Viral Video: ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸಿದ ಜಲಪಾತ, ಸೇತುವೆ ಮೇಲಿಂದ ಚಿಮ್ಮಿದ ನೀರು!

ಮೇಘಾಲಯ ಮೌಸಿನ್ರಾಮ್‌ನಲ್ಲಿ ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಜಲಪಾತವೊಂದು ಭೋರ್ಗರೆದಿದೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಈ ಸುದ್ದಿ ಮೂಲಕ ವಿಡಿಯೋ ವೀಕ್ಷಣೆ ಮಾಡಿ.

Viral Video: ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸಿದ ಜಲಪಾತ, ಸೇತುವೆ ಮೇಲಿಂದ ಚಿಮ್ಮಿದ ನೀರು!
ಭೋರ್ಗರೆದ ಜಲಪಾತ
Follow us
TV9 Web
| Updated By: Rakesh Nayak Manchi

Updated on:Jun 19, 2022 | 6:41 PM

ಮೇಘಾಲಯ ಮೌಸಿನ್ರಾಮ್‌ (Mawsynram)ನಲ್ಲಿ ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸುವ ಜಲಪಾತ (Waterfall)ದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಒಂದು ವಾರದಿಂದ ಈಶಾನ್ಯ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಜೂನ್ 16 ರಂದು ಬೆಳಿಗ್ಗೆ ಆರಂಭವಾದ ಮಳೆ ನಿರಂತರವಾಗಿ 24 ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ. ಈ ಅವಧಿಯಲ್ಲಿ ಭೂಮಿಯ ಮೇಲಿನ ಅತ್ಯಂತ ತೇವಭರಿತ ಸ್ಥಳವಾದ ಮೇಘಾಲಯದ ಮೌಸಿನ್​ರಾಮ್​ನಲ್ಲಿ ದಾಖಲೆಯ 100 ಸೆಂ.ಮೀ ಮಳೆಯಾಗಿದ್ದು, ಜಲಪಾತವೊಂದು ಭೋರ್ಗರೆದಿದೆ.

ಮೌಸಿನ್​ರಾಮ್​ ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಜಲಪಾತ ಗರ್ಜಿಸಲು ಪ್ರಾರಂಭಿಸಿದ್ದು, ನೀರಿನ ರಭಸ ಎಷ್ಟಿತ್ತೆಂದರೆ ಸೇತುವೆ ಮೇಲಿನಿಂದ ನೀರು ಚಿಮ್ಮಿದೆ. ಜಲಪಾತದ ಭೂರ್ಗರೆತ ಹಾಗೂ ಸೇತುವೆ ಮೇಲಿಂದ ನೀರು ಚಿಮ್ಮುವ ದೃಶ್ಯವನ್ನು ವಾಹನ ಸವಾರರು ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: Viral Video: ಬಾವಿಗೆ ಬಿದ್ದ ಚಿರತೆ, ಅರಣ್ಯಾಧಿಕಾರಿಗಳ ರಕ್ಷಣಾ ಕಾರ್ಯಕ್ಕೆ ನೆಟ್ಟಿಗರ ಶ್ಲಾಘನೆ

ಇದೀಗ ಜಲಪಾತದ ಭೂರ್ಗರೆತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನೋಡುವಂತೆ, ಜಲಪಾತದಿಂದ ಉಕ್ಕಿದ ನೀರು ಸೇತುವೆ ಮೇಲಿಂದ ಚಿಮ್ಮುವುದನ್ನು ಕಾಣಬಹುದು. ವಿಡಿಯೋ ಚಿತ್ರೀಕರಿಸಿದ ವಾಹನ ಸವಾರರೊಬ್ಬರು ಕಾರಿನಲ್ಲಿ ಕುಳಿತುಕೊಂಡು “ಇದು ಮೋಡವಲ್ಲ, ನೀರು” ಎಂದು ಹೇಳುವುದನ್ನು ಕೇಳಬಹುದು. ಇನ್ನೊಂದು ಕಡೆ ಮಹಿಳೆಯೊಬ್ಬಳು “ಓ ಮೈ ಗಾಡ್” ಎಂದು ಪದೇಪದೇ ಹೇಳುವುದನ್ನು ಕೇಳಬಹುದು.

ಆದಾಗ್ಯೂ, ಕಾರಿನ ಚಾಲಕ ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಪ್ರಾರಂಭಿಸಿದನು. ಗಾಬರಿಗೊಂಡ ಸಹ ಪ್ರಯಾಣಿಕರೊಬ್ಬರು, ಕಾರಿನಲ್ಲಿ ಮಕ್ಕಳಿದ್ದಾರೆ, ಕಾರನ್ನು ಮುಂದಕ್ಕೆ ಕೊಂಡೊಯ್ಯದಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Viral Video: ನೀವು ಇದುವರೆಗೆ ನೋಡಿರದಂಥ ವಿಭಿನ್ನ ಸ್ಕೂಟರ್ ಇಲ್ಲಿದೆ ನೋಡಿ, ವಿಡಿಯೋ ವೈರಲ್

ವರದಿಗಳ ಪ್ರಕಾರ, ಕಳೆದ 81 ವರ್ಷಗಳಲ್ಲಿ ಮೌಸಿನ್‌ರಾಮ್‌ನಲ್ಲಿ 24 ಗಂಟೆಗಳ ಅವಧಿಯಲ್ಲಿ ದಾಖಲಾದ ಅತಿ ಹೆಚ್ಚು ಮಳೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಗೆ 39 ಜನರು ಸಾವನ್ನಪ್ಪಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಒಟ್ಟಾರೆ ಈ ಮುಂಗಾರು ಹಂಗಾಮಿನಲ್ಲಿ 90 ಮಂದಿ ಸಾವನ್ನಪ್ಪಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Sun, 19 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ