Indian Railways: ರೈಲು ಚಲಾಯಿಸುತ್ತಿದ್ದಾಗಲೇ ಹೃದಯ ಸ್ತಂಭನವಾಗಿ ಸಾವನ್ನಪ್ಪಿದ ಚಾಲಕ
ಹರಿಶ್ಚಂದ್ರ ಶರ್ಮ ಕಾನ್ಪುರದ ಕಡೆಗೆ ರೈಲನ್ನು ಚಲಾಯಿಸುತ್ತಿದ್ದಾಗ ಕಾಸಿಂಪುರ ಹಾಲ್ಟ್ ಬಳಿ ಇದ್ದಕ್ಕಿದ್ದಂತೆ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಹೃದಯ ಸ್ತಂಭನವಾಗಿದೆ.
ಅಮೇಥಿ: ಪ್ರತಾಪ್‌ಗಢ- ಕಾನ್ಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (Pratapgarh-Kanpur Intercity Express) ರೈಲಿನಲ್ಲಿ ರೈಲು ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯ ಸ್ತಂಭನವಾಗಿದೆ. ಇಂದು ಶುಕ್ರವಾರ ರೈಲು ಚಲಾಯಿಸುವಾಗ ಇದ್ದಕ್ಕಿದ್ದಂತೆ ಚಾಲಕ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತಪಟ್ಟಿರುವ ರೈಲು ಚಾಲಕನನ್ನು 46 ವರ್ಷದ ಪರಶುರಾಮಪುರ ಚಿಲ್ಬಿಲದ ಹರಿಶ್ಚಂದ್ರ ಶರ್ಮಾ ಎಂದು ಗುರುತಿಸಲಾಗಿದೆ.
ಹರಿಶ್ಚಂದ್ರ ಶರ್ಮ ಕಾನ್ಪುರದ ಕಡೆಗೆ ರೈಲನ್ನು ಚಲಾಯಿಸುತ್ತಿದ್ದಾಗ ಕಾಸಿಂಪುರ ಹಾಲ್ಟ್ ಬಳಿ ಇದ್ದಕ್ಕಿದ್ದಂತೆ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಹೃದಯ ಸ್ತಂಭನವಾಗಿದೆ ಎಂದು ಗೌರಿಗಂಜ್ ರೈಲ್ವೆ ನಿಲ್ದಾಣದ ಸೂಪರಿಂಟೆಂಡೆಂಟ್ ಪ್ರವೀಣ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ, ರೈಲು ಪ್ರಯಾಣ ಸುಗಮವಾಗಿಸಲು ಭಾರತೀಯ ರೈಲ್ವೆ ತಂತ್ರಜ್ಞಾನವನ್ನು ಹೇಗೆ ಬಳಸುತ್ತಿದೆ ಎಂಬುದು ತಿಳಿದಿದೆಯೇ?
ಆಗ ಕೂಡಲೇ ಆ ರೈಲಿನಲ್ಲಿದ್ದ ಸಹಾಯಕ ಚಾಲಕ ರೈಲನ್ನು ನಿಲ್ಲಿಸಿ ಆ್ಯಂಬುಲೆನ್ಸ್‌ಗೆ ಫೋನ್ ಮಾಡಿದರು. ಆಗ ಹರಿಶ್ಚಂದ್ರ ಶರ್ಮಾ ಅವರನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಈಗಾಗಲೇ ಸಾವನ್ನಪ್ಪಿರುವುದಾಗಿ ಘೋಷಿಸಿದರು ಎನ್ನಲಾಗಿದೆ.
ಹರಿಶ್ಚಂದ್ರ ಶರ್ಮಾ ಅವರಿಗೆ ಹೃದಯ ಸ್ತಂಭನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರತಾಪಗಢದಿಂದ ಮತ್ತೊಬ್ಬ ಲೊಕೊ ಪೈಲಟ್ ಆಗಮನದ ನಂತರ ಆ ರೈಲು ಸ್ಥಳದಿಂದ ಹೊರಟಿತು. ರೈಲು ಚಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಫುರ್ಸತ್‌ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಸೋಂಕರ್ ತಿಳಿಸಿದ್ದಾರೆ.