿದ್ದಾಳೆ. ಅದೇನು ಅಸಲಿಯತ್ತು? ಇಲ್ಲಿದೆ ಓದಿ

ಮಹಿಳೆಯೊಬ್ಬಳು ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ ಮಾಡಿಕೊಂಡಿದ್ದಳು. ನಂತರ ಆತನನೊಂದಿಗೆ ಡೇಟಿಂಗ್​ ಮಾಡಿದಳು. ಮುಂದೆ ಆ ಪುರುಷ ಆಕೆಯನ್ನು ಗೌಪ್ಯವಾಗಿ ಯಾರಿಗು ತಿಳಿಯದಂತೆ ಮದುವೆಯಾನು. ನಂತರ ದಂಪತಿ ಇಂಡೋನೇಷ್ಯಾದ ದಕ್ಷಿಣ ಸುಮಾತ್ರಾಕ್ಕೆ  ತರೆಳಿದ್ದಾರೆ. ಮದುವೆಯಾಗಿ ಸುಮಾರು 10 ತಿಂಗಳ ನಂತರ ಮಹಿಳೆಗೆ ಗಂಡನ ಅಸಲಿಯತ್ತು ತಿಳಿದಿದೆ. ಅದು ತಾನು ಮದುವೆಯಾಗಿದ್ದು ಪುರುಷನೊಂದಿಗೆ ಅಲ್ಲ ಮಹಿಳೆಯೊಂದಿಗೆ ಎಂದು. ಆ ಮಹಿಳೆ ಶಸ್ತ್ರಚಿಕಿತ್ಸೆ ಮೂಲಕ ತನ್ನ ಲಿಂಗವನ್ನು ಬದಲಿಸಿಕೊಂಡಿದ್ದಾಳೆ ಎಂದು ತಿಳಿದಿದೆ.

ಇದನ್ನು ಓದಿ: ಬಾವಿಗೆ ಬಿದ್ದ ಮಹಿಳೆಯನ್ನು ಪೊಲೀಸ್​​ ಒಬ್ಬರು ರಕ್ಷಸಿದ ಸಾಹಸ ವಿಡಿಯೋ ವೈರಲ್​​; ಇಲ್ಲಿದೆ ವಿಡಿಯೋ

ಅಲ್ಲದೇ ಪತಿ ಪತ್ನಿಗೆ ತವರು ಮನೆಯಿಂದ 15 ಲಕ್ಷ ಹಣ ತರುವಂತೆ ಪೀಡಿಸುತ್ತಿದ್ದನಂತೆ.   ಇದರಿಂದ ಬೇಸತ್ತ ಮಹಿಳೆ ಆತನೊಂದಿಗೆ ತಪ್ಪಿಸಿಕೊಳ್ಳು ಯತ್ನಿಸಿದರು ಸಾದ್ಯವಾಗಲಿಲ್ಲ. ನಂತರ ಮಹಿಳೆಯ ತವರು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ದಂಪತಿಗಳನ್ನು ಪತ್ತೆ ಹಚ್ಚಿದ್ದಾರೆ. ಮಹಿಳೆ ಜೂನ್ 14 ರಂದು ಇಂಡೋನೇಷ್ಯಾದ ಜಂಬಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Mon, 20 June 22