10ರೂಪಾಯಿ ನಾಣ್ಯಗಳ ಮೂಲಕ 6ಲಕ್ಷ ಮೌಲ್ಯದ ಕಾರು ಖರೀದಿಸಿದ ವ್ಯಕ್ತಿ, ಹೇಗೆ ಗೊತ್ತಾ?
ತಮೀಳುನಾಡಿನ ಆರೂರ್ ವೆಟ್ರಿವೇಲ್ ಎಂಬ ವ್ಯಕ್ತಿ 10 ರೂಪಾಯಿ ನಾಣ್ಯಗಳ ಮೂಲಕ 6ಲಕ್ಷ ರೂ ಬೆಲೆಯ ಕಾರನ್ನು ಖರೀದಿಸಿದ್ದಾರೆ. ಹೇಗೆ ಇಲ್ಲಿದೆ ಓದಿ.
ಚನ್ನೈ: 10ರೂಪಾಯಿ ನಾಣ್ಯಗಳನ್ನು (10Rs Coin) ಜನರು ಸ್ವೀಕರಿಸುತ್ತಿಲ್ಲ. ಅಂಗಡಿ (Shop) ಮುಗ್ಗಟ್ಟುಗಳಲ್ಲೂ ಕೂಡ 10 ರೂಪಾಯಿ ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ 10 ರೂಪಾಯಿ ನಾಣ್ಯಗಳನ್ನು ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಸಂಬಂಧ ಆರ್‌ಬಿಐ (RBI) 10ರೂಪಾಯಿ ನಾಣ್ಯಗಳು ಮಾನ್ಯವಾಗಿವೆ ಅವುಗಳನ್ನು ಬಳಸಬಹದು ಎಂದು ಹೇಳಿದೆ. ಆರ್‌ಬಿಐ ಸ್ಪಷ್ಟನೆ ನೀಡಿದ್ದರೂ ಕೂಡ 10ರೂಪಾಯಿ ನಾಣ್ಯಗಳನ್ನು ಜನರು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇಲ್ಲಿ ಒಬ್ಬ ವ್ಯಕ್ತಿ 10 ರೂಪಾಯಿ ನಾಣ್ಯಗಳ ಮೂಲಕ 6ಲಕ್ಷ ರೂ ಬೆಲೆಯ ಕಾರನ್ನು ಖರೀದಿಸಿದ್ದಾರೆ. ಹೌದು ಇದು ಆಶ್ಚರ್ಯಕರ ಸಂಗತಿಯಾದರು ಕೂಡ ಸತ್ಯ.
ತಮಿಳುನಾಡಿನ ಆರೂರ್ ವೆಟ್ರಿವೇಲ್ ಎಂಬ ವ್ಯಕ್ತಿ 10 ರೂಪಾಯಿ ನಾಣ್ಯಗಳ ಮೂಲಕ 6ಲಕ್ಷ ರೂ ಬೆಲೆಯ ಕಾರನ್ನು ಖರೀದಿಸಿದ್ದಾರೆ. ಹೇಗೆ ಇಲ್ಲಿದೆ ಓದಿ. ಆರೂರ್ ವೆಟ್ರಿವೇಲ್ ತಾಯಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರಿಗೆ ಗ್ರಾಹಕರು 10 ರೂಪಾಯಿ ನಾಣ್ಯಗಳನ್ನು ನೀಡಿ ವಸ್ತುಗಳನ್ನು ಖರೀದಿಸಿದ್ದಾರೆ. ಆದರೆ ಆ ನಾಣ್ಯವನ್ನು ಬೇರೆಯೊಬ್ಬ ಗ್ರಾಹಕರಿಗೆ ನೀಡಲು ಹೋದರೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ನಾಣ್ಯಗಳು ಮನೆಯಲ್ಲೇ ಉಳಿಯುತ್ತಾ ಹೋದವು. ಆ ನಾಣ್ಯಗಳೊಂದಿಗೆ ಮನೆ ಮಕ್ಕಳು ಆಟವಾಡಲು ಪ್ರಾರಂಭಿಸಿದರು. ಒಂದು ರೀತಿ ನಾಣ್ಯಗಳು ನಿರುಪಯೋಗ ವಸ್ತುಗಳಂತೆ ಆದವು.
ಇದನ್ನು ಓದಿ: ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸಿದ ಜಲಪಾತ, ಸೇತುವೆ ಮೇಲಿಂದ ಚಿಮ್ಮಿದ ನೀರು!
ಇದನ್ನು ಕಂಡ ಆರೂರ್ ವೆಟ್ರಿವೇಲ್ ಈ ನಾಣ್ಯದ ಮೂಲಕ 6ಲಕ್ಷ ಮೌಲ್ಯದ ಕಾರನ್ನು ಖರೀದಿಸಲು ನಿರ್ಧರಿಸಿದರು. ನಂತರ ಒಂದು ತಿಂಗಳ ಕಾಲ 10 ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ನಂತರ ಸಂಗ್ರಹ 6ಲಕ್ಷ ಆದ ಮೇಲೆ ಕಾರ್ ಖರೀದಿಸಲು ಮುಂದಾದರು. ಇಲ್ಲೆ ಇರೋದು ತಿರುವು ಆರೂರ್ ವೆಟ್ರಿವೇಲ್ ಈ ಹಣದಿಂದ ಕಾರು ಖರೀದಿಸಲು ಧರ್ಮಪುರಿಯ ಪ್ರಮುಖ ವಾಹನ ಡೀಲರ್‌ನ ಬಳಿ ಹೋದಾಗ ಡೀಲರ್ಗೆ ಆಶ್ಚರ್ಯವಾಯಿತು ಮತ್ತು ಕಾರು ಖರೀದಿಸಿ ಕೊಡಲು ಹಿಂಜರಿದರು. ನಂತರ ಒಪ್ಪಿಕೊಂಡರು. ಹೀಗೆ ಆರೂರ್ ವೆಟ್ರಿವೇಲ್ ಕಾರು ಖರೀದಿಸಿದರು.
ಇದನ್ನು ಓದಿ: ನೀವು ಇದುವರೆಗೆ ನೋಡಿರದಂಥ ವಿಭಿನ್ನ ಸ್ಕೂಟರ್ ಇಲ್ಲಿದೆ ನೋಡಿ, ವಿಡಿಯೋ ವೈರಲ್
ಈ ಸಬಂಧ ಟಿಂಡಿಯಾ ಟುಡೆ ಜೊತೆ ಮಾತನಾಡಿದ ಆರೂರ್ ವೆಟ್ರಿವೇಲ್ “ನನ್ನ ತಾಯಿ ಅಂಗಡಿಯನ್ನು ನಡೆಸುತ್ತಿದ್ದು ಗ್ರಾಹಕರು ನಾಣ್ಯಗಳನ್ನು ಸ್ವೀಕರಿಸಲು ಸಿದ್ಧರಿಲ್ಲ ಹೀಗಾಗಿ ಮನೆಯಲ್ಲಿ ನಾಣ್ಯಗಳ ರಾಶಿ ಇತ್ತು. ನಾಣ್ಯಗಳನ್ನು ಬ್ಯಾಂಕ್‌ಗಳಲ್ಲಿಯೂ ಸ್ವೀಕರಿಸಲಿಲ್ಲ. ನಾಣ್ಯಗಳು ನಿಷ್ಪ್ರಯೋಜಕ ಎಂದು ಆರ್‌ಬಿಐ ಹೇಳದಿರುವಾಗ, ಬ್ಯಾಂಕ್‌ಗಳು ಏಕೆ ಅವುಗಳನ್ನು ಸ್ವೀಕರಿಸುತ್ತಿಲ್ಲ? ನಾವು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ