Viral Video: ಬಾವಿಗೆ ಬಿದ್ದ ಚಿರತೆ, ಅರಣ್ಯಾಧಿಕಾರಿಗಳ ರಕ್ಷಣಾ ಕಾರ್ಯಕ್ಕೆ ನೆಟ್ಟಿಗರ ಶ್ಲಾಘನೆ

ತೆರೆದ ಬಾವಿಗೆ ಬಿದ್ದ ಗಂಡು ಚಿರತೆಯನ್ನ ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದು, ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಚಿರತೆ ರಕ್ಷಣೆಯ ವಿಡಿಯೋ ಇಲ್ಲಿದೆ ನೋಡಿ.

Viral Video: ಬಾವಿಗೆ ಬಿದ್ದ ಚಿರತೆ, ಅರಣ್ಯಾಧಿಕಾರಿಗಳ ರಕ್ಷಣಾ ಕಾರ್ಯಕ್ಕೆ ನೆಟ್ಟಿಗರ ಶ್ಲಾಘನೆ
ಚಿರತೆಯ ರಕ್ಷಣೆ
Follow us
| Updated By: Rakesh Nayak Manchi

Updated on: Jun 19, 2022 | 3:58 PM

ವೈರಲ್ ವಿಡಿಯೋ: ತೆರೆದ ಬಾಯಿಯೊಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರಕ್ಷಣೆ ವೇಳೆ ಗಾಬರಿಯಿಂದಲೋ ಅಥವಾ ಕೋಪದಿಂದಲೋ ಏನೋ ಭಾರಿ ಶಬ್ದದ ಮೂಲಕ ಚಿರತೆ ಕೂಗಾಡಿದೆ. ಇದರ ವಿಡಿಯೋವನ್ನುಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಶೀರ್ಷಿಕೆಯಲ್ಲಿ ಜನರಿಗೆ ಎಚ್ಚರಿಕೆಯ ಮನವಿಯನ್ನು ಮಾಡಿದ್ದಾರೆ.

ಇದನ್ನೂ ಓದಿ: Viral Video: ನೀವು ಇದುವರೆಗೆ ನೋಡಿರದಂಥ ವಿಭಿನ್ನ ಸ್ಕೂಟರ್ ಇಲ್ಲಿದೆ ನೋಡಿ, ವಿಡಿಯೋ ವೈರಲ್

ವಿಡಿಯೋ ಹಂಚಿಕೊಳ್ಳುವ ವೇಳೆ ಸುಸಂತ ನಂದಾ ಅವರು ತೆರೆದ ಬಾವಿಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ. “ಕಾಡು ಪ್ರಾಣಿಗಳಿಗೆ ಇಂತಹ ಆಘಾತವನ್ನು ತಪ್ಪಿಸಲು ದಯವಿಟ್ಟು ತೆರೆದ ಬಾವಿಗಳನ್ನು ಮುಚ್ಚಿ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.  ವಿಡಿಯೋದಲ್ಲಿ ಗಮನಿಸಿದಂತೆ, ತೆರೆದ ಬಾವಿಗೆ ಬೋನ್​ ಅನ್ನು ಹಗ್ಗದ ಸಹಾಯದಿಂದ ಇಳಿಸಲಾಗಿದೆ. ಆ ಬೋನಿನೊಳಗೆ ಗಂಡು ಚಿರತೆ ಸೇರಿಕೊಂಡ ನಂತರ ಜಾಗರೂಕತೆಯಿಂದ ಮೇಲೆತ್ತಲಾಗಿದೆ. ಈ ವೇಳೆ ಚಿರತೆ ಚೀರಾಡುವುದನ್ನು ನೋಡಬಹುದು.

ಭಾನುವಾರ ಹಂಚಿಕೊಂಡ ವಿಡಿಯೋ ಟ್ವಿಟರ್‌ನಲ್ಲಿ 13,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಹಲವು ನೆಟ್ಟಿಗರು ಶ್ಲಾಘಿಸಿದ್ದಾರೆ. ”ಅರಣ್ಯ ಇಲಾಖೆ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ವಂದನೆಗಳು. ತೆರೆದ ಬಾವಿಗಳನ್ನು ಮುಚ್ಚುವ ಅಥವಾ ಬೇಲಿ ಹಾಕುವ ಬಗ್ಗೆ ನಾವು ಜನರಿಗೆ ತಿಳುವಳಿಕೆ ನೀಡಲು ಪ್ರಾರಂಭಿಸಬೇಕು” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:Viral Video: ಸುರಿದ ಧಾರಾಕಾರ ಮಳೆಗೆ ರಸ್ತೆಗೆ ಬಂದ ಮೀನುಗಳು! ಎಲ್ಲಿ ಇದು ಗೊತ್ತಾ?

ರಾಜ್ಯದ ಶೇ.90 ರಷ್ಟು ರೈತರು ಬಾವಿಗಳನ್ನು ಮುಚ್ಚಲು ಶಕ್ತರಾಗಿಲ್ಲ ಎಂದು ಬಳಕೆದಾರರು ಹೇಳಿದರು. “ಮಹಾರಾಷ್ಟ್ರದಲ್ಲಿ 90% ರೈತರು ಕನಿಷ್ಠ ಆದಾಯದಿಂದ ತಮ್ಮನ್ನು ತಾವು ಪೋಷಿಸಲು ಸಾಧ್ಯವಾಗುತ್ತಿಲ್ಲ. ಅವರು ತೆರೆದ ಬಾವಿಗಳನ್ನು ಮುಚ್ಚಲು ಹೇಗೆ ಖರ್ಚು ಮಾಡುತ್ತಾರೆ? ಬಾವಿಗಳನ್ನು ಮುಚ್ಚಲು ಸರ್ಕಾರವು ಸಬ್ಸಿಡಿಯನ್ನು ವಿಸ್ತರಿಸಬೇಕು”ಎಂದು ಬರೆದಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ