ಬಾವಿಗೆ ಬಿದ್ದ ಮಹಿಳೆಯನ್ನು ಪೊಲೀಸ್ ಒಬ್ಬರು ರಕ್ಷಸಿದ ಸಾಹಸ ವಿಡಿಯೋ ವೈರಲ್; ಇಲ್ಲಿದೆ ವಿಡಿಯೋ
ಉತ್ತರಪ್ರದೇಶದಲ್ಲಿ ಬಾವಿಯಲ್ಲಿ ಬಿದ್ದ ಮಹಿಳೆಯನ್ನು ಪೊಲೀಸ್ ಒಬ್ಬರು ಹಗ್ಗದ ಮುಖಾಂತರ ಕೆಳಗೆ ಇಳಿದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಹೇಗೆ ಇಲ್ಲಿದೆ ನೋಡಿ.
ದೇಶದಲ್ಲಿ ಪರಿಸರ ವಿಕೋಪ (Environmental disaster) ಅಥವಾ ಇನ್ನಾವುದೇರಿತಿಯಾದ ತೊಂದರೆಗಳಾದರೆ ಕೂಡಲೆ ಸ್ಥಳಕ್ಕೆ ಧಾವಿಸೋದು ಪೊಲೀಸರು (Police) ಮತ್ತು ಅಗ್ನಿಶಾಮಕದಳ (Fir Department). ಇಂತಹ ಸಮಯದಲ್ಲಿ ಇವರ ಕಾರ್ಯ ಶ್ಲಾಘನೀಯವಾಗಿರುತ್ತದೆ. ತಮ್ಮ ಜೀವವನ್ನಾದರು ಪಣಕ್ಕೆ ಇಟ್ಟು ಜನರ ಪ್ರಾಣವನ್ನು ರಕ್ಷಣೆ ಮಾಡುತ್ತಾರೆ. ಒಂದು ರೀತಿ ಇವರು ರಿಯಲ್ ಹೀರೋಗಳು. ಈ ರಿಯಲ್ ಹೀರೋಗಳು ಪ್ರತಿನಿತ್ಯ ಒಂದೊಂದು ಸಾಹಸ ಕಾರ್ಯ ಮಾಡುತ್ತಾ ಜನರ ಪ್ರಾಣಗಳನ್ನು ಉಳಿಸಿಸುತ್ತಾರೆ.
ಹೀಗೆ ಉತ್ತರಪ್ರದೇಶದಲ್ಲಿ ಬಾವಿಯಲ್ಲಿ ಬಿದ್ದ ಮಹಿಳೆಯನ್ನು ಪೊಲೀಸ್ ಒಬ್ಬರು ಹಗ್ಗದ ಮುಖಾಂತರ ಕೆಳಗೆ ಇಳಿದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಹೇಗೆ ಇಲ್ಲಿದೆ ನೋಡಿ. ಉತ್ತರ ಪ್ರದೇಶದ ಹಮೀರ್‌ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಾನಸಿಕ ಅಸ್ಮಿತ ಮಹಿಳೆಯೊಬ್ಬರು ಪಾಳು ಬಿದ್ದ ಬಾಯಿಯಲ್ಲಿ ಬಿದ್ದಿದ್ದಾರೆ. ಕೂಡಲೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಲು ಮುಂದಾಗಿದ್ದಾರೆ.
ಇದನ್ನು ಓದಿ: ಸಂಗಾತಿಯ ಬದಲು ಡೇಟಿಂಗ್ ಆ್ಯಪ್ನಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ವ್ಯಕ್ತಿ! ವಿ ಆರ್ ನಾಟ್ ಸೇಮ್ ಬ್ರೊ
A job 'WELL' done
Responding to a distress call to rescue a woman who had jumped into a well, @hamirpurpolice swiftly reached the place & rescued her using available resources. Please Dial 112 in case of any emergency. #UPPCares pic.twitter.com/OJNItNlFqD
— UP POLICE (@Uppolice) June 18, 2022
ಕೂಡಲೆ ಹಗ್ಗವನ್ನು ಬಳಸಿ ಪೊಲೀಸ್ ಒಬ್ಬರು ಬಾವಿಯೊಳಗೆ ಇಳಿದಿದ್ದಾರೆ. ನಂತರ ಮಹಿಳೆಯನ್ನು ಮೇಲೆಕ್ಕೆ ಎತ್ತಿ, ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕುಟುಂಬಸ್ಥರ ಜೊತೆ ಕಳುಹಿಸಿದ್ದಾರೆ. ಪೊಲೀಸ್ರ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘಟನೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋವನ್ನು ಯುಪಿ ಪೊಲೀಸ್ರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ ದಯವಿಟ್ಟು 112 ಅನ್ನು ಡಯಲ್ ಮಾಡಿ, ”ಎಂದು ಬರೆದುಕೊಂಡಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ