Viral Photo: ಸಂಗಾತಿಯ ಬದಲು ಡೇಟಿಂಗ್ ಆ್ಯಪ್​ನಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ವ್ಯಕ್ತಿ! ವಿ ಆರ್ ನಾಟ್ ಸೇಮ್ ಬ್ರೊ

ಮುಂಬೈನಲ್ಲಿ ಬಾಡಿಗೆಗೆ ಸ್ಥಳವನ್ನು ಹುಡುಕಲು ಡೇಟಿಂಗ್ ಆ್ಯಪ್ ಬಂಬಲ್ ಅನ್ನು ಬಳಸುವ ಕೇರಳದ ವ್ಯಕ್ತಿಯೊಬ್ಬರ ಪ್ರೊಫೈಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಡೇಟಿಂಗ್ ಆ್ಯಪ್​ನಲ್ಲಿ ಸಂಗಾತಿ ಹುಡುಕುವವರಿಗೆ ವಿ ಆರ್ ನಾಟ್ ಸೇಮ್ ಬ್ರೊ ಎಂಬಂತಿದೆ ಈ ವ್ಯಕ್ತಿಯ ನಡೆ.

Viral Photo: ಸಂಗಾತಿಯ ಬದಲು ಡೇಟಿಂಗ್ ಆ್ಯಪ್​ನಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ವ್ಯಕ್ತಿ! ವಿ ಆರ್ ನಾಟ್ ಸೇಮ್ ಬ್ರೊ
ಡಂಬಲ್ ಲೋಗೊ ಮತ್ತು ವ್ಯಕ್ತಿಯ ಪ್ರೊಫೈಲ್
Follow us
TV9 Web
| Updated By: Rakesh Nayak Manchi

Updated on:Jun 20, 2022 | 10:59 AM

ಡೇಟಿಂಗ್ ಆ್ಯಪ್ (Dating App)​​ನಲ್ಲಿ ಎಲ್ಲರೂ ಹುಡುಗ, ಹುಡಿಗಿ ಅಥವಾ ಸಂಗಾತಿಯನ್ನು ಹುಡುಕಾಡುತ್ತಿದ್ದರೆ ಇಲ್ಲೊಬ್ಬ ಡಿಫರೆಂಟ್ ಫರ್ಸನ್​ ಬಾಡಿಗೆಗೆ ಮನೆಯನ್ನು ಕೇಳುತ್ತಿದ್ದಾನೆ. ಡೇಟಿಂಗ್ ಆ್ಯಪ್​ನಲ್ಲಿ ಸಂಗಾತಿ ಹುಡುಕುವವರಿಗೆ ವಿ ಆರ್ ನಾಟ್ ಸೇಮ್ ಬ್ರೊ ಎಂಬಂತಿದೆ ಈ ವ್ಯಕ್ತಿಯ ನಡೆ. ಡೇಟಿಂಗ್ ಆ್ಯಪ್​​ನಲ್ಲಿ ಬಾಡಿಗೆ ಮನೆ ಹುಡುಕಾಡುವ ಮೂಲಕ ಈತ ನೆಟ್ಟಿಗರ ಮೇಲೆ ಎಷ್ಟು ಪ್ರಭಾವಿತನಾಗಿದ್ದಾನೆ ಎಂದರೆ, ಇಂಥ ಒಳ್ಳೆಯ ವಿಚಾರಗಳಿಗೂ ಜಾಲತಾಣವನ್ನು ಬಳಕೆ ಮಾಡಕೊಳ್ಳಬಹುದಲ್ವಾ ಎಂಬುದನ್ನು ಅರಿತುಕೊಳ್ಳುವಂತೆ ಮಾಡಿದ್ದಾರೆ.

ಇದನ್ನೂ ಓದಿ: Viral Video: ಮ್ಯಾನ್​ಹೋಲ್​ಗೆ ಬಿದ್ದ ದಂಪತಿ, ಇದು ‘ಪ್ರಧಾನ ಮಂತ್ರಿ ಈಜುಕೊಳ ಯೋಜನೆ’ ಎಂದ ನೆಟ್ಟಿಗರು!

ಮುಂಬೈನಲ್ಲಿ ಬಾಡಿಗೆಗೆ ಸ್ಥಳವನ್ನು ಹುಡುಕಲು ಡೇಟಿಂಗ್ ಆ್ಯಪ್ ಬಂಬಲ್(Dubmle) ಅನ್ನು ಬಳಸುವ ಕೇರಳದ ವ್ಯಕ್ತಿಯೊಬ್ಬರ ಪ್ರೊಫೈಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವರು ಪ್ಲಾಟ್‌ಫಾರ್ಮ್ ಅನ್ನು ಬಳಕೆ ಮಾಡಿಕೊಂಡಿರುವ ರೀತಿ ನೋಡಿ ನೆಟ್ಟಿಗರು ಅಚ್ಚರಿಗೊಂಡಿರುವುದಂತು ಸತ್ಯ. ಕೇರಳ ವ್ಯಕ್ತಿಯ ಪ್ರೊಫೈಲ್ ಸ್ಕ್ರೀನ್​ಶಾಟ್​ ಅನ್ನು ಅನಾ ಡಿ ಆಮ್ರಾಸ್ ಎಂಬವರು ತಮ್ಮ  ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ”ನೀವು ಬಂಬಲ್‌ನಲ್ಲಿ ಆತ್ಮ ಸಂಗಾತಿಯನ್ನು ಹುಡುಕುತ್ತಿದ್ದೀರಿ, ಅವರು ಬಾಂಬೆಯಲ್ಲಿ ಬಾಡಿಗೆಗೆ ಸ್ಥಳವನ್ನು ಹುಡುಕುತ್ತಿದ್ದಾರೆ” ಎಂದು ಶೀರ್ಪಿಕೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸಿದ ಜಲಪಾತ, ಸೇತುವೆ ಮೇಲಿಂದ ಚಿಮ್ಮಿದ ನೀರು!

ಕೇರಳದ ವ್ಯಕ್ತಿಯ ಪ್ರೊಫೈಲ್​ನಲ್ಲಿ “ಸಪಿಯೋಸೆಕ್ಸುವಲ್ ಅಲ್ಲ. ಮುಂಬೈನಲ್ಲಿ ಫ್ಲಾಟ್‌ಗಾಗಿ ಹುಡುಕುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಮುಂದಿನ ಸ್ಕ್ರೀನ್‌ಶಾಟ್‌ನಲ್ಲಿ ”ನೀವು (ಬಳಕೆದಾರರು) ಮುಂಬೈನಲ್ಲಿದ್ದರೆ ಪಶ್ಚಿಮದ ಕಡೆ ನನಗೆ ಬಾಡಿಗೆ ಮನೆ ಹುಡುಕಲು ಸಹಾಯ ಮಾಡಿ, ನನಗೆ ಹಿಂದಿ ಬರುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ವೈರಲ್ ಆದ ನಂತರ ಹಲವಾರು ಟ್ವಿಟರ್ ಬಳಕೆದಾರರು ಮನುಷ್ಯನ ಜಾಣ್ಮೆಯಿಂದ ಪ್ರಭಾವಿತರಾಗಿದ್ದಾರೆ. ಬಳಕೆದಾರರೊಬ್ಬರು, “ಬಾಂಬೆಯಲ್ಲಿ ಉತ್ತಮ ಫ್ಲಾಟ್‌ಗಿಂತ ಬಂಬಲ್‌ನಲ್ಲಿ ಆತ್ಮ ಸಂಗಾತಿಯನ್ನು ಹುಡುಕಲು ಉತ್ತಮ ಅವಕಾಶವಿದೆ” ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, “ಬಾಂಬೆಯಲ್ಲಿ ಒಂದೂವರೆ ವರ್ಷಗಳಿಂದ ವಾಸಿಸುತ್ತಿದ್ದೇನೆ, ನಾನು ಇದನ್ನು 100 ಪ್ರತಿಶತದಷ್ಟು ಗೌರವಿಸುತ್ತೇನೆ” ಎಂದಿದ್ದಾರೆ. ಮಗದೊಬ್ಬರು, ”ನಾನು ನನ್ನ ಬಂಬಲ್ ಪ್ರೊಫೈಲ್ ಅನ್ನು ತಪ್ಪು ಕಾರಣಗಳಿಗಾಗಿ ಬಳಸುತ್ತಿದ್ದೇನೆ ಎಂದು ಯೋಚಿಸಲು ಪ್ರಾರಂಭಿಸಿದೆ” ಎಂದು ಹೇಳಿಕೊಂಡಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:56 am, Mon, 20 June 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್