Assam Flood: ಅಸ್ಸಾಂನ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಹೋದ ಇಬ್ಬರು ಪೊಲೀಸರು ನೀರುಪಾಲು; ಮೃತದೇಹಗಳು ಪತ್ತೆ
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭಾನುವಾರ ಮತ್ತಷ್ಟು ಹದಗೆಟ್ಟಿದ್ದು, 33 ಜಿಲ್ಲೆಗಳಲ್ಲಿ ಪೀಡಿತರ ಸಂಖ್ಯೆ 42.28 ಲಕ್ಷಕ್ಕೆ ಏರಿದೆ. ಐದು ದಿನಗಳಲ್ಲಿ ಸಾವಿನ ಸಂಖ್ಯೆ 34ಕ್ಕೆ ಏರಿದೆ.
ನವದೆಹಲಿ: ಅಸ್ಸಾಂನಲ್ಲಿ ಮಳೆಯ (Assam Rains) ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಹೋದಾಗ ಭಾನುವಾರ ರಾತ್ರಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಪೊಲೀಸರ ಮೃತದೇಹಗಳು ಇಂದು ಪತ್ತೆಯಾಗಿವೆ.
ಅಸ್ಸಾಂ ಪೊಲೀಸರ ಪ್ರಕಾರ, ಕಂಪುರ್ ಪೊಲೀಸ್ ಠಾಣೆಯ ತಂಡವು ಭಾನುವಾರ ತಡರಾತ್ರಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಸಬ್ ಇನ್ಸ್‌ಪೆಕ್ಟರ್ ಸಮುಜ್ಜಲ್ ಕಾಕೋಟಿ ಮತ್ತು ಕಾನ್‌ಸ್ಟೆಬಲ್ ರಾಜೀವ್ ಬೊರ್ಡೊಲೊಯ್ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಇಂದು ಮುಂಜಾನೆ ರಾಜೀವ್ ಬೊರ್ಡೊಲೊಯ್ ಅವರ ದೇಹವನ್ನು ಪತ್ತೆಹಚ್ಚಲಾಯಿತು. ಆದರೆ, ಸಮುಜ್ಜಲ್ ಕಾಕೋಟಿ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹವನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಪತ್ತೆಹಚ್ಚಿದೆ.
ನಿಮ್ಮ ಧೈರ್ಯ ಮತ್ತು ಶೌರ್ಯಕ್ಕೆ ನಾವು ವಂದಿಸುತ್ತೇವೆ. ಜನರನ್ನು ರಕ್ಷಿಸಲು ಹೋಗಿ ಪ್ರಾಣ ತ್ಯಾಗ ಮಾಡಿದ್ದೀರಿ. ನಿಮ್ಮ ನಿಸ್ವಾರ್ಥ ಕಾರ್ಯವು ಅಸ್ಸಾಂ ಪೊಲೀಸ್ ಇಲಾಖೆಯ ಮುಂದಿನ ತಲೆಮಾರಿಗೆ ಸ್ಪೂರ್ತಿಯಾಗಲಿದೆ. ನಿಮಗೆ ನಾವು ಕೃತಜ್ಞತೆಯಿಂದ ತಲೆಬಾಗುತ್ತೇವೆ ಎಂದು ಅಸ್ಸಾಂ ವಿಶೇಷ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಿಪಿ ಸಿಂಗ್ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Karnataka Rain: ಕರ್ನಾಟಕದ ಉತ್ತರ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಚದುರಿದ ಮಳೆ; ಅಸ್ಸಾಂನಲ್ಲಿ ರೆಡ್ ಅಲರ್ಟ್ ಘೋಷಣೆ
ಅಸ್ಸಾಂನಲ್ಲಿ ಭಾರೀ ಧಾರಾಕಾರ ಮಳೆಯ ನಂತರ 33 ಜಿಲ್ಲೆಗಳ ಕನಿಷ್ಠ 42.28 ಲಕ್ಷ ಜನರು ತೀವ್ರ ಪ್ರವಾಹ ಅಥವಾ ಭೂಕುಸಿತದಿಂದ ಸಂತ್ರಸ್ತರಾಗಿದ್ದಾರೆ. ನಾಗಾಂಬ್ ಜಿಲ್ಲೆಯ ಕಂಪುರ್ ಕೊಪೋಲಿ ನದಿಯ ನೀರಿನ ಮಟ್ಟವು ಅತ್ಯಂತ ಅಪಾಯಕಾರಿ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದೆ.
We salute your courage and bravery UB Constable Rajib Bordoloi of Nagaon DEF. You sacrificed your life without batting an eyelid. Your selfless act would be an inspiration to future generations of @assampolice We bow our head in grief and gratitude. Om Shanti ? pic.twitter.com/jB3i2ARlHM
— GP Singh (@gpsinghips) June 20, 2022
ಭಾನುವಾರ ತಡರಾತ್ರಿ ಅಸ್ಸಾಂನ ನಾಗಾಂವ್ ಜಿಲ್ಲೆಯ ಕಂಪುರ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಮತ್ತು ಕಾನ್‌ಸ್ಟೆಬಲ್ ಸೇರಿದಂತೆ ಇಬ್ಬರು ಪೊಲೀಸರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಘಟನೆ ನಡೆದಾಗ ಪೊಲೀಸರು ಪ್ರವಾಹ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ರಾತ್ರಿಯ ಶೋಧ ಕಾರ್ಯಾಚರಣೆಯ ನಂತರ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಇಬ್ಬರೂ ಪೊಲೀಸರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
We salute your courage and bravery Sub Inspector Samujjal Kakoti. You sacrificed your life without batting an eyelid. Your selfless act would be an inspiration to future generations of @assampolice We bow our head in grief and gratitude. Om Shanti ? pic.twitter.com/TxLxJuHYzC
— GP Singh (@gpsinghips) June 20, 2022
ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾಗ ಪ್ರವಾಹದ ನೀರಿನ ಬಲವಾದ ಪ್ರವಾಹಕ್ಕೆ ಕಾನ್‌ಸ್ಟೆಬಲ್ ಬೊರ್ಡೊಲೊಯ್ ಕೊಚ್ಚಿಕೊಂಡು ಹೋಗಿದ್ದಾರೆ. ಪ್ರಭಾರಿ ಅಧಿಕಾರಿ ಕಾಕೋಟಿ ಅವರು ತಕ್ಷಣ ನೀರಿಗೆ ಧುಮುಕಿ, ಕಾನ್ಸ್‌ಟೇಬಲ್‌ನನ್ನು ರಕ್ಷಿಸಲು ಮುಂದಾದರು. ಆದರೆ, ಪ್ರವಾಹದಿಂದಾಗಿ ಅವರು ಕೂಡ ಕೊಚ್ಚಿಹೋಗಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭಾನುವಾರ ಮತ್ತಷ್ಟು ಹದಗೆಟ್ಟಿದ್ದು, 33 ಜಿಲ್ಲೆಗಳಲ್ಲಿ ಪೀಡಿತರ ಸಂಖ್ಯೆ 42.28 ಲಕ್ಷಕ್ಕೆ ಏರಿದೆ. ಐದು ದಿನಗಳಲ್ಲಿ ಸಾವಿನ ಸಂಖ್ಯೆ 34ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಮೂವರು ಮಕ್ಕಳು ಸೇರಿದಂತೆ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಲು ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಸಿವಿಲ್ ಉಪವಿಭಾಗಾಧಿಕಾರಿಗಳೊಂದಿಗೆ ತಮ್ಮ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ವಿಡಿಯೋ ಸಭೆ ನಡೆಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Mon, 20 June 22